ಅರಳಸುರಳಿ ಮೂವರ ಸಾವು ಇನ್ನು ನಿಗೂಢ!
– ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿರುವ ಭರತ್ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್
– ಭಾನುವಾರ ರಾತ್ರಿಯೆ ಮೂವರ ಅಂತ್ಯಕ್ರಿಯೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಅರಳಸುರಳಿ ಪ್ರಕರಣ ಇನ್ನು ನಿಗೂಢವಾಗಿದೆ. ಮೂವರು ಒಂದೇ ಮನೆಯಲ್ಲಿ ಬೆಂಕಿಗೆ ಅಹುತಿಯಾಗಿದ್ದು, ಓರ್ವ ಇದೀಗ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾನೆ. ಆತನ ಹೇಳಿಕೆ ಇನ್ನು ನಿಗೂಢ ಆಗಿದೆ. ತೀರ್ಥಹಳ್ಳಿಯ ಅರಳಸುರಳಿಯಲ್ಲಿ ನಡೆದ ಘಟನೆ ಬಗ್ಗೆ ಸ್ಥಳೀಯವಾಗಿ ಭಾರೀ ಕುತೂಹಲ ಮೂಡಿಸಿದೆ. ಆರ್ ಎಸ್ ಎಸ್ ಗೆ ತಮ್ಮಬದುಕನ್ನೇ ಮುಡಿಪಾಗಿಟ್ಟಿದ್ದ ಆ ಕುಟುಂಬದ ಸದಸ್ಯರೆಲ್ಲರೂ ಸಜೀವ ದಹನ ಮಾಡಿಕೊಳ್ಳುವಂತ ಕಠೋರ ನಿಲುವು ತಳೆದಿದ್ದಾರು ಏಕೆ ಎನ್ನುವ ಅನುಮಾನ ಎಲ್ಲರಲ್ಲೂ ಇದೆ. ಅರಳು ಸುರಳಿಯ ಕೆಕೋಡ್ ಗ್ರಾಮದಲ್ಲಿ ಒಂದು ಕುಟುಂಬದ ಮೂವರು ಸಜೀವ ದಹನಗೊಂಡಿರುವ ಧಾರುಣ ಘಟನೆ ಆಸ್ತಿಗಾಗಿ ನಡೆದ ಚುಚ್ಚು ಮಾತು ಎಂದೂ ಹೇಳಲಾಗುತ್ತಿದೆ.
ಭಾನುವಾರ ಮುಂಜಾನೆ ಮನೆಯ ಪಕ್ಕದ ಕೋಣೆಯೊಳಗೆ ಕಟ್ಟಿಗೆಗಳನ್ನು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಬೆಂಕಿ ದುರಂತದಲ್ಲಿ ರಾಘವೇಂದ್ರಕೆಕೋಡ್ (65), ಪತ್ನಿನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (30) ಸಜೀವವಾಗಿ ಬೆಂಕಿಗೆ ಆಹುತಿಯಾಗಿದ್ದರು. ಇನ್ನೋರ್ವ ಪುತ್ರ ಭರತ್ (28) ಇದೀಗ ಶಿವಮೊಗ್ಗ ಆಸ್ಪತ್ರೆಯಿಂದ ಬೆಂಗಳೂರು ಶಿಫ್ಟ್ ಮಾಡಲಾಗಿದೆ.
ಕುಟುಂಬದ ಎಲ್ಲರೂ ಎಲ್ಲಿದ್ದಾರೆ?
ರಾಘವೇಂದ್ರ ಕುಟಂಬದ ಐದು ಸಹೋದರಲ್ಲಿ ಓರ್ವ ಸಹೋದರ ಸಾವನ್ನಪ್ಪಿದ್ದಾರೆ. ಓರ್ವ ಸಹೋದರ ಡಾಕ್ಟರ್ ಸುಧೀಂದ್ರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ವೈದ್ಯರಾಗಿದ್ದಾರೆ. ಪಾ.ರಾ ಕೃಷ್ಣಮೂರ್ತಿ ಆರ್.ಎಸ್.ಎಸ್ ರಾಷ್ಟ್ರೀಯ ಪ್ರಚಾರಕ್ ಆಗಿದ್ದಾರೆ.ಮತ್ತೋರ್ವರು ಬಿ.ಎಸ್.ಎನ್ಎಲ್ ನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಭರತ ಉತ್ತಮ ಅಡಿಕೆ ವ್ಯಾಪಾರ ಮಾಡುತ್ತಿದ್ದ 10 ಎಕೆರೆ ಅಡಿಕೆ ತೋಟ ಇತ್ತು ಒಳ್ಳೆ ಫಲ ಬರುತ್ತಿತ್ತು.
ಸುಡಬಹುದಾದ ಎಲ್ಲಾ ವಸ್ತುಗಳು ಅಂದರೆ ಕಟ್ಟಿಗೆ,ಹಾಸಿಗೆ, ಚಾಪೆ ಬಟ್ಟೆ ಬರೆ ಪೇಪರ್ ಪೇಸ್ಟು ಎಲ್ಲವನ್ನು ಕೋಣೆಯಲ್ಲಿ ಹಾಕಿಕೊಂಡು ಮದ್ಯದಲ್ಲಿ ಈ ಕುಟುಂಬ ಪೆಟ್ರೋಲ್ ಸುರಿದುಕೊಂಡು ಸಜೀವವಾಗಿ ದಹಿಸಿಕೊಂಡಿದ್ದಾರೆ. ಅಂದೇ ರಾತ್ರಿ ಪೊಲೀಸರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ಕೂಡ ನಡೆದಿದೆ. ಇದೀಗ ಎಲ್ಲರದ್ದು ಒಂದೇ ಪ್ರಶ್ನೆ ಮೂವರು ಸಾವು ಕಂಡಿದ್ದು ಏಕೆ..?







