ತೀರ್ಥಹಳ್ಳಿ ಸೂಪರ್.. ಆದ್ರೆ ಪ್ರವಾಸಿ ತಾಣಗಳ ಅಭಿವೃದ್ಧಿ ಇಲ್ಲ!
* ನಿರ್ವಹಣೆ ಇಲ್ಲದೆ ನಿರ್ಲಕ್ಷಗೊಂಡ ಪ್ರವಾಸಿ ತಾಣಗಳು
* ತಾಲೂಕು ಕೇಂದ್ರದಲ್ಲೂ ಮಾಹಿತಿ ಫಲಕ ಇಲ್ಲ
ವರದಿ: ಉಮೇಶ್ ದೇಮ್ಲಾಪುರ
NAMMUR EXPRESS NEWS
ಕರ್ನಾಟಕ ಪ್ರವಾಸೋದ್ಯಮ ತಾಣಗಳ ಪಟ್ಟಿಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 22 ಪ್ರವಾಸಿ ತಾಣಗಳ ಪಟ್ಟಿಯನ್ನು ಬಹಿರಂಗಪಡಿಸಿದ್ದಾರೆ. ಆದರೆ ಎಷ್ಟು ಪ್ರವಾಸಿ ತಾಣಗಳು ಉತ್ತಮ ಮೂಲಸೌಕರ್ಯಗಳನ್ನು ಹೊಂದಿದೆ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ.
ಬಹುತೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ರಸ್ತೆಗಳು ಇನ್ನೂ ಗುಂಡಿ ಬಿದ್ದಿವೆ, ಕೆಲವು ಪ್ರವಾಸಿ ತಾಣಗಳಿಗೆ ಕರೆಂಟ್, ನೆಟ್ವರ್ಕ್ ಗಳ ಸಮಸ್ಯೆಗಳಿಂದ ಪ್ರವಾಸಿಗರು ಅತ್ತ ಕಡೆ ಮುಖ ಮಾಡದಂತೆ ನಿರ್ಮಾಣಗೊಂಡಿವೆ. ಇನ್ನು ಹಲವು ಕಡೆ ಸೂಚನಾ ಫಲಕಗಳೇ ಇಲ್ಲ. ಪ್ರವಾಸಿ ತಾಣಗಳ ಪಟ್ಟಿಗಳನ್ನು ಪ್ರಕಟ ಮಾಡಿದ ಅಧಿಕಾರಿಗಳು ಪ್ರವಾಸಿ ತಾಣಗಳ ನಿರ್ವಹಣೆಗೆ ಯಾರನ್ನ ನೇಮಕ ಮಾಡಿದ್ದಾರೆ?. ಕೆಲವೊಂದು ಪ್ರೇಕ್ಷಣೀಯ ಸ್ಥಳಗಳಿಗೆ ಹೋದರೆ ಮತ್ತೆ ಹೋಗಲೇಬಾರದು ಎಂಬ ಮನಸ್ಥಿತಿಯನ್ನು ಉಂಟುಮಾಡುವ ಹಾಗೆ ಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿ ತಾಣಗಳ ಸೌಂದರ್ಯ ಹಾಳು ಮಾಡಿದ್ದಾರೆ. ಇನ್ನು ಅನೇಕ ಕಡೆ ಮೂಲಭೂತ ಸೌಕರ್ಯ ಇಲ್ಲ. ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವುದೇ ಹಣ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಅನೇಕ ಕಡೆ ಹಾನಿ
ಪ್ರೇಕ್ಷಣೀಯ ಸ್ಥಳಗಳ ಸೌಂದರ್ಯ ಹಾಗೂ ಇತಿಹಾಸವನ್ನು ಹೇಳುವ ಸ್ಮಾರಕಗಳ ಬಗ್ಗೆ ಕಿಂಚಿತ್ತಾದರೂ ಗೌರವ ಇರಬೇಕು, ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪ್ರೇಕ್ಷಣೀಯ ಸ್ಥಳಗಳನ್ನು ಅತ್ಯಂತ ಪ್ರಚಾರದಾಯಕ ಫಲಕಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಆದರೆ ಆ ಕೆಲಸ ಆಗಿಲ್ಲ.
ದೇವಸ್ಥಾನಗಳು, ಐತಿಹಾಸಿಕ ಸ್ಥಳ, ಶ್ರೇಷ್ಠ ಸೌಂದರ್ಯ ತಾಣಗಳು ನಿರ್ಮಾಣವಾದರೆ ಆ ಸ್ಥಳದಲ್ಲಿ ಚಪ್ಪಲಿ ಕಾಯುವವನಿಂದ ಹಿಡಿದು ಅದನ್ನು ನಿರ್ವಹಣೆ ಮಾಡುವ ಗುಮಾಸ್ತನವರೆಗೂ ಜೀವನೋಪಾಯವನ್ನು ಕಲ್ಪಿಸುವ ಜಾಗಗಳಾಗಿವೆ. ಆದರೆ ಅಭಿವೃದ್ಧಿ, ಹೊಸ ಕಲ್ಪನೆ ಇಲ್ಲಿ ಸಾಕಾರ ಆಗುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಪ್ರೇಕ್ಷಣೀಯ ಸ್ಥಳಗಳ ಜೀರ್ಣೋದ್ಧಾರ ಕಾರ್ಯ ಮಾಡಬೇಕಿದೆ. ಪ್ರವಾಸೋದ್ಯಮ ಜತೆಗೆ ಉದ್ಯೋಗ ಸೃಷ್ಟಿ, ಆಹಾರ ಉತ್ಪನ್ನ ಉತ್ಪಾದನೆ ಮಾಡಬೇಕಿದೆ.








