ಬೊಮ್ಮಲಾಪುರ ಅಮ್ಮನವರ ಜಾತ್ರೆ ಸಂಭ್ರಮ!
– ಏ.23 ರಿಂದ ಏ.27ರವರೆಗೆ ತ್ರಿಪುರಾಂತಕಿ ಅಮ್ಮನವರ ರಥೋತ್ಸವ
– ಮಲೆನಾಡಿನ ಪ್ರಸಿದ್ಧ ಕಾರಣಿಕ ದೇವಾಲಯ ಬೊಮ್ಮಲಾಪುರ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ಕೊಪ್ಪ ತಾಲೂಕಿನ ಬೊಮ್ಮಲಾಪುರದ ತ್ರಿಪುರಾಂತಕಿ ಅಮ್ಮನವರ ರಥೋತ್ಸವವು ಏಪ್ರಿಲ್ 23ರ ಗುರುವಾರದಿಂದ ಏಪ್ರಿಲ್ 27ರ ಸೋಮವಾರದವರೆಗೆ ನಡೆಯಲಿದೆ.
ಏ.23ರ ಗುರುವಾರದಂದು ಸಿದ್ಧಿವಿನಾಯಕ ಪೂಜೆ, ಏ.24ರ ಶುಕ್ರವಾರದಂದು ಧ್ವಜಾರೋಹಣ, ವಸಂತ ಪೂಜೆ, ಸಂತರ್ಪಣೆ ಮತ್ತು ರಾತ್ರಿ ದೀಪಾರಾಧನೆ ನೆರವೇರಲಿದೆ. ಏ.25ರ ಶನಿವಾರದಂದು ತ್ರಿಪುರಾಂತಕಿ ಅಮ್ಮನವರ ರಥೋತ್ಸವ ಜರುಗಲಿದೆ.
ಏ.26ರ ಭಾನುವಾರದಂದು ಕುಂಕುಮೋತ್ಸವ, ಅವಭೃತ ಸ್ನಾನ(ವಸಂತ ಪೂಜೆ), ಸುವಾಸಿನಿ ಪೂಜೆ, ಸಂತರ್ಪಣೆ ಮತ್ತು ರಾತ್ರಿ ಸಮಯದಲ್ಲಿ ಮಹೋತ್ಸವ ನಡೆಯಲಿದೆ.
ಕೊನೆಯ ದಿನವಾದ ಏ.27ರ ಸೋಮವಾರದಂದು ಶುದ್ಧ ಸಂಪ್ರೋಕ್ಷಣೆ, ಕಲಶಾಭಿಷೇಕ, ತುಲಾಭಾರ, ಸಂತರ್ಪಣೆ ಮತ್ತು ರಾತ್ರಿ ದೀಪಾರಾಧನೆ ನೆರವೇರಲಿದೆ ಎಂದು ತ್ರಿಪುರಾಂತಕಿ ಅಮ್ಮನವರ ಸೇವಾ ಸಂಘವು ಮಾಹಿತಿ ನೀಡಿದೆ.








