ಉದ್ಯಮ..ಶಿಕ್ಷಣ..ಮಾನವೀಯತೆಯ ಹೀರೋ
ಮೊಹಮ್ಮದ್ ಶಫಿ ಎಂಬ ಸಿಂಪಲ್ ಮ್ಯಾನ್!
– ರಾಷ್ಟ್ರ ಪ್ರಶಸ್ತಿ ವಿಜೇತ ಮಲೆನಾಡ ಹೆಮ್ಮೆಯ ಉದ್ಯಮಿ
– ಆಜಾದ್ ಗ್ರೂಪ್ ಮೂಲಕ ಶಿಕ್ಷಣ ಸಂಸ್ಥೆ ಕಟ್ಟಿದ ಸಾಧಕ
ಹಳ್ಳಿಯಲ್ಲಿ ಹುಟ್ಟಿ ಉದ್ಯಮದ ಮೂಲಕ ಎಂಟ್ರಿಯಾಗಿ ನವೋದ್ಯಮ ಕಟ್ಟಿದ ಸಾಹಸಿಗ ಮೊಹಮ್ಮದ್ ಶಫಿ. ಶಫಿ ಅವರು 1974ರ ಸೆಪ್ಟೆಂಬರ್ 6ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸೊಪ್ಪುಗುಡ್ಡೆಯಲ್ಲಿ ಜನಿಸಿದರು. ತಂದೆ ಮೊಹಮದ್ ಗೌಸ್, ತಾಯಿ ಸಬೀರ ಬಾನು. ಇವರ ಸಹೋದರ ಮೊಹಮದ್ ರಫಿ, ಸಹೋದರಿ ರೇಷ್ಮಾ ಬಾನು.
ಶಫಿ ತೀರ್ಥಹಳ್ಳಿಯ ಖ್ಯಾತ ಉದ್ಯಮಿಯಾಗಿದ್ದು ಆಜಾದ್ ಗ್ಲಾಸ್ ಆ್ಯಂಡ್ ಪ್ಲೇವುಡ್, ಆಜಾದ್ ಪೈಂಟ್ಸ್, ಆಜಾದ್ ಡಿ ಡೆಕೋರ್ ಎಂಬ ನಿರ್ಮಾಣ ಸಾಮಗ್ರಿಗಳ ಉದ್ಯಮ ಸಂಸ್ಥೆಗಳನ್ನು, ಆಜಾದ್ ಇನ್ಟ್ಸಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ ಮತ್ತು ಆಜಾದ್ ರೋಬೋಟಿಕ್ ಟೆಕ್ನಾಲಜಿ ಎಂಬ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿದ್ದಾರೆ. ಮಲೆನಾಡಿನ ಅನೇಕ ಸಂಘ, ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶಫಿ ಅವರ ಸಾಧನೆಗೆ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಕೂಡ ಅರಸಿಕೊಂಡು ಬಂದಿದೆ. ಹಾಂಕಾಂಗ್ ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮೊಹಮದ್ ಶಫಿ ಅವರಿಗೆ ‘ಹಾಂಕಾಂಗ್ ಇಂಡಿಯಾ ಬ್ಯುಸಿನೆಸ್ ಕಾನ್ ಕ್ಲೇವ್ 2025’ ಯಶಸ್ವಿ ಉದ್ಯಮಿ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ನೂರಾರು ಮಂದಿಗೆ ಉದ್ಯೋಗ ಸೃಷ್ಟಿ
ಮೊಹಮದ್ ಶಫಿ ಅವರು ಕೇವಲ ಉದ್ಯಮಿ ಅಷ್ಟೇ ಅಲ್ಲದೆ ಮಾನವೀಯ ಮೌಲ್ಯಗಳನ್ನು ಹೊಂದಿರುವ ಸಹೃದಯ ವ್ಯಕ್ತಿತ್ವದವರಾಗಿದ್ದು ತೀರ್ಥಹಳ್ಳಿ ಜನತೆಯ ಗೌರವ ಮತ್ತು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಹಲವಾರು ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳಿಂದ ಮಲೆನಾಡಿನ ನೂರಾರು ಜನರಿಗೆ ಉದ್ಯೋಗಾವಕಾಶ ಲಭಿಸಿದೆ. ಪತ್ನಿ ಅಸ್ಮಾ ಬಾನು, ಮಗಳು ಹಯ ಫಾತಿಮಾ ಮತ್ತು ಮಗ ಮೊಹಮದ್ ಯೂಸುಫ್ ಅವರು ಮೊಹಮದ್ ಶಫಿ ಅವರ ಯಶಸ್ಸಿಗೆ, ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿನ ಇವರ ಸಾಧನೆಯನ್ನು ಗುರುತಿಸಿ ರಾಜ್ಯದ ಹೆಮ್ಮೆಯ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್ ದಶಮಾನೋತ್ಸವ ಸಂಭ್ರಮದಲ್ಲಿ ಆಯೋಜಿಸಿದ್ದ ಮಲೆನಾಡೋತ್ಸವ-2025ರಲ್ಲಿ ಮಲ್ನಾಡ್ ಬ್ಯೂಸಿನೆಸ್ ಅಚೀವರ್ಸ್ ಪ್ರಶಸ್ತಿ- 2024 ನೀಡಿ ಗೌರವಿಸಲಾಗಿದೆ.
2013ರಿಂದ ಅಜಾದ್ ರೊಬೋಟಿಕ್ ಟೆಕ್ನಾಲಜೀಸ್ ಕಟ್ಟಿ ಮೊಹಮ್ಮದ್ ಆಯುಬ್ ಅವರ ಮಾರ್ಗದರ್ಶನದಲ್ಲಿ ಅಜಗರ್ , ಷಣ್ಮುಖ ಮತ್ತು ನಜೀರ್ , ಆಸ್ಮಾ ಭಾನು ಇವರ ಸಹಯೋಗದೊಂದಿಗೆ ಕರ್ನಾಟಕದ ಹಲವು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಕೆಲಸ ಒದಗಿಸುವಲ್ಲಿ ಸಹಕಾರಿಯಾಗಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡಿದ ನೂರಾರು ಮಂದಿ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.








