ಪ್ರಿಯತಮೆ ಕೊಂದು ಫ್ರಿಡ್ಜ್ ಅಲ್ಲಿ ಇಟ್ಟ ಟೆಕ್ಕಿ!
– ಮದುವೆಗೆ ಹುಡುಗಿ ಸಿಗಲಿಲ್ಲ ಎಂದು ವಿಷ ಸೇವಿಸಿ ಆತ್ಮಹತ್ಯೆ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಡೂರು: ಯುವಕನೊಬ್ಬ ಮದುವೆಯಾಗುತ್ತಿಲ್ಲ ಎನ್ನುವ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಶಿರಾ ಗ್ರಾಮದ ಬ್ರಹ್ಮಸಂದ್ರ ಗ್ರಾಮದ ನಿವಾಸಿ, ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ 26 ವರ್ಷದ ಕುಮಾರ್ ಎಂದು ಗುರುತಿಸಲಾಗಿದೆ. ಕುರಿ ಕಾಯುತ್ತಿದ್ದ ಸಂದರ್ಭದಲ್ಲಿ ಮದುವೆಯ ವಿಚಾರದಲ್ಲಿ ಮಾನಸಿಕವಾಗಿ ನೊಂದು ಮದ್ಯವನ್ನು ಸೇವಿಸಿ, ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಪ್ರಿಯತಮೆ ಕೊಂದು ಫ್ರಿಡ್ಜ್ ಅಲ್ಲಿ ಇಟ್ಟ ಟೆಕ್ಕಿ!
ಭಾರತೀಯ ನೌಕಾಪಡೆಯ ಐಎನ್ಎಸ್ ಡೇಗಾದಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ 30 ವರ್ಷದ ಚಿಂತಡ ರವೀಂದ್ರ, ತನ್ನ ಪ್ರೇಯಸಿಯನ್ನೇ ಅಮಾನುಷವಾಗಿ ಕೊಲೆ ಮಾಡಿ, ದೇಹವನ್ನು ತುಂಡರಿಸಿ ಫ್ರಿಡ್ಜ್ ಸೇರಿಸಿದ್ದಾನೆ. 2021 ರಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾಗಿದ್ದ ಪೋಲಿಪಲ್ಲಿ ಮೌನಿಕಾ (28) ಮತ್ತು ರವೀಂದ್ರರ ಸಂಬಂಧವು ಆರಂಭದಲ್ಲಿ ಸುಂದರವಾಗಿದ್ದರೂ, ಅದು ಇಷ್ಟೊಂದು ಕ್ರೂರವಾಗಿ ಅಂತ್ಯಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ರವೀಂದ್ರನ ಪತ್ನಿ ಹೆರಿಗೆಗಾಗಿ ತವರು ಮನೆಗೆ ಹೋಗಿದ್ದ ಸಮಯದಲ್ಲಿ, ಆತ ಮೌನಿಕಾಳನ್ನು ಗಾಜುವಾಕಾದಲ್ಲಿರುವ ತನ್ನ ಬಾಡಿಗೆ ಮನೆಗೆ ಕರೆಸಿಕೊಂಡಿದ್ದನು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೌನಿಕಾ ರವೀಂದ್ರನಿಂದ ಸುಮಾರು 3.5 ಲಕ್ಷ ರೂಪಾಯಿ ಹಣ ಪಡೆದಿದ್ದರು ಎನ್ನಲಾಗಿದೆ.
ಈ ಹಣದ ವಿಚಾರವಾಗಿ ಮತ್ತು ತಮ್ಮ ಅಕ್ರಮ ಸಂಬಂಧವನ್ನು ರವೀಂದ್ರನ ಪತ್ನಿ ಹಾಗೂ ಕುಟುಂಬಕ್ಕೆ ತಿಳಿಸುವುದಾಗಿ ಮೌನಿಕಾ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಭಾನುವಾರ ಮಧ್ಯಾಹ್ನ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ರವೀಂದ್ರ ಮೌನಿಕಾಳನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಕೊಲೆ ಕೇವಲ ಆವೇಶದಲ್ಲಿ ನಡೆದಿದ್ದಲ್ಲ, ಅದಕ್ಕಾಗಿ ರವೀಂದ್ರ ಪೂರ್ವತಯಾರಿ ನಡೆಸಿದ್ದ ಎನ್ನುವ ಶಂಕೆ ಮೂಡಿದೆ. ಕೊಲೆಗೆ ಬೇಕಾದ ಚಾಕುಗಳನ್ನು ಆತ ಆನ್ಲೈನ್ ಮೂಲಕ ತರಿಸಿಕೊಂಡಿದ್ದನು. ಕೃತ್ಯದ ನಂತರ ದೇಹವನ್ನು ಸಾಕ್ಷ್ಯವಿಲ್ಲದಂತೆ ನಾಶಮಾಡಲು ಆತ ಅನುಸರಿಸಿದ ಹಾದಿ ಭಯಾನಕವಾಗಿದೆ. ಮೌನಿಕಾಳ ದೇಹವನ್ನು ಆತ ಮೂರು ಭಾಗಗಳಾಗಿ ತುಂಡರಿಸಿದ್ದಾನೆ. ದೇಹದ ಒಂದು ಭಾಗವನ್ನು ತನ್ನ ಮನೆಯ ಫ್ರಿಜ್ನಲ್ಲಿ ಅಡಗಿಸಿಟ್ಟರೆ, ಮತ್ತೊಂದು ಭಾಗವನ್ನು ಗೋಣಿ ಚೀಲದಲ್ಲಿ ತುಂಬಿ ಮಂಚದ ಅಡಿಯಲ್ಲಿ ಬಚ್ಚಿಟ್ಟಿದ್ದನು.
ಉಳಿದಂತೆ ತಲೆ ಮತ್ತು ಕೈಗಳಿದ್ದ ಭಾಗವನ್ನು ದೂರದ ಅಡವಿವರಂ ಎಂಬ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾನೆ. ಅಕ್ಕಪಕ್ಕದ ಮನೆಯವರಿಗೆ ಯಾವುದೇ ಕಿರುಚಾಟವಾಗಲಿ ಅಥವಾ ಅನುಮಾನಾಸ್ಪದ ಸದ್ದಾಗಲಿ ಕೇಳಿಸದಂತೆ ಅತ್ಯಂತ ಸಂಚಿನಿಂದ ಈ ಕೃತ್ಯ ಎಸಗಲಾಗಿದೆ. ಇಷ್ಟೆಲ್ಲಾ ಆದ ನಂತರ ರವೀಂದ್ರ ತಲೆಮರೆಸಿಕೊಳ್ಳುವ ಸಾಹಸಕ್ಕೆ ಕೈಹಾಕದೇ ತನ್ನ ಸ್ನೇಹಿತನೊಬ್ಬನಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ಸ್ನೇಹಿತನ ಬುದ್ಧಿವಾದದಂತೆ ಗಾಜುವಾಕಾ ಪೊಲೀಸ್ ಠಾಣೆಗೆ ತೆರಳಿ ತನ್ನ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ರವೀಂದ್ರ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಮನೆಗೆ ತೆರಳಿದಾಗ ಅಲ್ಲಿ ಕಂಡ ದೃಶ್ಯಗಳು ಅನುಭವವಿರುವ ಅಧಿಕಾರಿಗಳನ್ನೂ ಕೂಡ ಕ್ಷಣಕಾಲ ಬೆಚ್ಚಿಬೀಳುವಂತೆ ಮಾಡಿದ್ದವು. ಸದ್ಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರವೀಂದ್ರನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಒಂದು ಸುಂದರ ಸಂಬಂಧವು ಹಣ ಮತ್ತು ಹಗೆತನದ ಕಿಚ್ಚಿಗೆ ಸಿಲುಕಿ ಇಷ್ಟೊಂದು ಭೀಕರ ಸ್ವರೂಪ ಪಡೆದುಕೊಂಡಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಮೌನಿಕಾಳ ಕುಟುಂಬವು ಆಕೆಯ ಹಠಾತ್ ಅಗಲಿಕೆಯಿಂದ ಆಘಾತಗೊಂಡು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.








