ಪೆಟ್ರೋಲ್, ಡೀಸೆಲ್ ದರ ರೂ.3 ಏರಿಕೆ!
– ಭಾರತಕ್ಕೂ ತಟ್ಟಿದ ಯುದ್ಧದ ಎಫೆಕ್ಟ್
– ಜನರೇ, ಕಡಿಮೆ ಓಡಾಡಿ..ಖರ್ಚು ಕಡಿಮೆ ಮಾಡಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ, ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ತೈಲ ಬೆಲೆ ಪರಿಷ್ಕರಣೆಗೆ ಮುಂದಾಗಿವೆ. ಇದರ ಪರಿಣಾಮವಾಗಿ ಇಂದು (ಮೇ 15, ಶುಕ್ರವಾರ) ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್ಗೆ 3 ರೂಪಾಯಿ ಹೆಚ್ಚಳವಾಗಿದೆ. ಮೂಲಗಳ ಪ್ರಕಾರ, ಬೆಲೆ ಏರಿಕೆಗೆ ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರಗಳು ಗಣನೀಯವಾಗಿ ಏರಿಕೆಯಾಗಿವೆ.
ಕಳೆದ 11 ವಾರಗಳಿಂದ ಇನ್ಪುಟ್ ವೆಚ್ಚ ಹೆಚ್ಚಾಗಿದ್ದರೂ ಸರ್ಕಾರಿ ತೈಲ ಕಂಪನಿಗಳು ಬೆಲೆ ಏರಿಕೆ ಮಾಡದೆ ಸ್ಥಿರವಾಗಿ ಕಾಯ್ದುಕೊಂಡಿದ್ದವು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಾಚರಣೆಯ ಆರ್ಥಿಕ ಹೊರೆಯನ್ನು ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಅಲ್ಪ ಭಾಗದ ಹೆಚ್ಚಳ ಅನಿವಾರ್ಯವಾಗಿದೆ ಎಂದು ತಿಳಿದುಬಂದಿದೆ.








