ಬಿಸಿಲು ಬಿಸಿಲು: ಆರೋಗ್ಯ ಹುಷಾರ್..!
– ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆಯ ವರದಿ
– ಏನೇನು ಮಾಡಬೇಕು…? ಏನೇನು ಮಾಡಬಾರದು..?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಏಪ್ರಿಲ್ 29ರಿಂದ ಮೇ 12ರ ವರೆಗೆ ಬಿಸಿಲಿನ ಶಾಖದ ತೀವ್ರತೆ ಹೆಚ್ಚಳಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ವರದಿ ನೀಡಿದ್ದು, ಮನುಷ್ಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳುವಂತೆ ತಜ್ಞರು ಕೂಡ ತಿಳಿಸಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ನಿಂದ 55 ಡಿಗ್ರಿ ಸೆಲ್ಸಿಯಸ್ ಗೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಅಂತಹ ಸಮಯದಲ್ಲಿ ಹೊರಗಡೆ ಹೋಗುವುದನ್ನು ನಿಷೇಧಿಸಿ, ಅದರಲ್ಲೂ ಮುಖ್ಯವಾಗಿ ತೆರೆದ ಪ್ರದೇಶಗಳಲ್ಲಿ ಸಂಚಾರ ನಡೆಸುವುದು ಉತ್ತಮವಲ್ಲ. ಇಂತಹ ಸಮಯದಲ್ಲಿ ಉಸಿರಾಟದ ತೊಂದರೆ ಅಥವಾ ಅಸ್ವಸ್ಥತೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ. ಶುದ್ಧ ಗಾಳಿಗಾಗಿ ಕೊಠಡಿಗಳ ಬಾಗಿಲನ್ನು ತೆರೆದಿಡಿ ಮತ್ತು ಇಂತಹ ಸಮಯದಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಿ, ಏಕೆಂದರೆ ಬಿಸಿಲಿನ ಶಾಖಕ್ಕೆ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.
ಬೆಂಕಿ ಬಗ್ಗೆ ಎಚ್ಚರ ಎಚ್ಚರ
ಲಿಂಬೆಹಣ್ಣಿನ ಶರಬತ್, ಮೊಸರು, ಮಜ್ಜಿಗೆಯಂತಹ ತಂಪು ಪಾನೀಯಗಳನ್ನು ಆಗಾಗ ಕುಡಿಯುತ್ತಿರಿ, ಇದರೊಂದಿಗೆ ವೀಳ್ಯದೆಲೆಯ ರಸವನ್ನು ಬಳಸುವುದು ಕೂಡ ಉತ್ತಮ. ಕಾರಿನಲ್ಲಿ ಗ್ಯಾಸ್ ಉತ್ಪನ್ನಗಳು,ಲೈಟರ್ ಗಳು, ಕಾರ್ಬೋನೇಟೆಡ್ ಪಾನೀಯಗಳು, ಸುಗಂಧ ದ್ರವ್ಯಗಳು ಮತ್ತು ಬ್ಯಾಟರಿಗಳನ್ನು ಬೇಸಿಗೆಯ ಸಮಯದಲ್ಲಿ ಇಟ್ಟುಕೊಳ್ಳಬೇಡಿ ಮತ್ತು ಬಂಕ್ ಗಳಲ್ಲಿ ಟ್ಯಾಂಕ್ ಒಳಗಡೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಪೂರ್ತಿಯಾಗಿ ತುಂಬಬೇಡಿ. ವಾಹನಗಳಲ್ಲಿ ಸಂಚರಿಸುವಾಗ ಕಿಟಕಿಗಳನ್ನು ತೆರೆದಿಡಿ, ವಾಹನದಲ್ಲಿ ಕೂಡ ಇಂಧನದ ಟ್ಯಾಂಕ್ ಅನ್ನು ಕೂಡ ಸಂಪೂರ್ಣವಾಗಿ ತುಂಬಿಸಬೇಡಿ, ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಸಂಜೆಯ ಹೊತ್ತಿಗೆ ತುಂಬಿಸಿಕೊಳ್ಳುವುದು ಒಳ್ಳೆಯದು, ಬೆಳಗ್ಗಿನ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸಿ. ವಾಹನದ ಟಯರ್ ಗಳಲ್ಲೂ ಅತಿಯಾಗಿ ಗಾಳಿಯನ್ನು ತುಂಬಿಸಬೇಡಿ.
ಹಾವು, ಚೇಳು ಬಗ್ಗೆ ಗಮನ ಇರಲಿ
ಬೇಸಿಗೆಯ ಧಗೆಗೆ ಹಾವು, ಚೇಳುಗಳಂತಹ ವಿಷಪೂರಿತ ಜೀವಿಗಳು ತಂಪು ಸ್ಥಳಗಳಲ್ಲಿ ಸಂಚರಿಸುತ್ತಿರಬಹುದು, ಮನೆಯ ಸುತ್ತಮುತ್ತ, ಗದ್ದೆ ತೋಟಗಳಲ್ಲಿ ಓಡಾಡುವಾಗ ಎಚ್ಚರಿಕೆವಹಿಸಿ. ಹೆಚ್ಚಿನ ಪ್ರಮಾಣದಲ್ಲಿ ನೀರು ಮತ್ತು ದ್ರವಾಹಾರವನ್ನು ಸೇವಿಸುತ್ತೀರಿ. ಗ್ಯಾಸ್ ಸಿಲಿಂಡರ್ ಅನ್ನು ಬಿಸಿಲಿನಲ್ಲಿ ಇಡುವ ಅಭ್ಯಾಸ ಒಳ್ಳೆಯದಲ್ಲ. ವಿದ್ಯುತ್ ಮೀಟರ್ ಮೇಲೆ ಹೆಚ್ಚಿನ ಹೊರೆ ಹಾಕಬೇಡಿ. ಅಗತ್ಯವಿರುವ ಕೊಠಡಿಗಳಲ್ಲಿ ಮಾತ್ರ ಎಸಿಯನ್ನು ಬಳಸಿ. ಅಂದರೆ ಹೊರಗಡೆ ಉಷ್ಣತೆ 45 ಡಿಗ್ರಿ ಸೆಲ್ಸಿಯಸ್ ನಿಂದ 47 ಡಿಗ್ರಿ ಸೆಲ್ಸಿಯಸ್ ನಷ್ಟು ಇದ್ದರೆ, ಮನೆಯೊಳಗಡೆ ಎಸಿಯ ಪ್ರಮಾಣವನ್ನು 24 ಡಿಗ್ರಿ ಸೆಲ್ಸಿಯಸ್ ನಿಂದ 25 ಡಿಗ್ರಿ ಸೆಲ್ಸಿಯಸ್ ನಷ್ಟು ಮಾತ್ರ ಇರಿಸಿ. ಪ್ರತಿ ಎರಡು ಮೂರು ಗಂಟೆಗಳಿಗೊಮ್ಮೆ 30 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ. ಬೆಳಿಗ್ಗೆ 10:೦೦ಗಂಟೆಯಿಂದ ಮಧ್ಯಾಹ್ನ 3:00ಗಂಟೆಯ ನಡುವಿನ ಸೂರ್ಯನ ಬೆಳಕು ನೇರವಾಗಿ ದೇಹದ ಮೇಲೆ ಬೀಳುವುದನ್ನು ತಪ್ಪಿಸಿ ಎಂದು ತಿಳಿಸಲಾಗಿದೆ.








