ಕುಕ್ಕರ್ ಬಾಂಬ್ ಆರೋಪಿ ಕೀನ್ಯಾದಲ್ಲಿ ಪತ್ತೆ!
– ನಕಲಿ ಅಪ್ಪ ಅಮ್ಮ ಸೃಷ್ಟಿಸಿ ಮಹಿಳಾ ಅಧಿಕಾರಿ ಮದುವೆ ಆಗಿದ್ದ ಉಗ್ರ
– ಏನಿದೆ ಇಂಟರೆಸ್ಟ್ ಸ್ಟೋರಿ… ಗೊತ್ತಾಗಿದ್ದು ಹೇಗೆ?
NAMMMUR EXPRESS NEWS
ದೆಹಲಿ: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಮತ್ತು ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ಗೆ ಸಂಬಂಧಪಟ್ಟಂತೆ ಎನ್ಐಎ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಸಿದೆ. ಇದರಲ್ಲಿ ಶಂಕಿತ ಉಗ್ರ ಅರಾಫತ್ ಅಲಿಯ ರೋಚಕ ಕಹಾನಿಯೊಂದು ಬೆಳಕಿಗೆ ಬಂದಿದ್ದು, ಬಾಂಬ್ ಬ್ಲಾಸ್ಟ್ ಬಳಿಕ ಆತ ಕೀನ್ಯಾ ದೇಶದ ನಾಗರಿಕನಾಗಲು ನಕಲಿ ಅಪ್ಪ ಅಮ್ಮನನ್ನು ಸೃಷ್ಟಿಸಿ ಅಲ್ಲಿನ ಮಹಿಳಾ ಅಧಿಕಾರಿಯನ್ನೇ ಮದುವೆಯಾಗಿದ್ದನು. ವಿಷಯ ತಿಳಿದ ಎನ್ಐಎ ದಾಖಲೆ ಸಮೇತ ಕೀನ್ಯಾ ಸರ್ಕಾರವನ್ನು ಸಂಪರ್ಕಿಸಿ ಉಗ್ರನ ಹಸ್ತಾಂತರಕ್ಕೆ ಮನವಿ ಮಾಡಿತ್ತು. 2023 ರಲ್ಲಿ ದೆಹಲಿ ಏರ್ಪೋರ್ಟ್ನಲ್ಲಿ ಅರಾಫತ್ನನ್ನು ಬಂಧಿಸಲಾಗಿತ್ತು. ಉಗ್ರನನ್ನು ಮದುವೆಯಾಗಿರೋದನ್ನು ತಿಳಿದು ಪತ್ನಿ ಶಾಕ್ ಆಗಿದ್ದು, ತನ್ನ ಮದುವೆಯನ್ನು ಅಸಿಂಧುಗೊಳಿಸುವಂತೆ ಕೀನ್ಯಾ ಸರ್ಕಾರಕ್ಕೆ ಪತ್ರ ಬರೆದಿದ್ದಾಳೆ. ಅಲ್ಲದೆ ಕೀನ್ಯಾದ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾಳೆ. ಅರಾಫರ್ ಅಲಿಯ ನಕಲಿ ತಂದೆತಾಯಿ ವಿರುದ್ಧವೂ ದೂರು ದಾಖಲಾಗಿದೆ.







