ತೀರ್ಥಹಳ್ಳಿ: ತುಂಗಾ ಪದವಿ ಪೂರ್ವ ಕಾಲೇಜಿಗೆ ಶೇಕಡ 100 ಫಲಿತಾಂಶ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಗುರುವಾರದಂದು ಪ್ರಕಟಗೊಂಡಿರುವ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ, ತೀರ್ಥಹಳ್ಳಿಯ ತುಂಗಾ ಪದವಿ ಪೂರ್ವ ಕಾಲೇಜಿಗೆ ಶೇಕಡ 100 ಫಲಿತಾಂಶ ಬಂದಿದೆ. ತುಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ, ತಾಲ್ಲೂಕಿಗೆ ಮತ್ತು ಶಿಕ್ಷಣ ಪಡೆದ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ. ಕುಮಾರಿ ಪ್ರತೀಕ್ಷ ಎನ್ ಅವರು 600ಕ್ಕೆ 563, ಕುಮಾರಿ ದೀಪಾಲಿ ಕೆ.ಎ ಅವರು 600ಕ್ಕೆ 560, ಕುಮಾರಿ ಅಮೂಲ್ಯ ಅವರು 600ಕ್ಕೆ 550, ಕುಮಾರಿ ವೈಷ್ಣವಿ ಡಿ ಅವರು 600ಕ್ಕೆ 539, ಕುಮಾರ ಸುರೇಶ್ ಎಸ್ ಎಸ್ ಅವರು 600ಕ್ಕೆ 531, ಕುಮಾರ ಪ್ರಧಾನ್ ಎಸ್ ಎಸ್ ಅವರು 600ಕ್ಕೆ 513 ಅಂಕಗಳನ್ನು ಗಳಿಸಿದ್ದಾರೆ. ಒಟ್ಟು ವಿದ್ಯಾಸಂಸ್ಥೆಗೆ ಶೇಕಡ 82ರಷ್ಟು ಫಲಿತಾಂಶವನ್ನು ತಂದುಕೊಟ್ಟಿರುವ ವಿದ್ಯಾರ್ಥಿಗಳ ಸಾಧನೆಗೆ ತುಂಗಾ ವಿದ್ಯಾ ವರ್ಧಕ ಸಂಘದ ಆಡಳಿತ ಮಂಡಳಿಯವರು, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.








