ಹಿಜಾಬ್ ನಿಷೇಧ ರದ್ದು-ರಾಜಕೀಯ ಲಾಭಕ್ಕಾಗಿ ಮಾತ್ರ!
– ಶಿವಸೇನಾ ಕರ್ನಾಟಕ ಖಂಡನೆ: ರಾಜಕೀಯಕ್ಕೆ ದಿಕ್ಕಾರ
– ಶಿವಸೇನಾ ರಾಜ್ಯ ಉಪಾಧ್ಯಕ್ಷ ಆನಂದ್ ಶೆಟ್ಟಿ ಅಡ್ಯಾರ್ ಹೇಳಿಕೆ
ಬೆಂಗಳೂರು/ ಉಡುಪಿ: ರಾಜ್ಯ ಸರ್ಕಾರವು ಹಿಜಾಬ್ ನಿಷೇಧವನ್ನು ಹಿಂಪಡೆದದ್ದು ಕೇವಲ ರಾಜಕೀಯ ತೆವಲಿಗಾಗಿ ಮಾತ್ರ ಎಂದು ಶಿವಸೇನಾ ರಾಜ್ಯ ಉಪಾಧ್ಯಕ್ಷ ಆನಂದ್ ಶೆಟ್ಟಿ ಅಡ್ಯಾರ್ ತಿಳಿಸಿದ್ದಾರೆ. ಈ ನಿರ್ಧಾರವನ್ನು ಶಿವಸೇನೆ ಖಂಡಿಸುತ್ತದೆ. ಶಾಲಾ ಕಾಲೇಜುಗಳು ಎಂದಿಗೂ ಭವಿಷ್ಯ ರೂಪಿಸುವ ಎಲ್ಲರಿಗೂ ಸಮಾನತೆಯ ಪಾಠ ಹೇಳುವ ಕೇಂದ್ರಗಳಾಗಬೇಕು ಹೊರತು. ವಿದ್ಯಾರ್ಥಿಗಳ ಜೀವನವನ್ನೇ ಹಾಳುಗೆಡವುವ ಮತಾಂಧತೆಯ ಕೇಂದ್ರ ಆಗಬಾರದು.
ದೇಶದ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹೀನ ಉದ್ದೇಶ ಇದರಲ್ಲಿ ಅಡಗಿದೆ..ಲ್ ತಮ್ಮ ಓಟ್ ಬ್ಯಾಂಕ್ ರಾಜಕೀಯದಲ್ಲಿ ಮುಂದೆ ಭವಿಷ್ಯದ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲದೇ ಇರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಈಗಾಗಲೇ ಇದ್ದ ಕಾನೂನನ್ನು ಯಾವುದೋ ಕಾರಣದ ನೆಪವೊಡ್ಡಿ ನಿಷೇಧ ಹಿಂಪಡೆದದ್ದು ಅಕ್ಷ್ಯಮ್ಮ ಅಪರಾಧ,ಈ ನಿರ್ಧಾರವನ್ನು ಖಂಡಿಸಿ ಪ್ರತಿಭಟಿಸುವ ಪ್ರತಿಯೊಬ್ಬ ಯುವ ಜನತೆಯನ್ನು ಶಿವಸೇನೆಯು ಬೆಂಬಲಿಸಲಿದೆ.
ಓಲೈಕೆ ರಾಜಕಾರಣ ಮತ್ತೆ ರಾಜ್ಯದಲ್ಲಿ ಆರಂಭಿಸಿದೆ ಜೊತೆಗೆ ನಿಷೇಧ ವಾಪಾಸ್ ನಿಂದ ಮುಂದೆ ನಡೆಯುವ ಅನಗತ್ಯ ಅನಾಹುತಗಳಿಗೆ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.








