ಟಾಪ್ ನ್ಯೂಸ್ ತೀರ್ಥಹಳ್ಳಿ
ಹಣಗೆರೆ ಕಟ್ಟೆ ದೇಗುಲದಲ್ಲಿ 73.23 ಲಕ್ಷ ಕಾಣಿಕೆ
ಇಂದು ತೀರ್ಥಹಳ್ಳಿಯಲ್ಲಿ ಸೌಹಾರ್ದ ಇಫ್ತಿಯಾರ್ ಕೂಟ!
– ಸಂಜೆ 6.00 ಗಂಟೆಗೆ ಜಾಮಿಯಾ ಮಸೀದಿ ತೀರ್ಥಹಳ್ಳಿಯಲ್ಲಿ ಕೂಟ
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದ ಸೌಹಾರ್ದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಕಟ್ಟೆಯಲ್ಲಿ ಹುಂಡಿ ಎಣಿಕೆ ಬುಧವಾರ ನಡೆದಿದೆ
ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ತಹಸೀಲ್ದಾರ್ ರಂಜಿತ್ ರವರ ನೇತೃತ್ವದಲ್ಲಿ ಹುಂಡಿಯ ಹಣ ಎಣಿಸುವ ಕಾರ್ಯ ನಡೆದಿದ್ದು ಈ ಬಾರಿಯೂ ಲಕ್ಷಗಟ್ಟಲೆ ಹಣ ಸಂಗ್ರಹವಾಗಿದೆ. ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕವಾಗಿ 2 ಕೋಟಿ ರೂಪಾಯಿಗೂ ಹೆಚ್ಚು ಹುಂಡಿ ಹಣ ಸಂಗ್ರಹವಾಗುತ್ತಿದೆ. ತ್ರೈಮಾಸಿಕ ಎಣಿಕೆಯಲ್ಲಿ ಸರಾಸರಿ 50 ಲಕ್ಷ ಹಣ ಸಂಗ್ರಹಣೆಯಾಗುತ್ತಿದೆ. ಅದರಲ್ಲೂ ರಾಜ್ಯದಲ್ಲಿಯೇ ಅತೀ ಹೆಚ್ಚು ಹುಂಡಿ ಹಣ ಸಂಗ್ರಹವಾಗುವ ಮುಜರಾಯಿ ದೇವಸ್ಥಾನಗಳಲ್ಲಿ ತಾಲೂಕಿನ ಹಣಗೆರೆಕಟ್ಟೆ ದೇವಸ್ಥಾನ ಕೂಡ ಒಂದಾಗಿದೆ.
ಈ ಬಾರಿ ಹುಂಡಿ ಎಣಿಕೆಯಲ್ಲಿ 73,23,910 ರೂ.ಸಿಕ್ಕಿದೆ.
ಇಂದು ತೀರ್ಥಹಳ್ಳಿಯಲ್ಲಿ ಸೌಹಾರ್ದ ಇಫ್ತಿಯಾರ್ ಕೂಟ!
ಮುಸ್ಲಿಂ ಬಾಂಧವರಿಂದ ಸೌಹಾರ್ದ ಇಫ್ತಿಯಾರ್ ಕೂಟ ಆಯೋಜನೆ ಮಾಡಲಾಗಿದೆ. ಮಾ. 27 ರಂದು ಸಂಜೆ 6.00 ಗಂಟೆಗೆ ಜಾಮಿಯಾ ಮಸೀದಿ, ಮಸೀದಿ ರಸ್ತೆ ತೀರ್ಥಹಳ್ಳಿಯಲ್ಲಿ ಏರ್ಪಡಿಸಲಾಗಿದೆ. ಈ ಸೌಹಾರ್ದ ಇಫ್ತಿಯಾರ್ ಕೂಟದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಭಾಗವಹಿಸುವ ಸೌಹಾರ್ದ ಕ್ಷಣ. ಈ ಸೌಹಾರ್ದ ಇಫ್ತಿಯಾರ್ ಕೂಟಕ್ಕೆ ಸರ್ವರಿಗೂ ಕೂಡ ಆದರದ ಸ್ವಾಗತವನ್ನು ಮುಸ್ಲಿಂ ಬಾಂಧವರು ಕೋರಿದ್ದಾರೆ.








