ವಿಧಿ ಆಟಕ್ಕೆ ನಾಬಳ ಅಚಲ ಹೆಗ್ಡೆ ಬಲಿ!
– ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಚೀಂದ್ರ ಹೆಗ್ಡೆ ಪತ್ನಿ ಕ್ಯಾನ್ಸರ್ ರೋಗದಿಂದ ಸಾವು
– ಏ.1ಕ್ಕೆ ಅಂತ್ಯ ಕ್ರಿಯೆ: ತೀರ್ಥಹಳ್ಳಿಯಲ್ಲಿ ಅಂತಿಮ ದರ್ಶನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ, ಹೊನ್ನೇತ್ತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ, ಸಮಾಜ ಸೇವಕ ನಾಬಳ ಶಚಿಂದ್ರ ಹೆಗ್ಡೆ ಧರ್ಮಪತ್ನಿ ಅಚಲ ಹೆಗ್ಡೆ (52) ಮಂಗಳವಾರ ಮುಂಜಾನೆ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಪತಿ ಸಾಮಾಜಿಕ ಸೇವೆ ಜತೆಗೆ ತಾನೂ ಸಮಾಜದಲ್ಲಿ ಸೇವೆಗೆ ಮೂಡುಪಾಗಿದ್ದರು.ತೀರ್ಥಹಳ್ಳಿ ಕುಶಾವತಿ ಒಕ್ಕಲಿಗರ ಸಂಘದ ಎದುರು ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿತ್ತು. ಬುಧವಾರ ನಾಬಳದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.
ಶಾಲಾ ಕಾಲೇಜು ದಿನಗಳಲ್ಲಿ ಅತ್ಯುತ್ತಮ ಕೋಕೋ ಆಟಗಾರ್ತಿಯಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದ ಅಚಲ ಅವರು ಕೊಡಚಾದ್ರಿ ಮಹಿಳಾ ಪತ್ತಿನ ಸಹಕಾರ ಸಂಘ, ಅನಘ ಮಹಿಳಾ ಸಹಕಾರ ಸಂಘದ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಲವು ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತ ಕ್ರಿಯಾಶೀಲರಾಗಿದ್ದರು.ಅವರು ಪತಿ, ಇಬ್ಬರು ಮಕ್ಕಳು, ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಅತ್ಯಂತ ಸಜ್ಜನ ಹಾಗೂ ಘನತೆಯ ವ್ಯಕ್ತಿತ್ವದಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿರುವ ಶಚಿಂದ್ರ ಹೆಗ್ಡೆ ಯವರಿಗೆ ಅನಿರೀಕ್ಷಿತವಾಗಿ ಎರಗಿರುವ ಈ ಅಘಾತಕ್ಕೆ ಅವರ ಆಪ್ತರು, ಹಿತೈಷಿಗಳು, ಬಂಧು ವರ್ಗ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.
ಭಾವ ಪೂರ್ಣ ಶ್ರದ್ಧಾoಜಲಿಗಳು








