ತೀರ್ಥಹಳ್ಳಿ, ಕೊಪ್ಪದಲ್ಲಿ ಬಿಜೆಪಿ ಸಂಘಟನೆ ಜೋರು!
– ಹಳ್ಳಿ ಹಳ್ಳಿಯಲ್ಲಿ ಸಂಘಟನೆ: ಪಕ್ಷ ಕಟ್ಟಲು ಪ್ಲಾನ್
– ತೀರ್ಥಹಳ್ಳಿಯಲ್ಲಿ ಹೆದ್ದೂರು ನವೀನ್, ಕೊಪ್ಪದಲ್ಲಿ ಹೊಸೂರು ದಿನೇಶ್ ಸಾರಥ್ಯ
– ಹಿರಿ, ಕಿರಿಯ ನಾಯಕರು, ಮುಖಂಡರು, ಕಾರ್ಯಕರ್ತರ ಸಾಥ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ/ಕೊಪ್ಪ: ಅಕ್ಕ ಪಕ್ಕದ ತಾಲ್ಲೂಕುಗಳಾದ ಕೊಪ್ಪ ಹಾಗೂ ತೀರ್ಥಹಳ್ಳಿಯಲ್ಲಿ ಬಿಜೆಪಿ ಪಕ್ಷ ಸಂಘಟನೆ ಜೋರಾಗಿದೆ. ಹಳ್ಳಿ ಹಳ್ಳಿಯಲ್ಲಿ ಸಂಘಟನೆ ಜತೆಗೆ ಪಕ್ಷ ಕಟ್ಟಲು ಪ್ಲಾನ್ ಮಾಡಲಾಗಿದೆ. ಮಾಜಿ ಸಚಿವರು, ಬಿಜೆಪಿ ನಾಯಕರಾದ ಜೀವರಾಜ್ ನೇತೃತ್ವದಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಬಲವಾಗಿ ಪಕ್ಷ ಸಂಘಟನೆ ಆಗುತ್ತಿದೆ. ಇತ್ತ ಮಾಜಿ ಗೃಹ ಸಚಿವರು, ಶಾಸಕರು ಆದ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಬಿಜೆಪಿ ಬಲವಾಗುತ್ತಿದೆ.
ತೀರ್ಥಹಳ್ಳಿಯಲ್ಲಿ ಹೆದ್ದೂರು ನವೀನ್ ಅಧ್ಯಕ್ಷ!ತೀರ್ಥಹಳ್ಳಿ ತಾಲೂಕಿನಲ್ಲಿ ಹೆದ್ದೂರು ನವೀನ್ ನೇತೃತ್ವದಲ್ಲಿ ಪಕ್ಷ ಸಂಘಟನೆ ಆಗುತ್ತಿದೆ. ಇತ್ತೀಚಿಗೆ ಆರಗ, ಮೇಗರವಳ್ಳಿ ಹಾಗೂ ತೀರ್ಥಹಳ್ಳಿ ನಗರ ಬಿಜೆಪಿ ಮಹಾಶಕ್ತಿಕೇಂದ್ರಗಳ ಪ್ರಶಿಕ್ಷಣ ವರ್ಗವು ಚಕ್ಕೋಡಬೈಲಿನಲ್ಲಿ ಯಶಸ್ವಿಯಾಗಿ ನಡೆಯಿತು. ತೀರ್ಥಹಳ್ಳಿ ಬಿಜೆಪಿ ಮಂಡಲದ ಎರಡನೆ ಪ್ರಶಿಕ್ಷಣ ವರ್ಗವಾಗಿದ್ದು, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳನ್ನ ಸಂಘಟನಾ ಕಾರ್ಯದಲ್ಲಿ ಮತ್ತಷ್ಟು ಚೈತನ್ಯದಿಂದ, ಹೆಚ್ಚು ಸಕ್ರಿಯವಾಗಿ ತೊಡಗಿಕೊಳ್ಳುವ ಕುರಿತು ಎರಡು ದಿನಗಳ 11 ವಿವಿಧ ಅವಧಿಗಳಲ್ಲಿ ಪ್ರಶಿಕ್ಷಣಾರ್ಥಿಗಳು ಮಾರ್ಗದರ್ಶನ ಪಡೆದರು.
ಕೊಪ್ಪದಲ್ಲಿ ಹೊಸೂರು ದಿನೇಶ್ ಸಾರಥ್ಯಕೊಪ್ಪ ತಾಲೂಕಿನಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರು, ಸಹಕಾರಿ ನಾಯಕರು ಆದ ಹೊಸೂರು ದಿನೇಶ್ ನೇತೃತ್ವದಲ್ಲಿ ಪಕ್ಷ ಸಂಘಟನೆ ಆಗುತ್ತಿದೆ.
ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನದ ಅಂಗವಾಗಿ, ನರಸಿಂಹರಾಜಪುರ ಮತ್ತು ಕೊಪ್ಪ ಮಂಡಲಗಳಲ್ಲಿ ಬಿಜೆಪಿ ಧ್ವಜವನ್ನು ಹಾರಿಸಲಾಯಿತು.








