ಶ್ರೀ ಮೂಕಾಂಬಿಕಾ ಟೈರ್ಸ್ ಆ್ಯಂಡ್ ಅಲೈನ್ ಮೆಂಟ್ ನೂತನ ಮಳಿಗೆ ಉದ್ಘಾಟನೆ
– ತೀರ್ಥಹಳ್ಳಿಯ ಎ ಪಿ ರಸ್ತೆಯಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರ
– ಗಣ್ಯರು, ಗ್ರಾಹಕರ ಸಮ್ಮುಖದಲ್ಲಿ ಉದ್ಘಾಟನೆ
ತೀರ್ಥಹಳ್ಳಿ: ತೀರ್ಥಹಳ್ಳಿಯ ಆಜಾದ್ ರಸ್ತೆಯ ಬಿಎನ್ ಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಮೂಕಾಂಬಿಕಾ ಟೈರ್ಸ್ ಆ್ಯಂಡ್ ಅಲೈನ್ ಮೆಂಟ್ ಮಳಿಗೆಯನ್ನು ತೀರ್ಥಹಳ್ಳಿಯ ಎ ಪಿ ರಸ್ತೆಯಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಹೊಸ ಮಳಿಗೆಯ ಉದ್ಘಾಟನಾ ಸಮಾರಂಭವು ದಿನಾಂಕ 8 ಏಪ್ರಿಲ್ 2026ರ ಬುಧವಾರದಂದು ಬೆಳಿಗ್ಗೆ 10:00ಗಂಟೆಗೆ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ಗೀತಾ ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ ಮತ್ತು ಶಿವಮೊಗ್ಗದ ರಝಾ ಟೈರ್ಸ್ ಮಾಲೀಕರಾದ ನೂರ್ ಮಹಮ್ಮದ್ ಹುಸೇನ್ ಆಗಮಿಸಿದ್ದರು.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಆರ್.ಎಂ. ಮಂಜುನಾಥಗೌಡ ಶುಭ ಹಾರೈಸಿದರು. ಮಾಲೀಕರಾದ ಚಂದ್ರಪ್ಪ, ಅರುಣ್ ಮತ್ತು ಕುಟುಂಬದವರು, ಎಲ್ಲಾ ಗ್ರಾಹಕರು, ಬಂಧುಗಳು ಸ್ನೇಹಿತರು, ಆತ್ಮೀಯರು ಉಪಸ್ಥಿತರಿದ್ದರು. ತೀರ್ಥಹಳ್ಳಿಯ ಪ್ರಮುಖ ಟೈರ್ಸ್ ಆ್ಯಂಡ್ ಅಲೈನ್ ಮೆಂಟ್ ಮಳಿಗೆ ಇದಾಗಿದೆ. ಸಾವಿರಾರು ಗ್ರಾಹಕರಿಗೆ ಸೇವೆ ನೀಡುತ್ತಿದೆ. ಇನ್ನು ಎಲ್ಲಾ ಕಂಪನಿ ಟೈರ್ಸ್ ಲಭ್ಯವಿದೆ.








