ಕರಾವಳಿ ಟಾಪ್ ನ್ಯೂಸ್
• ಪುತ್ತೂರು: ಕ್ರೈನ್ ಢಿಕ್ಕಿಯಾಗಿ ವ್ಯಕ್ತಿ ಸಾವು
• ಬೈಂದೂರು: ಲಕ್ಷಾಂತರ ರೂಪಾಯಿ ದುರುಪಯೋಗ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಪುತ್ತೂರು: ಕ್ರೈನ್ ಢಿಕ್ಕಿಯಾಗಿ ವ್ಯಕ್ತಿ ಸಾವು
ಪುತ್ತೂರು: ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಕ್ರೈನ್ ಢಿಕ್ಕಿ ಹೊಡೆದ ಘಟನೆ, ಮಂಗಳವಾರದಂದು ಕಲ್ಲೇರಿಯಲ್ಲಿ ನಡೆದಿದೆ. ಪರಿಣಾಮವಾಗಿ ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಕೊಳ್ತಿಗೆ ನಿವಾಸಿ ಮಹಾಲಿಂಗಮ್ ಎಂದು ಗುರುತಿಸಲಾಗಿದೆ. ಜೋಗಿಬೆಟ್ಟುವಿನಲ್ಲಿದ್ದ ಅವರ ಮಗಳ ಮನೆಗೆ ಬಂದ ಸಂದರ್ಭದಲ್ಲಿ, ಕಲ್ಲೇರಿ ಪ್ರಯಾಣಿಕರ ತಂಗುದಾಣದಲ್ಲಿ ನಿಂತಿದ್ದರು. ಆಗ ಗುರುವಾಯನಕೆರೆಯಿಂದ ಉಪ್ಪಿನಂಗಡಿಯ ಕಡೆಗೆ ತೆರಳುತ್ತಿದ್ದ ಕ್ರೈನ್ ಮಹಾಲಿಂಗಮ್ ಅವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಮಹಾಲಿಂಗಮ್ ಅವರು ರಸ್ತೆಗೆ ಬಿದ್ದಿದ್ದು, ವೇಗವಾಗಿ ಚಲಿಸುತ್ತಿದ್ದ ಕ್ರೈನ್ ಅವರ ತಲೆಯ ಮೇಲೆ ಹರಿದುಹೋಗಿದೆ ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಪುತ್ತೂರು ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆಯನ್ನು ನಡೆಸಿ, ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
• ಬೈಂದೂರು: ಲಕ್ಷಾಂತರ ರೂಪಾಯಿ ದುರುಪಯೋಗ
ಬೈಂದೂರು: ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘದಲ್ಲಿ ಅಧಿಕಾರಿಗಳು ಲಕ್ಷಾಂತರ ರೂಪಾಯಿ ದುರುಪಯೋಗಪಡಿಸಿಕೊಂಡ ಘಟನೆ, ಉಪ್ಪಂದದಲ್ಲಿ ನಡೆದಿದೆ. ಹಿಂದೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ನಾವುಂದ ಗ್ರಾಮದ ಸುಭಾಷ್ ಚಂದ್ರ ಮತ್ತು ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮರವಂತೆಯ ದೀಪಕ್ ಕುಮಾರ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು 2023-24ನೇ ಸಾಲಿನಲ್ಲಿ ಸಂಘದ ಹಣದಲ್ಲಿ ಒಟ್ಟು 80.91.996 ರೂಪಾಯಿಗಳಷ್ಟು ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ. ಇದೀಗ ಲೆಕ್ಕಪರಿಶೋಧನಾ ವರದಿಯಲ್ಲಿ ಹಣ ದುರುಪಯೋಗವಾಗಿರುವುದರ ಕುರಿತು ಸಂಘದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀನಿವಾಸ್ ಕೆ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ನೀಡಿದ್ದು, ದೂರಿನ ಆಧಾರದ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







