ತೀರ್ಥಹಳ್ಳಿ ವಾಗ್ದೇವಿ ಶಾಲೆ ರಾಜ್ಯಕ್ಕೆ 2ನೇ ರ್ಯಾಂಕ್ ಸಾಧನೆ..!
– ವಾಗ್ದೇವಿ ಶಾಲೆಯ ಅನಘ ಕೆ.ಎಸ್ ಅವರು 625ಕ್ಕೆ 624 ಅಂಕ
– ವಾಗ್ದೇವಿ ಶಾಲೆಯ ಸಾಧನೆಯ ಹೆಜ್ಜೆ: ಶೇ.ನೂರರ ಫಲಿತಾಂಶ
– ಅತ್ಯುತ್ತಮ ಸಾಧನೆ ಮಾಡಿದ 157 ವಿದ್ಯಾರ್ಥಿಗಳು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಒಂದಾದ ವಾಗ್ದೇವಿ ಶಾಲೆ ಈ ಬಾರಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಶೇಕಡಾ 100 ಫಲಿತಾಂಶ ದಾಖಲು ಮಾಡಿದ್ದು, ರಾಜ್ಯಕ್ಕೆ 2 ನೇ ರ್ಯಾಂಕ್ ಬಂದಿದೆ. ವಾಗ್ದೇವಿ ಶಾಲೆಯ ಅನಘ ಕೆ.ಎಸ್ ಅವರು 625ಕ್ಕೆ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮಲೆನಾಡಿಗೆ ಹೆಮ್ಮೆ ತಂದಿದ್ದಾರೆ. ರಾಜ್ಯಕ್ಕೆ ಅನೇಕ ಸ್ಥಾನ ನೀಡಿರುವ ವಾಗ್ದೇವಿ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕಿನಲ್ಲೇ ಅತೀ ಹೆಚ್ಚು ಅಂದರೆ 157 ವಿದ್ಯಾರ್ಥಿಗಳಿದ್ದು, ಅಷ್ಟು ಮಂದಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು
ಶಾಲೆಯ 20 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. 103 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. 54 ಮಂದಿ ಮೊದಲ ದರ್ಜೆಯಲ್ಲಿ ಪಾಸಾಗಿದ್ದಾರೆ.
ಆಡಳಿತ ಮಂಡಳಿ ಅಭಿನಂದನೆ: ಪೋಷಕರ ಹರ್ಷ
ವಾಗ್ದೇವಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದ ಅನಘ ಅವರಿಗೆ ಹಾಗೂ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಅಧ್ಯಕ್ಷರಾದ ಜಗದೀಶ್ ಮತ್ತು ಎಲ್ಲಾ ನಿರ್ದೇಶಕರು, ಶಾಲಾ ಮುಖ್ಯ ಉಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ವಾಗ್ದೇವಿ ಶಾಲೆಯ ಸಾಧನೆಯ ಹೆಜ್ಜೆ
ರಾಜ್ಯಕ್ಕೆ 2 ನೇ ರ್ಯಾಂಕ್ ಸಾಧನೆ
ವಾಗ್ದೇವಿ ಶಾಲೆಯ ಅನಘ ಕೆ.ಎಸ್ ಅವರು 625ಕ್ಕೆ 624 ಅಂಕ.
ಶಿಕ್ಷಕ ದಂಪತಿಗಳ ಪುತ್ರಿ ಅನಘ
ಅನಘ ಅವರು ಕೋಣಂದೂರು ಸಮೀಪದ ಮೇಲಿನ ಕಡಗೋಡು ಗ್ರಾಮದ ಶಿಕ್ಷಕ ದಂಪತಿಗಳಾದ ಖಂಡಕ ಶಾಲೆಯ ಶಿಕ್ಷಕ ಶಿವಕುಮಾರ್ ಕೆ. ಎಂ ಹಾಗೂ ಕೊಂಡ್ಲುರು ಪ್ರೌಢ ಶಾಲೆ ಶಿಕ್ಷಕಿ ಮಂಗಳ ಅವರ ಪುತ್ರಿ. ಈಕೆ ಸಾಧನೆಗೆ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.
– ತೀರ್ಥಹಳ್ಳಿ ತಾಲೂಕಿನಲ್ಲೇ ಅತೀ ಹೆಚ್ಚು ಮಕ್ಕಳು: ಶೇಕಡಾ 100 ಫಲಿತಾಂಶ ದಾಖಲು
– ಶಾಲೆಯ 20 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕದ ಸಾಧನೆ
– 103 ಮಂದಿ ಡಿಸ್ಟಿಂಕ್ಷನ್ ಅಲ್ಲಿ ಪಾಸ್
– 54 ಮಂದಿ ಮೊದಲ ದರ್ಜೆಯಲ್ಲಿ ಪಾಸ್








