ಸೋತು ಗೆದ್ದ ನಾಯಕ: ಜೈ ಹೋ ಜೀವರಾಜ್..!
– 3 ವರ್ಷದ ಹೋರಾಟಕ್ಕೆ ಸಿಕ್ಕ ಗೆಲುವು: ಎಲ್ಲೆಡೆ ವಿಜಯೋತ್ಸವ
– ದೇಶದ ಗಮನ ಸೆಳೆದ ಶೃಂಗೇರಿ ಕ್ಷೇತ್ರದ ಮರು ಫಲಿತಾಂಶ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶೃಂಗೇರಿ: ಶೃಂಗೇರಿ ಶಾಸಕರಾಗಿ ಅಧಿಕೃತವಾಗಿ ಡಿ.ಎನ್.ಜೀವರಾಜ್ ಅವರನ್ನು ಚುನಾವಣಾ ಆಯೋಗ ಘೋಷಿಸಿದೆ. ಈ ಮೂಲಕ ಜೀವರಾಜ್ ಅವರ 3 ವರ್ಷದ ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಹೈಕೋರ್ಟ್ ಆದೇಶದ ಮೇರೆಗೆ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿತ್ತು, ಆದರೆ ಫಲಿತಾಂಶ ಘೋಷಣೆ ಆಗಿರಲಿಲ್ಲ. ಭಾನುವಾರ ಚುನಾವಣಾ ಆಯೋಗ ಅಧಿಕೃತ ಘೋಷಣೆ ಮಾಡಿದ್ದು ಹಾಲಿ ಶಾಸಕರಾದ ಟಿ.ಡಿ ರಾಜೇಗೌಡ ಅವರ ಎದುರು 2023ರ ಫಲಿತಾಂಶದಲ್ಲಿ ಪರಾಜಿತ ಅಭ್ಯರ್ಥಿಯಾಗಿದ್ದ ಆಗಿದ್ದ ಡಿ.ಎನ್ ಜೀವರಾಜ್ ಅವರು ಗೆದ್ದು ಬೀಗಿದ್ದಾರೆ.
ಮರು ಮತ ಎಣಿಕೆಯು ರೋಚಕ ಹಣಾಹಣಿಗೆ ಕಾರಣವಾಗಿತ್ತು ಕೊನೆಗೆ ಜೀವರಾಜ್ ಮುನ್ನಡೆ ಸಾಧಿಸಿದ್ದರು. ಸಧ್ಯ ಚುನಾವಣಾ ಆಯೋಗದಿಂದ ಅಧೀಕೃತ ಘೋಷಣೆಯಾಗಿದ್ದು ಜೀವರಾಜ್ ಗೆಲುವು ಸಾಧಿಸಿದ್ದು ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ರಾತ್ರಿ ರಾಜೇಗೌಡ ಗೆದ್ದರು ಎಂದು ಸಂಭ್ರಮ ಆಚರಣೆ ಮಾಡಿದ್ದರು. ಆದರೆ ಅದು ಅಧಿಕೃತ ಘೋಷಣೆ ಆಗಿರಲಿಲ್ಲ. ಫಲಿತಾಂಶ ಪ್ರಕಟಿಸುವಂತೆ ಜೀವರಾಜ್ ಪರ ವಕೀಲರು ನೋಟಿಸ್ ನೀಡಿದ್ದರು. ಮಧ್ಯರಾತ್ರಿ ಚುನಾವಣಾ ಆಯೋಗ ಅಧಿಕೃತ ಘೋಷಣೆ ಮಾಡಿದೆ .
ಹಾಲಿ ಶಾಸಕರಾದ ಟಿ.ಡಿ ರಾಜೇಗೌಡ ಅವರ ಎದುರು 2023 ರ ಪರಾಜಿತ ಅಭ್ಯರ್ಥಿಯಾಗಿದ್ದ ಆಗಿದ್ದ ಡಿ.ಎನ್ ಜೀವರಾಜ್ 255 ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಮರು ಮತ ಎಣಿಕೆಯು ರೋಚಕ ಹಣಾಹಣಿಗೆ ಕಾರಣವಾಗಿತ್ತು. ಕೊನೆಗೆ ಜೀವರಾಜ್ ಮುನ್ನಡೆ ಸಾಧಿಸಿದ್ದರು. ಫಲಿತಾಂಶ ಪ್ರಶ್ನಿಸಿ ಜೀವರಾಜ್ ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಏರಿದ್ದು ಅಂತಿಮವಾಗಿ ಮೂರು ವರ್ಷಗಳ ಬಳಿಕ ಅಂಚೆ ಮತ ಪತ್ರಗಳ ಮರು ಎಣಿಕೆ ನಡೆದು ಕಾಂಗ್ರೆಸ್ಸಿನ ಟಿ.ಡಿ. ರಾಜೇಗೌಡ ಶಾಸಕತ್ವ ಕಳೆದುಕೊಳ್ಳುವಂತೆ ಆಗಿದೆ
2023ರ ಫಲಿತಾಂಶ
ರಾಜೇಗೌಡ- 59,171
ಜೀವರಾಜ್- 58,970
ಸುಧಾಕರ್ ಶೆಟ್ಟಿ – 19,417
ರಾಜನ್ ಗೌಡ – 1150
ಗೆಲುವಿನ ಅಂತರ 201ಮತ
2026 ಮರು ಮತ ಎಣಿಕೆ
ಅಂಚೆ ಮತ ಮರು ಎಣಿಕೆಯಲ್ಲಿ 201ಮತಗಳೊಂದಿಗೆ ಹೆಚ್ಚುವರಿಯಾಗಿ 54 ಮತಗಳು ಲಭಿಸಿವೆ. ಒಟ್ಟು 255 ಮತಗಳ ಅಂತರದಿಂದ ಗೆದ್ದಿದ್ದಾರೆ.








