ಮತ್ತೆ ತೀರ್ಥಹಳ್ಳಿ ವಾಗ್ದೇವಿ ಕಾಲೇಜು ಸಾಧನೆ!
– ರಾಜ್ಯಕ್ಕೆ 5 ರ್ಯಾಂಕ್: ವಾಣಿಜ್ಯದಲ್ಲಿ ಶೇ. 100ರ ಫಲಿತಾಂಶ
– ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಅಭಿನಂದನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಕಳೆದ ಬಾರಿ ಶೇಕಡ 100 ಫಲಿತಾಂಶವನ್ನು ಪಡೆದುಕೊಳ್ಳುವ ಮೂಲಕ ರಾಜ್ಯದ ಗಮನ ಸೆಳೆದಿದ್ದ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಾಗ್ದೇವಿ ಪದವಿ ಪೂರ್ವ ಕಾಲೇಜು ಈ ಬಾರಿಯೂ ಶೇಕಡ 100 ಫಲಿತಾಂಶವನ್ನು ಗಳಿಸುವ ಮೂಲಕ ದಾಖಲೆಯನ್ನು ನಿರ್ಮಿಸಿದೆ. ಕಳೆದ ವರ್ಷ ಈ ಕಾಲೇಜಿನಿಂದ ಹತ್ತಕ್ಕೂ ಹೆಚ್ಚು ರ್ಯಾಂಕ್ ಗಳಿಸಿದ್ದು ಈ ವರ್ಷ ಕಾಮರ್ಸ್ ವಿಭಾಗದಲ್ಲಿ ಶೇ. 100 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 99 ಫಲಿತಾಂಶ ದಾಖಲಿಸಿದೆ. ಅಲ್ಲದೆ ಎರಡು ವಿಭಾಗದಲ್ಲಿ ರಾಜ್ಯಕ್ಕೆ ತಲಾ 3 ರ್ಯಾಂಕ್ ಬಂದಿದೆ.
ಕಾಮರ್ಸ್ ವಿಭಾಗದಲ್ಲಿ ಅಮೋಘ ಸಾಧನೆ
ವಾಗ್ದೇವಿ ಪಿಯು ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ ದಾಖಲು ಮಾಡಿದ್ದು, ರಾಜ್ಯಕ್ಕೆ ಮೂರು ರ್ಯಾಂಕ್ ಕೊಟ್ಟಿದೆ. ಪ್ರತೀಕ್ ನಾಯ್ಕ್ 592, ಮಂದಾರ 591, ಸಂಜಯ್ 590 ಅಂಕಗಳ ಮೂಲಕ ರಾಂಕ್ ಸಾಧನೆ ಮಾಡಿದ್ದಾರೆ. ಅಲ್ಲದೆ 68 ಡಿಸ್ಟಿಂಕ್ಷನ್, 12 ಫಸ್ಟ್ ಕ್ಲಾಸ್ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದಲ್ಲೂ 2 ರ್ಯಾಂಕ್
ಕಳೆದ ವರ್ಷ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದ ವಾಗ್ದೇವಿ ಪಿಯು ಕಾಲೇಜು ಈ ವರ್ಷವೂ ಉತ್ತಮ ಸಾಧನೆ ಮಾಡಿದ್ದು, ರಾಜ್ಯಕ್ಕೆ 2 ರಾಂಕ್ ಕೊಟ್ಟಿದೆ. ಶೇ. 99 ಫಲಿತಾಂಶ ದಾಖಲು ಮಾಡಿದೆ. 97 ಡಿಸ್ಟಿಂಕ್ಷನ್, 38 ಫಸ್ಟ್ ಕ್ಲಾಸ್ ದಾಖಲು ಮಾಡಿದೆ. ಅನಿರುದ್ 592, ಸಮನ್ವಿತಾ 590 ಅಂಕ ಗಳಿಸಿದ್ದಾರೆ.
ಕಾಲೇಜು ಆಡಳಿತ ಮಂಡಳಿ ಅಭಿನಂದನೆ
ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಕಾಲೇಜಿನ ಸಾಧನೆ ಮುಂದುವರಿದಿದೆ. ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ವಾಗ್ದೇವಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.








