ಕರಾವಳಿ ಟಾಪ್ ನ್ಯೂಸ್
• ಪುತ್ತೂರು: ಮಾದಕ ವಸ್ತು ಸಾಗಾಟ; ಪತ್ನಿ ಸೇರಿ ಇಬ್ಬರ ಬಂಧನ
• ಕಾರ್ಕಳ: ಬೆಂಕಿಯನ್ನು ನಂದಿಸಲು ಹೋದ ವೃದ್ಧನಿಗೆ ಗಾಯ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಪುತ್ತೂರು: ಮಾದಕ ವಸ್ತು ಸಾಗಾಟ; ಪತ್ನಿ ಸೇರಿ ಇಬ್ಬರ ಬಂಧನ
ಪುತ್ತೂರು: ಜನವರಿ ತಿಂಗಳಿನಲ್ಲಿ ನಡೆದ ಎಂಡಿಎಂ ಮಾದಕ ವಸ್ತು ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು, ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಯ ಪತ್ನಿ ಜೊತೆಗೆ ಮತ್ತೊಬ್ಬರು ಕೂಡ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಮಹಮ್ಮದ್ ಹರ್ಷದ್, ಇರ್ದೆಯ ಮಹಮ್ಮದ್ ಆರೀಸ್, ಮುಸ್ತಫಾ ಹಾಗೂ ಇತರರನ್ನು ಬಂಧಿಸಿದ್ದರು. ಪ್ರಮುಖ ಆರೋಪಿಯಾದ ಬಂಟ್ವಾಳದ ಪೆರಾಜೆಯ ಅಶ್ರಫ್ ನನ್ನು ಕಳೆದ ತಿಂಗಳು ಪೊಲೀಸರು ಬಂಧಿಸಿ, ವಿಚಾರಣೆಯನ್ನು ನಡೆಸಿದಾಗ ಆತನ ಪತ್ನಿ ಶಮೀಮ ಮತ್ತು ಬಂಟ್ವಾಳದ ಪೆರಾಜೆ ನಿವಾಸಿ ಮಹಮ್ಮದ್ ಶಮೀಜ್ ಕೂಡ ಭಾಗಿಗಳಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಕಳೆದೆರಡು ದಿನಗಳ ಹಿಂದೆ ಶಮೀಮ ಮತ್ತು ಮಹಮ್ಮದ್ ಶಮೀಜ್ ರನ್ನು ಸಹ ಪೊಲೀಸರು ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎನ್ನಲಾಗಿದೆ. ಅಲ್ಲದೆ ಎಸ್ ಪಿ ನೇತೃತ್ವದ ತಂಡವೊಂದು ಪ್ರಕರಣದ ಮೂಲವನ್ನು ಹುಡುಕಿಕೊಂಡು ದೆಹಲಿಯತ್ತ ಪ್ರಯಾಣ ಬೆಳೆಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.
•ಕಾರ್ಕಳ: ಬೆಂಕಿಯನ್ನು ನಂದಿಸಲು ಹೋದ ವೃದ್ಧನಿಗೆ ಗಾಯ
ಕಾರ್ಕಳ: ತೋಟಕ್ಕೆ ಬೆಂಕಿ ಹತ್ತಿಕೊಂಡಿದ್ದರಿಂದ ಅದನ್ನು ನಂದಿಸಲು ಹೋದ ವೃದ್ಧರೊಬ್ಬರು ಗಾಯಗೊಂಡ ಘಟನೆ, ನಿಟ್ಟೆ ಗ್ರಾಮದ ಬಜೆಕ್ಕಳದಲ್ಲಿ ನಡೆದಿದೆ. ಗಾಯಾಳುವನ್ನು ಬಜೆಕ್ಕಳದ ಶಿವಪೂಜೆ ಮನೆಯ ನಿವಾಸಿ ಜಯಕರ್ ಶೆಟ್ಟಿ ಎಂದು ಗುರುತಿಸಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ಕಾರ್ಕಳದ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಶ್ ನೇತೃತ್ವದಲ್ಲಿ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಅಚ್ಯುತ್ ಕರ್ಕೆರ, ಹರಿಪ್ರಸಾದ, ಬಸವರಾಜ್, ಲೋಕೇಶ್ ಅವರು ರಕ್ಷಣಾ ಕಾರ್ಯಚರಣೆ ನಡೆಸಿ, ಜಯಕರ್ ಶೆಟ್ಟಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.







