ಅಡಿಕೆ , ಕೊಬ್ಬರಿ ಎರಡಕ್ಕೂ ಒಳ್ಳೆ ದರ!
– ಮತ್ತೆ ಲಕ್ಷದತ್ತ ಅಡಿಕೆ ಸರಕು: ಅಡಿಕೆಗೆ ಬಂಪರ್ ಬೆಲೆ
– ಹೊಸ ರಾಶಿ ಜತೆ ಹಳೆ ರಾಶಿಗೂ ಡಿಮ್ಯಾಂಡ್
– ಕೊಬ್ಬರಿಗೆ ಉತ್ತಮ ದರ: ಕಾಯಿ, ಎಳೆ ನೀರಿಗೂ ಡಿಮ್ಯಾಂಡ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿವಮೊಗ್ಗ/ಚನ್ನಗಿರಿ: ಅಡಿಕೆ ಮತ್ತು ಕೊಬ್ಬರಿ ಮಾರುಕಟ್ಟೆಯಲ್ಲಿ ಬೆಳೆಗಾರರಿಗೆ ಸಿಹಿ ಸುದ್ಧಿ ಸಿಕ್ಕಿದೆ. ಉತ್ತಮ ಗುಣಮಟ್ಟದ ಅಡಿಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆಯು ಅಧಿಕ ಪ್ರಮಾಣದಲ್ಲಿ ಸೃಷ್ಟಿಯಾಗಿರುವ ಪರಿಣಾಮದಿಂದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಖರೀದಿಯು ಬಿರುಸುಗೊಂಡಿದೆ. ಕೇವಲ ಹೊಸ ರಾಶಿಗಷ್ಟೇ ಅಲ್ಲದೆ ಹಳೆ ರಾಶಿಗೂ ಉತ್ತಮ ಬೇಡಿಕೆ ಇದ್ದು, ತೀರ್ಥಹಳ್ಳಿ ಮಾರುಕಟ್ಟೆಯೊಂದರಲ್ಲೇ ಸರಕು ಅಡಿಕೆಯ ಬೆಲೆ 95.೦೦೦ದ ಗಡಿಯನ್ನು ದಾಟಿದೆ.
ಸರಕು ಅಡಿಕೆಗೆ 95.೦59 ಗರಿಷ್ಠ ಬೆಲೆಯಿದ್ದು, ಶಿವಮೊಗ್ಗದಲ್ಲಿ ಸರಕು ಅಡಿಕೆಗೆ 68.919 ಮತ್ತು ಚನ್ನಗಿರಿಯಲ್ಲಿ ರಾಶಿ ಅಡಿಕೆಗೆ 55.100 ರೂಪಾಯಿಗಳಿವೆ.
ಅದೇ ರೀತಿ ಬೆಟ್ಟೆ ಅಡಿಕೆಗೆ 61.300 ಗಳಷ್ಟು ಗರಿಷ್ಠ ಬೆಲೆ ಹಾಗೂ 59.೦೦9 ರೂಪಾಯಿಗಳಷ್ಟು ಮಾದರಿ ಬೆಲೆ ಮತ್ತು ಗೊರಬಲು ಅಡಿಕೆಗೆ 41.211 ರೂಪಾಯಿಗಳಷ್ಟು ಗರಿಷ್ಠ ಬೆಲೆ ಹಾಗೂ 39.180 ರೂಪಾಯಿಗಳಷ್ಟು ಮಾದರಿ ಬೆಲೆ ಇದೆ ಎನ್ನುವ ಮಾಹಿತಿ ಲಭಿಸಿದೆ.
ಕೊಬ್ಬರಿಗೆ ಉತ್ತಮ ದರ: ಕಾಯಿ, ಎಳೆ ನೀರಿಗೂ ಡಿಮ್ಯಾಂಡ್!
ಕೊಬ್ಬರಿ ಮಾರುಕಟ್ಟೆಯಲ್ಲೂ ಅಡಿಕೆಯ ಬೆಲೆಯು ತನ್ನ ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಕ್ವಿಂಟಾಲ್ ಗೆ 33.533 ರೂಪಾಯಿಗಳಿವೆ ಎಂದು ವರದಿ ತಿಳಿಸಿದೆ. ಶಿವಮೊಗ್ಗ ,ಚನ್ನಗಿರಿ ಮತ್ತು ತಿಪಟೂರು ಮಾರುಕಟ್ಟೆಗಳಲ್ಲಿ ಅಡಿಕೆಗೆ ಉತ್ತಮ ಬೆಲೆಗಳಿದ್ದು, ಬೆಳೆಗಾರರಿಗೆ ಇದು ಅತ್ಯಂತ ಲಾಭದಾಯಕ ಅವಧಿಯಾಗಿದೆ.








