ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ!
– ವಿದ್ಯಾರ್ಥಿಗಳು, ಪೋಷಕರಲ್ಲಿ ಹೆಚ್ಚಿದ ಕುತೂಹಲ
– ಫಲಿತಾಂಶ ನೋಡೋದು ಹೇಗೆ?.. ಎಷ್ಟು ಸಮಯಕ್ಕೆ ಫಲಿತಾಂಶ?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 9ರ ಗುರುವಾರದಂದು ಪ್ರಕಟಗೊಳ್ಳಲಿದೆ. ಪಿಯುಸಿ ಪರೀಕ್ಷೆ ಬರೆದ ಎಲ್ಲರಲ್ಲಿ ಕುತೂಹಲ ಮನೆ ಮಾಡಿದೆ.ಫೆಬ್ರವರಿ 28ರಿಂದ ಮಾರ್ಚ್ 17ರ ವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಮಾರ್ಚ್ 20 ರಿಂದ ಪ್ರಾರಂಭಗೊಂಡಿತ್ತು. ಮೌಲ್ಯಮಾಪನ ಕಾರ್ಯವು ಕೆಲವು ದಿನಗಳ ಹಿಂದೆಯೇ ಮುಕ್ತಾಯಗೊಂಡಿತ್ತು. ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದಾರೆ.
ಅಧಿಕೃತ ವೆಬ್ಸೈಟ್ನಲ್ಲೂ ಫಲಿತಾಂಶ ಪ್ರಕಟ: ನೋಡೋದು ಹೇಗೆ?
ಮೊದಲು ಅಧಿಕೃತ ವೆಬ್ ಸೈಟ್ karresults.nic.in ‘ ಗೆ ಭೇಟಿ ನೀಡಿ Karnataka 2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ‘Submit’ ಬಟನ್ ಒತ್ತಿದ ತಕ್ಷಣ ನಿಮ್ಮ ಪರೀಕ್ಷೆ ಅಂಕಪಟ್ಟಿ ಸಿಗಲಿದೆ.








