ತೀರ್ಥಹಳ್ಳಿಗೆ ಶೀಘ್ರದಲ್ಲಿ ಸಿಎಂ ಸಿದ್ದರಾಮಯ್ಯ
– ಜೂನ್ ಮೊದಲ ವಾರದಲ್ಲಿ ಭೇಟಿ ಸಾಧ್ಯತೆ
– ಸಿಎಂ ಭೇಟಿ ಮಾಡಿದ ಕಿಮ್ಮನೆ: ಹಲವು ಮನವಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿಗೆ ಜೂನ್ ಮೊದಲ ವಾರದಲ್ಲಿ ಸಿ.ಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಈ ಕುರಿತು ಕಾರ್ಯಕ್ರಮ ರೂಪಿಸಲು ಕಿಮ್ಮನೆ ಅವರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಮುಖ್ಯಮಂತ್ರಿಗಳನ್ನು ಅವರ ನಿವಾಸದಲ್ಲಿ ಭೇಟಿಯಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ತೀರ್ಥಹಳ್ಳಿಯ ವಿವಿಧ ಅಭಿವೃದ್ಧಿ ಕೆಲಸಗಳ ಬಗ್ಗೆ ಮನವಿ ಸಲ್ಲಿಸಿದರು. ಕಿಮ್ಮನೆ ಅವರಿಗೆ ಆಪ್ತರೂ ಆಗಿರುವ ಸಿಎಂ ಸಿದ್ದರಾಮಯ್ಯ ಭೇಟಿ ಇದೀಗ ಮಹತ್ವ ಪಡೆದಿದೆ.








