- ತೀರ್ಥಹಳ್ಳಿ ಮೂಲದ ಪೊಲೀಸ್ ಅಧಿಕಾರಿ ರಾಜೀನಾಮೆ
ಶಿವಮೊಗ್ಗ: ಪೊಲೀಸ್ ಇಲಾಖೆಯಲ್ಲಿ ಮತ್ತೆ ರಾಜೀನಾಮೆ ಪರ್ವ ಶುರುವಾಗಿದೆ. ರಾಯಚೂರು ಜಿಲ್ಲೆಯಲ್ಲಿ ಕೆಲಸ ಪ್ರಾರಂಭಿಸಿದ ಹಂಪಿ ಡಿವೈಎಸ್ಪಿ ಎಸ್.ಎಸ್ ಕಾಶೀಗೌಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಈ ರಾಜೀನಾಮೆ ಮತ್ತೆ ಸದ್ದು ಮಾಡತೊಡಗಿದೆ.
ಬಳ್ಳಾರಿ ರೇಂಜ್ ಐಜಿಪಿ ನಡೆಸಿದ ಡಿವೈಎಸ್ಪಿಗಳ ಸಭೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಇನ್ನಿತರ ಅಕ್ರಮಗಳ ಬಗ್ಗೆ ಈ ವಿಷಯದಲ್ಲಿ ಪೆÇಲೀಸ್ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಚರ್ಚೆಯಾಗುತ್ತಿರುವಾಗ ಐಜಿಪಿ ಹಾಗೂ ಡಿವೈಎಸ್ಪಿ ಕಾಶೀ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ನೊಂದ ಡಿವೈಎಸ್ಪಿ ಕಾಶಿ ಸಭೆಯಿಂದ ಹೊರಬಂದವರೇ ನೇರವಾಗಿ ಬಳ್ಳಾರಿ ಎಸ್ಪಿ ಕಛೇರಿಗೆ ತೆರಳಿ ರಾಜೀನಾಮೆ ನೀಡಿದ್ದಾರೆ.
ಡಿವೈಎಸ್ಪಿ ಎಸ್.ಎಸ್ ಕಾಶೀಗೌಡ ತೀರ್ಥಹಳ್ಳಿ ಮೂಲದವರಾಗಿದ್ದು, ದೇವಂಗಿ ಸಮೀಪ ಹಿಲೀಕೆರೆ ನಿವಾಸಿಯಾಗಿದ್ದು ಹಿಲೀಕೆರೆ ದಿವಂಗತ ಜಮೀಲ್ದಾರ್ ಶ್ರೀನಿವಾಸಗೌಡರ ಪುತ್ರ ಹಾಗೂ ಸವ್ಯಸಾಚಿರವರ ಸಹೋದರರಾಗಿದ್ದು, ತೀರ್ಥಹಳ್ಳಿ ತುಂಗಾಕಾಲೇಜು ವಿದ್ಯಾರ್ಥಿಯಾಗಿದ್ದರು. 25 ವರ್ಷಗಳ ಹಿಂದೆ ಸಬ್ ಇನ್ಸ್ಪೆಕ್ಟರ್ ಆಗಿ ರಾಯಚೂರಿನಲ್ಲಿ ಸೇವೆ ಪ್ರಾರಂಭಿಸಿ 25 ವರ್ಷಗಳ ಅವಧಿಯಲ್ಲಿ ಸುಮಾರು 37 ಬಾರಿ ಅಕಾಲವರ್ಗಾವಣೆಗೆ ಒಳಪಟ್ಟವರು. ಲೋಕಾಯುಕ್ತ ಎಸಿಬಿ, ಸಿಒಡಿ, ಸಿಸಿಬಿ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿರುವವರಾಗಿದ್ದಾರೆ. ಇವರ ಅಕಾಲ ವರ್ಗಾವಣೆ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ನಡೆದ ಪ್ರಕರಣದಲ್ಲಿ ಹಿರಿಯ ಪೆÇೀಲಿಸ್ ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ಸಹ ದಾಖಲಾಗಿತ್ತು.







