ಕುಡುಮಲ್ಲಿಗೆ: ಕೃಷಿ & ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಘಟಕ ಶುರು
– ಧಾತ್ರಿ ರೈತ ಉತ್ಪಾದಕರ ಕಂಪನಿಯ ನೂತನ ಉತ್ಪಾದನಾ ಘಟಕ ಉದ್ಘಾಟನೆ
– ಅಡಿಕೆ ಹಾಗೂ ಇತರೆ ಉತ್ಪನ್ನಗಳು ಮಾರುಕಟ್ಟೆಗೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಕೃಷಿ ಇಲಾಖೆ ಶಿವಮೊಗ್ಗ, ನಬಾರ್ಡ್ ಬೆಂಗಳೂರು, ಧಾತ್ರಿ ಎಫ್ಪಿಸಿ ಮತ್ತು ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ಸಹಯೋಗದಲ್ಲಿ “ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಘಟಕದ ಉದ್ಘಾಟನಾ ಕಾರ್ಯಕ್ರಮ ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆಯಲ್ಲಿ ನಡೆಯಿತು. ಈ ಮೂಲಕ ಗ್ರಾಮೀಣ ಅಭಿವೃದ್ಧಿ ಜತೆಗೆ ಉದ್ಯೋಗ ಸೃಷ್ಟಿಯಲ್ಲಿ ಈ ಘಟಕ ಸೇವೆ ಸಲ್ಲಿಸಲಿದೆ.
ಧಾತ್ರಿ ರೈತ ಉತ್ಪಾದಕರ ಕಂಪನಿಯ ನೂತನ ಉತ್ಪಾದನಾ ಘಟಕ ಉದ್ಘಾಟನೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ ತೀರ್ಥಹಳ್ಳಿ ತಾಲ್ಲೂಕಿನ ಕುಡುಮಲ್ಲಿಗೆಯ ಧಾತ್ರಿ ರೈತ ಉತ್ಪಾದಕರ ಕಂಪನಿ ಲಿ, (FPC) ಆವರಣದಲ್ಲಿ ಮೇ 13, 2026 ರಂದು ನೂತನ ಉತ್ಪಾದನಾ ಘಟಕದ ಉದ್ಘಾಟನೆ ಮತ್ತು ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಲೋಕಾರ್ಪಣೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ತಾವು ಬೆಳೆದ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಲು ಇಂತಹ ಉತ್ಪಾದನಾ ಘಟಕಗಳು ಸಹಕಾರಿ ಎಂದು ಆಶಿಸಿದರು.
ಕಂಪನಿಯು ಮಾರುಕಟ್ಟೆಗೆ ಪರಿಚಯಿಸಿರುವ ಹೊಸ ಮೌಲ್ಯವರ್ಧಿತ ಉತ್ಪನ್ನಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಧಾತ್ರಿ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷರಾದ ವೈ. ಕೃಷ್ಣಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶರತ್ ಪಿ. ಗೌಡ: ಡಿಡಿಎಂ, ನಬಾರ್ಡ್, ಶಿವಮೊಗ್ಗ.ಲ್, ಮಂಜುಳಾ ಜಿ ಉಪನಿರ್ದೇಶಕರು, ಕೃಷಿ ಇಲಾಖೆ, ಶಿವಮೊಗ್ಗ, ಪ್ರವೀಣ್, ಸಹಾಯಕ ಕೃಷಿ ನಿರ್ದೇಶಕರು, ತೀರ್ಥಹಳ್ಳಿ, ರಾಘವೇಂದ್ರ ಕಾಮತ್, ಶಾಖಾ ವ್ಯವಸ್ಥಾಪಕರು, ಕರ್ನಾಟಕ ಬ್ಯಾಂಕ್, ತೀರ್ಥಹಳ್ಳಿ. ಬಿ. ಟಿ. ಭದ್ರಿಶ್: ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಚೈತನ್ಯ ಸಂಸ್ಥೆ, ಶಿವಮೊಗ್ಗ ಇವರು ಉಪಸ್ಥಿತರಿದ್ದರು
ಬಿಡುಗಡೆಯಾದ ಪ್ರಮುಖ ಉತ್ಪನ್ನಗಳು:
ಮಲೆನಾಡು ತಾಂಬೂಲ
ಮಲೆನಾಡು ಕಾಳಮೆಣಸು
ಮಲೆನಾಡು ಅಕ್ಕಿ ಹಿಟ್ಟು
ಮಲೆನಾಡು ಅಕ್ಕಿ
ಪುಡಿ ಬೆಲ್ಲ
ಶುದ್ಧ ಅಡಿಕೆ ಪುಡಿ
ಮಲೆನಾಡ ಅಭಿವೃದ್ಧಿಗೆ ಇಂತಹ ಘಟಕ ಮಾದರಿ
ಮಲೆನಾಡಲ್ಲಿ ಅಡಿಕೆ ಜತೆ ಜತೆಗೆ ಸ್ವ ಉದ್ಯೋಗ, ತಯಾರಿಕಾ ಘಟಕ ಸಹಕಾರಿ. ಇಂತಹ ಯೋಜನೆಗಳು ಇನ್ನಷ್ಟು ವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಶಿವಮೊಗ್ಗ, ನಬಾರ್ಡ್ ಬೆಂಗಳೂರು ಮತ್ತು ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿಯು ಸೇವೆ ಸಲ್ಲಿಸುತ್ತಿವೆ.








