ತೀರ್ಥಹಳ್ಳಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಮಂಜುನಾಥ್
– ಸರ್ಕಾರದಿಂದ ನೇಮಕ: ಈ ಮೊದಲು 5 ವರ್ಷ ತೀರ್ಥಹಳ್ಳಿಯಲ್ಲಿ ಸೇವೆ
– ಪ್ರಭಾರ ಬಿಇಓ ಆಗಿದ್ದ ಗಿರಿರಾಜ್ ಅವರಿಂದ ಉತ್ತಮ ಸೇವೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಮಂಜುನಾಥ್ ಆರ್ ನೇಮಕಗೊಂಡಿದ್ದಾರೆ. ಈ ಮೊದಲು 5 ವರ್ಷ ತೀರ್ಥಹಳ್ಳಿಯಲ್ಲಿ ಕಾರ್ಯನಿರ್ವಹಿಸಿದ್ದರು. ಗಣೇಶ್ ಅವರು ಹೊಸನಗರಕ್ಕೆ ವರ್ಗಾವಣೆ ಆದ ಬಳಿಕ ಗಿರಿರಾಜ್ ಅವರು ಪ್ರಭಾರ ಶಿಕ್ಷಣ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಇದೀಗ ಮಂಜುನಾಥ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ತೀರ್ಥಹಳ್ಳಿ ತಾಲೂಕು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಎರಡರಲ್ಲೂ ಅತ್ಯುತ್ತಮ ಫಲಿತಾಂಶ ದಾಖಲು ಮಾಡಿದೆ. ಇದೀಗ ಹೊಸ ಶಿಕ್ಷಣ ಅಧಿಕಾರಿ ನೇಮಕವಾಗಿದ್ದು ಅಭಿನಂದನೆಗಳು.








