ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ಅಲ್ಲಿ ಚಿಲಿಪಿಲಿ-2026
– ಬೇಸಿಗೆ ರಜೆಯ ಪ್ರಯುಕ್ತ ವಿಶೇಷ ಶಿಬಿರ: ಮಕ್ಕಳ ಜ್ಞಾನಕ್ಕೆ ಅವಕಾಶ
– 90ರ ದಶಕದ ಜೀವನಶೈಲಿ, ಕೌಶಲ್ಯ ಮತ್ತು ಚಟುವಟಿಕೆಗಳ ಶಿಬಿರ
ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ಅಲ್ಲಿ ಚಿಲಿಪಿಲಿ-2026 ಬೇಸಿಗೆ ರಜೆಯ ಪ್ರಯುಕ್ತ ವಿಶೇಷ ಶಿಬಿರ ಆಯೋಜನೆ ಮಾಡಲಾಗಿದೆ. ಇಂದಿನ ದಿನಮಾನದಲ್ಲಿ ಮಕ್ಕಳು ತಮ್ಮ ರಜಾ ಸಮಯವನ್ನು ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಲ್ಲಿ ತೊಡಗಿಸುವ ಬದಲಾಗಿ ಕೇವಲ ಮೊಬೈಲ್ ನೋಡಿಕೊಂಡು ವ್ಯರ್ಥ ಕಾಲಹರಣ ಮಾಡಿ, ಬಾಲ್ಯದ ಅಮೂಲ್ಯ ಕ್ಷಣಗಳಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳ ಈ ರೀತಿಯ ವರ್ತನೆ ಅವರ ಹೆತ್ತ ತಂದೆ ತಾಯಿಯರಿಗೂ ಕೂಡ ಬಗೆಹರಿಸಲಾಗದ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ.
ಈ ಎಲ್ಲಾ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮತ್ತು ಮಕ್ಕಳು ತಮ್ಮ ರಜಾ ದಿನಗಳನ್ನು ಸದುಪಯೋಗಪಡಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನಲ್ಲಿ 2 ಏಪ್ರಿಲ್ 2026ರ ಗುರುವಾರ, 3 ಏಪ್ರಿಲ್ 2026ರ ಶುಕ್ರವಾರ ಮತ್ತು 4 ಏಪ್ರಿಲ್ 2026ರ ಶನಿವಾರದಂದು ‘ಚಿಲಿಪಿಲಿ-2026’ ಎನ್ನುವ ಶೀರ್ಷಿಕೆಯಡಿಯಲ್ಲಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು ನೆನಪುಗಳನ್ನು ಮೆಲುಕು ಹಾಕಲು, ಸೃಜನಶೀಲತೆಯನ್ನು ಹೆಚ್ಚಿಸಲು ಮತ್ತು ಹೊಸ ಸ್ನೇಹಿತರನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ.
ವಿಭಿನ್ನ ಹೇಗೆ?
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಈ ಬೇಸಿಗೆ ಶಿಬಿರವು ಅತ್ಯಂತ ಮಹತ್ವದಾಗಿದ್ದು, 90ರ ದಶಕದ ಜೀವನಶೈಲಿ, ಕೌಶಲ್ಯ ಮತ್ತು ಚಟುವಟಿಕೆಗಳು ಇಂದಿನ ಮಕ್ಕಳಿಗೆ ನೂತನ ಅನುಭವ ಮತ್ತು ಅರಿವನ್ನು ನೀಡಲಿದ್ದು, ಅವರು ಕೂಡ ಪ್ರಯತ್ನಿಸಲು ಮುಕ್ತ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸಲು ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಇದು ತರಗತಿ,ಸ್ಪರ್ಧೆ, ಅಂಕ ಮತ್ತು ತರಬೇತಿಯ ಯಾಂತ್ರಿಕ ಸಂಗತಿಗಳನ್ನೇ ಪುನರಾವರ್ತಿಸದೆ ಮುಗ್ಧ ಮನಸುಗಳ ಸೃಜನಶೀಲತೆಯನ್ನು ಬೆಳೆಸುವ ಸುಂದರವಾದ, ಸ್ವಚ್ಛಂದವಾದ ವಾತಾವರಣವನ್ನು ಕಲ್ಪಿಸಿಕೊಡಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9036854942








