ಕುರಿ ಕಾಯುತ್ತಿದ್ದ ಹುಡುಗ ನಾಡಿನ ಹೀರೋ
* ಬಿಗ್ಬಾಸ್ ವಿನ್ನರ್ ಹನುಮಂತು ನಡೆದ ಹಾದಿಯೇ ರೋಚಕ
* ತನ್ನ ಮುಗ್ಧತೆಯಿಂದಲೇ ಎಲ್ಲರ ಮನಸ್ಸು ಗೆದ್ದಿದ್ದ ಹುಡುಗ
* ಸರಳತೆ , ಮುಗ್ಧ ನಗು, ಪ್ರಾಮಾಣಿಕತೆ, ಉತ್ತರ ಕರ್ನಾಟಕದ ಭಾಷಾ ಶೈಲಿಯಿಂದ ಫೇಮಸ್
ಪ್ರಾಮಾಣಿಕತೆ, ಪ್ರತಿಭೆ, ಕಠಿಣ ಪರಿಶ್ರಮ, ಸಾಧಿಸುವ ಛಲವಿದ್ದರೆ ಯಾವ ಮಟ್ಟಕ್ಕಾದರೂ ಹೋಗಬಹುದು ಎಂಬುದುಕ್ಕೆ ಹನುಮಂತ ನೈಜ ಉದಾಹರಣೆ. ಇವರು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರಬಡ್ನಿ ಊರಿನವರಾಗಿದ್ದು, 5ನೇ ತರಗತಿ ಓದಿರುವ ಹನುಮಂತ ಯಾವುದೇ ಸಂಗೀತ ಶಿಕ್ಷಣ ಪಡೆದಿಲ್ಲ. ದಿನ ಕುರಿಗಳ ಹಿಂಡುಗಳ ಜತೆ ಕಳೆಯುವ ಹನುಮಂತ ಶಿಶುನಾಳ ಷರೀಫರ ಹಾಡುಗಳನ್ನು ಮೊಬೈಲ್ನಲ್ಲಿ ಕೇಳುತ್ತಾ ಹಾಡು ಕಲಿತವರು. ಕನ್ನಡಿಗರ ಅಚ್ಚುಮೆಚ್ಚಿನ ಗಾಯಕನಾಗಿ ತನ್ನ ಮುಗ್ಧತೆಯಿಂದಲೇ ಎಲ್ಲರ ಮನಸ್ಸು ಗೆದ್ದಿದ್ದ ಹನುಮಂತ ಈಗ ಬಿಗ್ ಬಾಸ್ ವಿನ್ನರ್ ಪಟ್ಟ ಗಳಿಸುವ ಮೂಲಕ ನಾಲ್ಕು ಕೋಟಿ ಜನರ ಮನಸ್ಸನ್ನು ಗೆದ್ದಿದ್ದಾರೆ. ‘ಸಂಗೀತ ನಂಗೆ ಬರಲ್ಲ ಕಣ್ರೀ….3-4 ಹಾಡು ಬರುತ್ತೆ’ ಎಂದು ವಿನಮ್ರನಾಗಿ ಹೇಳುವ ಹನುಮಂತನಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.
ಸ ರಿ ಗ ಮ ಪ ಸೀಸನ್ 15ರ ವಿನ್ನರ್!
ಹನುಮಂತ ಜಾನಪದ ಗಾಯಕನಾಗಿದ್ದು, ಪ್ರಸಿದ್ಧ ಕನ್ನಡ ಗಾಯನ ರಿಯಾಲಿಟಿ ಶೋ ಸ ರಿ ಗ ಮ ಪ ಸೀಸನ್ 15 ರಲ್ಲಿ ಭಾಗವಹಿಸಿ ತಮ್ಮ ಸಂಗೀತ ಪ್ರಯಾಣ ಆರಂಭಿಸಿದರು. ತಮ್ಮ ಪ್ರಭಾವಶಾಲಿ ಪ್ರತಿಭೆಯನ್ನು ಪ್ರದರ್ಶಿಸಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿ ಅನೇಕ ಜನರ ಪ್ರೀತಿಯನ್ನು ಗಳಿಸಿದರು. ಕಾನ್ಫಿಡೆಂಟ್ ಗ್ರೂಪ್ ಪ್ರಾಯೋಜಿಸಿದ ₹ 15 ಲಕ್ಷ ಮೌಲ್ಯದ ಸೈಟ್ ಅನ್ನು ಒಳಗೊಂಡಿರುವ ಬಹುಮಾನವನ್ನು ಹನುಮಂತು ಪಡೆದರು.
ಹಾಸ್ಯ ಕಲಾವಿದನೂ ಹೌದು..!
ಹನುಮಂತ ಅವರು ತಮ್ಮ ಸಂಗೀತ ವೃತ್ತಿಜೀವನದ ಹೊರತಾಗಿ ಹಾಸ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅವರು ಕನ್ನಡದ ಕಾಮಿಡಿ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಅಲ್ಲಿ ಭಾಗವಹಿಸಿದರು . ಹಾಗೆ ಡಾನ್ಸ್ ಕರ್ನಾಟಕ ಡಾನ್ಸ್ ಅಲ್ಲೂ ಮಿಂಚಿ,ತಮ್ಮ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿ, ಹಾಸ್ಯದ ಮೂಲಕ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಿದರು.
2024ರಲ್ಲಿ, ವೈಲ್ಡ್ ಕಾರ್ಡ್ ಪ್ರವೇಶವಾಗಿ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ಗೆ ಸೇರುವ ಮೂಲಕ ಹನುಮಂತ ಮತ್ತೆ ಗಮನ ಸೆಳೆದರು. ಬಿಗ್ ಬಾಸ್ ಮನೆಗೆ ಅವರ ಪ್ರವೇಶವು ಉತ್ಸಾಹವನ್ನು ಹೆಚ್ಚಿಸಿತು. ಅವರ ಸರಳತೆ , ಮುಗ್ಧ ನಗು, ಉತ್ತರ ಕರ್ನಾಟಕದ ಭಾಷಾ ಶೈಲಿ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಯಿತು. ಸಾಮಾನ್ಯ ಕುರಿಗಾಹಿಯಾಗಿ ಜಾನಪದ ಗಾಯಕನಿಂದ ರಿಯಾಲಿಟಿ ಟಿವಿ ತಾರೆಯಾಗಿ ಬೆಳೆದ ಅಸಾಮಾನ್ಯ ಸಾಧಕ ಹನುಮಂತು.
ಸಾಂಸ್ಕೃತಿಕ ಲೋಕದ ಧ್ರುವತಾರೆಯಾದ ಹನುಮಂತು ಆತನ ಕಲೆಯನ್ನು ಮೆಚ್ಚಿ ಕಾರ್ಯಕ್ರಮದ ನಿರ್ಣಯಕಾರರು ಹೊಗಳುತ್ತಿದ್ದರೂ, ಈತ ಮಾತ್ರ ಯಾವ ಭಾವವನ್ನು ವ್ಯಕ್ತಪಡಿಸದೆ ಮುಗ್ಧತನದಿಂದ ನೋಡುತ್ತಾ, ತಲೆ ಕೆರೆಯುತ್ತಾ ನಿಷ್ಕಲ್ಮಶವಾಗಿ ನಗು ಬೀರಿ ನೋಡುಗರ ಮನಸ್ಸನ್ನು ಗೆದ್ದಿದ್ದಾರೆ ಹನುಮಂತ. ಬಿಗ್ ಬಾಸ್ನ ಕಾರ್ಯತಂತ್ರದ ನಡೆಯಲ್ಲಿ, ಹನುಮಂತ ಅವರನ್ನು ಕೇವಲ ವೈಲ್ಡ್ಕಾರ್ಡ್ ಸ್ಪರ್ಧಿ ಎಂದು ಪರಿಚಯಿಸದೇ ಹೌಸ್ ಕ್ಯಾಪ್ಟನ್ ಆಗಿ ನೇಮಕಗೊಂಡರು. ಹನುಮಂತ ಯಾವುದೇ ಸ್ಪರ್ಧೆಯನ್ನು ಎದುರಿಸದೆ ನಾಯಕತ್ವ ಪಾತ್ರವನ್ನು ವಹಿಸುವ ಸುವರ್ಣ ಅವಕಾಶವನ್ನು ಪಡೆದರು. ನಾಯಕನಾಗಿ ಅವರ ನೇಮಕಾತಿಯು ದೈನಂದಿನ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಮನೆಯೊಳಗೆ ಕ್ರಮವನ್ನು ನಿರ್ವಹಿಸುವುದು ಸೇರಿದಂತೆ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿ ಆಟಗಳನ್ನು ಬುದ್ಧಿವಂತಿಕೆಯಿAದ ಆಡಿ ಟಿಕೆಟ್ ಟು ಫಿನಾಲೆಯನ್ನು ಪಡೆದು ವಿನ್ನರ್ ಪಟ್ಟ ಅಲಂಕಾರಿಸುವ ಮೂಲಕ ಹಳ್ಳಿ ಪ್ರತಿಭೆಗಳು ಛಲವೊಂದಿದ್ದರೆ ಹೇಗೆ ಬೇಕಾದರೂ ಮುಂದೆ ಬರಬಹುದು ಎಂಬುದಕ್ಕೆ ಹನುಮಂತ ನೈಜ ಸಾಕ್ಷಿ. ಇವರ ಮುಂದಿನ ಜೀವನವು ಯಶಸ್ವಿಯಾಗಿ ಸಾಗಿ, ಮತ್ತಷ್ಟು ಅವಕಾಶಗಳು ಇವರದ್ದಾಗಲಿ ಎಂಬುದು ನಮ್ಮೂರ್ ಎಕ್ಸ್ಪ್ರೆಸ್ ಆಶಯ.
