ಕುಪ್ಪಳಿಯಲ್ಲಿ ಮಂತ್ರ ಮಾಂಗಲ್ಯದಿಂದ ದಂಪತಿಗಳಾದ ನವ ದಂಪತಿ!
– ಹೊಸದುರ್ಗ ತಾಲೂಕಿನ ನಾಗಿನಹಳ್ಳಿಯ ಉಷಾ, ಅಜ್ಜಂಪುರ ತಾಲೂಕಿನ ಹೆಗ್ಗಡಿಹಳ್ಳಿಯ ವಕೀಲ ಪಂಪ ಹೆಚ್ ಎನ್ ಮದುವೆ
– ಕುವೆಂಪು ಊರಲ್ಲಿ ಮಾದರಿ ಮದುವೆ: ಗಣ್ಯರ ಶುಭಾಶಯಗಳು
NAMMUR EXPRESS NEWS
ಹೊಸದುರ್ಗ / ತೀರ್ಥಹಳ್ಳಿ : ಇತ್ತೀಚಿಗಂತೂ ಆಡಂಬರದ ಮದುವೆಗಳ ಸಂಖ್ಯೆಗಳಿಗೆ ಲೆಕ್ಕವಿಲ್ಲ. ಮದುವೆ ಎಂಬುದು ಎರಡು ಕುಟುಂಬಗಳ ತಂದೆ ತಾಯಿಗಳಿಗೆ ತಿಳಿಸಲಾಗದ ಬಾರ ವರದಕ್ಷಿಣೆ ವರೋಪಚಾರ, ಹಳ್ಳಿಗಳಲ್ಲಿ ಮದುವೆ ಮಾಡುವಂತಿಲ್ಲ. ನಗರಗಳ ಕಲ್ಯಾಣ ಮಂಟಪಗಳೆ ಬೇಕು ಒಟ್ಟಾರೆ ಮದುವೆ ಎಂದರೆ ಅದ್ದೂರಿ ಎಂಬಂತಿದೆ ಇಂತಹ ಮದುವೆಗಳ ಮಧ್ಯದಲ್ಲಿಯೂ ಸರಳ ಜೀವನಕ್ಕೆ ಕಾಲಿರಿಸಿ ನವ ಜೀವನದ ಬದುಕು ಕಟ್ಟಿಕೊಂಡಿದ್ದಾರೆ ಈ ದಂಪತಿಗಳು. ಇಂತಹದೊಂದು ಘಟನೆಗೆ ಸಾಕ್ಷಿಯಾದರು ಹೊಸದುರ್ಗ ತಾಲೂಕಿನ ನಾಗಿನಹಳ್ಳಿಯ ಉಷಾ ಹಾಗೂ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮದ ವಕೀಲ ಪಂಪ ಹೆಚ್ ಎನ್.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ರಾಷ್ಟ್ರಕವಿ ಕುವೆಂಪುರವರ ಪುಣ್ಯಭೂಮಿ ಕುಪ್ಪಳ್ಳಿಯಲ್ಲಿನ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಹೇಮಾಂಗಣ ಸಭಾ ಮಂಟಪದಲ್ಲಿ ಕುವೆಂಪುರವರ ಆಶಯದಂತೆ ಮಂತ್ರ ಮಾಂಗಲ್ಯ ಎನ್ನುವ ಪರಿಕಲ್ಪನೆಯಲ್ಲಿ ಸುಂದರ ಪ್ರಕೃತಿಯನ್ನೇ ಮಂತ್ರವಾಗಿಸಿಕೊಂಡು ಈ ಜೋಡಿಗಳು ಗುರು ಹಿರಿಯರ ಸಮ್ಮುಖದಲ್ಲಿ ಸತಿಪತಿಗಳಾದರು., ಆಡಂಬರಗಳ ಮದುವೆ ಮಾಡುವ ಜನರು ಈ ಸರಳ ವಿವಾಹ ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ.
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಎಂ ಎಲ್ ಸಿ ನವೀನ್ ಮಾತನಾಡಿ ಆಡಂಬರವಿಲ್ಲದ ಸರಳ ಹಾಗೂ ಅರ್ಥಪೂರ್ಣ ವಿವಾಹವನ್ನು ಇತ್ತೀಚಿನ ದಿನಗಳಲ್ಲಿ ಕಾಣುವುದು ಬಹಳಷ್ಟು ವಿರಳವಾಗಿದೆ. ಪಂಪ ಉಷಾ ದಂಪತಿಗಳಂತೆ ಕುವೆಂಪುರವರ ಆಶಯದಂತೆ ಸರಳ ವಿವಾಹ ಮಾಡಿಕೊಂಡು ಸಮಾಜದಲ್ಲಿ ಆದರ್ಶವಾಗಿ ಬಾಳಬೇಕು.ಜನ್ಮ ನೀಡಿದ ತಂದೆ ತಾಯಿಗಳ ಆಶೀರ್ವಾದ ಪಡೆದು ನವ ಜೀವನಕ್ಕೆ ಕಾಲಿಸಿದ ದಂಪತಿಗಳು ಸಮಾಜದಲ್ಲಿ ಮಾದರಿಯಾಗಿ ಬದುಕಲಿ ಎಂದರು.
ಕಾರ್ಯಕ್ರಮದಲ್ಲಿ ಕುವೆಂಪುರವರ ವಿಶ್ವಮಾನವತೆಯ ಮಂತ್ರ ಮಾಂಗಲ್ಯದ ಮಹತ್ವವನ್ನು ತಿಳಿಸುತ್ತಾ ವಿಶ್ರಾಂತ ಪ್ರಾಚಾರ್ಯ ಡಾ.ಗಣಪತಿ ಮಾತನಾಡಿ ಮದುವೆ ಎಂಬುದು ಎರಡು ಹೃದಯಗಳು ಮತ್ತು ಎರಡು ಕುಟುಂಬಗಳನ್ನ ಬೆಸೆಯುವ ಪವಿತ್ರ ಕಾರ್ಯವೇ ಮದುವೆ. ಸರಳ ವಿವಾಹಗಳು ಸಮಾಜದಲ್ಲಿ ಗಟ್ಟಿಯಾಗಿ ನಿಲ್ಲಬಲ್ಲವು. ಜಗತ್ತಿನಲ್ಲಿ ಎಂದೂ ಪರಸ್ಪರ ಒಬ್ಬರನ್ನ ಒಬ್ಬರು ನೋಡಿರದ ಮನಸ್ಸುಗಳು ಒಮ್ಮೆ ಬೆಸೆದಾಗ ನಾನು ನಿನ್ನವಳು, ನಾನು ನಿನ್ನವನು ಎಂದು ಹೇಳಿ ಪರಸ್ಪರ ಪ್ರೀತಿಸಿ ಬದುಕು ಕಟ್ಟಿಕೊಳ್ಳುವುದೇ ಒಂದು ಆಶ್ಚರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಬುರುಡೆಕಟ್ಟೆ ರಾಜೇಶ್, ಹನುಮಂತೇಗೌಡ,ತುಂಬಿನಕೆರೆ ಬಸವರಾಜ್, ಜಗದೀಶ್ ರಾಮಯ್ಯ, ಮನು ಮುತ್ತೋಡ್, ಪಾಂಡುರಂಗಪ್ಪ, ಮಲ್ಲಿಕಾರ್ಜುನ್, ಸಾಚ ಮಂಜಯ್ಯ ಮಲ್ಲಿಕಾರ್ಜುನ್, ರವಿಕಿರಣ್ ಪಾಟೀಲ್ ಅರುಣ್ರಾ ರಾಮಗಿರಿ, ಮಲ್ಲೇಶ್, ಸುಮಂತ್, ಅರುಣ್ ರವಿ ಪೀಲಾಪುರ ಇದ್ದರು.