ಮೇಗರವಳ್ಳಿ ಸೊಸೈಟಿಗೆ ಪ್ರಮೋದ್ ಹೆಗ್ಡೆ ಸಾರಥಿ!
– ಉಪಾಧ್ಯಕ್ಷರಾಗಿ ಪಣತ ಮಹೇಶ್ ಅವಿರೋಧ ಆಯ್ಕೆ
– ನೂತನ ಪದಾಧಿಕಾರಿಗಳು, ಸದಸ್ಯರಿಗೆ ಅಭಿನಂದನೆಗಳು
NAMMUR EXPRESS NEWS
ತೀರ್ಥಹಳ್ಳಿ: ಮೇಗರವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ನೂತನ ಅಧ್ಯಕ್ಷರಾಗಿ ಹಿರಿಯ ಸಹಕಾರಿ, ಎಂ ಆರ್ ಪ್ರಮೋದ್ ಹೆಗ್ಡೆ, ಉಪಾಧ್ಯಕ್ಷರಾಗಿ ಪಣತ ಮಹೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2023-24 ರಿಂದ 2027-28ನೇ ಸಾಲಿಗೆ ನೂತನ ನಿರ್ದೇಶಕರಾಗಿ, ಎಂ ಆರ್ ಪ್ರಮೋದ್ ಹೆಗ್ಡೆ ಮೇಗರವಳ್ಳಿ, ಪಣತ ಮಹೇಶ್, ರತ್ನಾಕರ್ ಭಟ್, ಸತ್ಯನಾರಾಯಣ ದೋಗ್ರ, ಪಟೇಲ್ ವೆಂಕಟೇಶ್ ಹೆಗಡೆ, ಚಿಪ್ಪಿನಕೊಡಿಗೆ ವೆಂಕಟೇಶ್, ವಸುಪಾಲ್ ಕೊರೋಡಿ, ನವೀನ್ ಎಂ ವೈ ( ನಂದ ಹೆಗ್ಡೆ ), ಗೀತಾ ಎಸ್,ವೈ ಆಂದಿನಿ, ಮಂಜುಳ ಕೆ ಆರ್ ಮಳವಾಡಿ, ಮಹಾಬಲ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಕಾರ್ಯಕ್ಕೆ ಸಹಕಾರ ನೀಡಿದ ಅಧ್ಯಕ್ಷರು_ ಉಪಾಧ್ಯಕ್ಷರು, ಎಲ್ಲಾ ನಿರ್ದೇಶಕರು, ಸಿಬ್ಬಂದಿಗಳಾದ ಪ್ರಭಾರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ವೆಂಕಟೇಶ್ ಮೇಗರವಳ್ಳಿ, ನಿತಿನ್ ಬಿ ಯು ಗುಡ್ಡೇಕೇರಿ, ಪ್ರಿಯಾಂಕ ಕೋಟೆಗುಡ್ಡೆ, ಜಗದೀಶ್ ವಡೇಗದ್ದೆ ಅವರಿಗೂ ಚುನಾವಣಾಧಿಕಾರಿ ಮಂಜು ಬಾಬು ಹೆಚ್.ಪಿ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ.