ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಶ್ರೀನಾಥ್ ಜೋಯ್ಸ್!
– ತೀರ್ಥಹಳ್ಳಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೂಪರ್
– ಕಾರ್ಯದರ್ಶಿಯಾಗಿ ಲಯನ್ ಕಾರ್ತಿಕ್ ಹೆಚ್.ವಿ, ಖಜಾಂಚಿಯಾಗಿ ಲಯನ್ ಧರ್ಮಯ್ಯ ಅಧಿಕಾರ ಸ್ವೀಕಾರ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ತೀರ್ಥಹಳ್ಳಿಯ ಲಯನ್ಸ್ ಕ್ಲಬ್ ವತಿಯಿಂದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶುಕ್ರವಾರ ಸಂಜೆ ತೀರ್ಥಹಳ್ಳಿಯ ನೆಸ್ಟ್ ಹೋಂ ಸ್ಟೇ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ PMJF ಲಯನ್ ಡಾ. ಜಯರಾಮ್ (II VDG, ಜಿಲ್ಲೆ 317H) ಮುಖ್ಯ ಅತಿಥಿಯಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ಮಾಜಿ ಗೃಹ ಸಚಿವರು, ತೀರ್ಥಹಳ್ಳಿ ಶಾಸಕರು ಆದ ಅರಗ ಜ್ಞಾನೇಂದ್ರ ಗೌರವ ಅತಿಥಿಯಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು.
2026–27ನೇ ಸಾಲಿನ ಅಧ್ಯಕ್ಷರಾಗಿ ಲಯನ್ ಶ್ರೀನಾಥ್ ಜೋಯ್ಸ್ , ಕಾರ್ಯದರ್ಶಿಯಾಗಿ ಲಯನ್ ಕಾರ್ತಿಕ್ ಹೆಚ್.ವಿ. ಖಜಾಂಚಿಯಾಗಿ ಲಯನ್ ಧರ್ಮಯ್ಯ ಅಧಿಕಾರ ಸ್ವೀಕರಿಸಿದರು. 2025–26ನೇ ಸಾಲಿನ ಅಧ್ಯಕ್ಷ ಲಯನ್ ಶ್ರೀಕಾಂತ್ ಭಟ್ ಕಾರ್ಯದರ್ಶಿ ಹಾಗೂ ಎಲ್ಲಾ ಸದಸ್ಯರನ್ನು ಅವರ ಸೇವೆಯನ್ನು ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಸದಸ್ಯರು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಲಯನ್ಸ್ ಗಣ್ಯರ ಸಮಾಗಮ: ಅಧಿಕಾರ ಸ್ವೀಕಾರ!
ಪ್ರಥಮ ಉಪಾಧ್ಯಕ್ಷರಾದ ಲ//ದಿವಾಕರ್ ಕಿಮ್ಮನೆ, ದ್ವಿತೀಯ ಉಪಾಧ್ಯಕ್ಷರಾದ ಲ//ರಾಘವೇಂದ್ರ ಎಸ್, ತೃತೀಯ ಉಪಾಧ್ಯಕ್ಷರಾದ ಲ//ಲಿಂಗರಾಜ ಕಟ್ಟೆ, ಕಾರ್ಯದರ್ಶಿಗಳಾದ ಲ//ಕಾರ್ತಿಕ್ ಎಚ್.ವಿ, ಸಹ ಕಾರ್ಯದರ್ಶಿಗಳಾದ ಲ//ಅನಂತ ಪದ್ಮನಾಭ ಆಚಾರ್ಯ, ಖಜಾಂಚಿಗಳಾದ ಲ//ಕೌಲಾನಿ ಧರ್ಮಯ್ಯ, ಸಹ ಖಜಾಂಚಿಗಳಾದ ಲ//ಪ್ರೊ.ಡಾ//ಪ್ರಶಾಂತ್, ಲಯನ್ ಟೇಮರ್ ಲ//ಪ್ರಶಾಂತ್ ಹೆಗ್ಗಾರ್, ಲಯನ್ ಟೇಲ್ ಟ್ವಿಸ್ಟರ್ ಲ//ಜಗದೀಶ್ ಕುಡುವಳ್ಳಿ, ಲಯನ್ಸ್ ಕ್ಲಬ್ ನ ನಿರ್ದೇಶಕರಾದ ಲ//ಸುಧೀರ್ ಎಚ್.ಆರ್, ಲ//ಪಾಂಡುರಂಗಪ್ಪ ಎಚ್, ಲ//ರಾಮರಾವ್ ಎನ್.ಎಸ್, ಲ//ನಿರ್ಮಲಾನಂದ ವೈ. ಎಸ್, ಲ//ಸತೀಶ್ ಎಚ್.ಎನ್, ಲ//ಶ್ರೀಧರ ಕೆ.ಆರ್, ಲ//ಪ್ರಸನ್ನ ಕುಮಾರ್ ಬಿ.ಟಿ, ಲ//ನಾಗೇಂದ್ರ ಜಿ.ಎಂ, ಲ//ಸಿರಿಬೈಲು ಧರ್ಮೇಶ್, ಲ//ಹರೀಶ್ ಬಿ.ಎಸ್, ಲ//ಶಿವಪಾಲ್ ಜಿ.ವಿ, ಲ//ಮೋಹನ್ ಎಚ್.ಬಿ, ಲ//ಇಬ್ರಾಹಿಂ ಶರೀಫ್, ಲ//ಕನ್ನಂಗಿ ಶೇಷಾದ್ರಿ, ಲ//ಮುರಳಿ ನಂಬಳ, ಲ//ಕೆ.ಆರ್.ಅಶೋಕ್, ಲ//ಎಚ್.ಎನ್.ಈಶ್ವರ್, ಮೆಂಬರ್ ಶಿಪ್ ಛೇರ್ಮನ್ ಲ//ಪ್ರಭಾಕರ ಹೆಗಡೆ, ಪಿಎಂಜೆಎಫ್ ಸರ್ವಿಸ್ ಛೇರ್ಮನ್ ಲ//ಬಿ.ಕೆ. ಹರ್ಷ, ಎಲ್ ಸಿ ಐ ಎಫ್ ಛೇರ್ಮನ್ ಲ//ರಾಜಣ್ಣ ತನಿಕಲ್, ಕ್ಲಬ್ ಪಿಆರ್ ಒ ಲ//ರಘುನಾಥ ಎಚ್.ಎಂ ಅವರು ಪದವಿಯನ್ನು ಸ್ವೀಕರಿಸಿದರು.






