ರಾಜ್ಯ ಬಿಜೆಪಿಯ ಭವಿಷ್ಯದ ನಾಯಕ ಡಿ. ಎಸ್. ಅರುಣ್
ತಂದೆ ಹಾದಿಯಲ್ಲಿ ನಡೆದ ಪಕ್ಷದ ಶಿಸ್ತಿನ ಸಿಪಾಯಿ
ಉದ್ಯಮ, ಸಂಘಟನೆ, ಕ್ರೀಡೆ ಎಲ್ಲದಕ್ಕೂ ಸೈ
ಶಿವಮೊಗ್ಗ ಹಾಗೂ ದಾವಣಗೆರೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯರಾಗಿರುವ ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದ ಕಾರ್ಯದರ್ಶಿ ಡಿ.ಎಸ್.ಅರುಣ್ ಅವರು ರಾಜಕೀಯ, ಉದ್ಯಮ, ಸಂಘಟನೆ ಮೂಲಕ ರಾಜ್ಯದ ಯುವ ಬಿಜೆಪಿ ನಾಯಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ಬಿಜೆಪಿ ಹಿರಿಯ ನಾಯಕ ಡಿ. ಎಚ್. ಶಂಕರಮೂರ್ತಿ ಅವರ ಪುತ್ರ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದವರು. ಕರ್ನಾಟಕದಾದ್ಯಂತ ಜನಸಂಘ ಹಾಗೂ ಬಿಜೆಪಿಯನ್ನು ಪ್ರಬಲವಾಗಿ ಬೇರೂರಲು ಸಂಘಟಿಸಿದ ಮಾಜಿ ಸಭಾಪತಿ ಡಿ ಎಚ್ ಶಂಕರಮೂರ್ತಿ ಅವರ ಪುತ್ರನಾಗಿರುವ ಅರುಣ್ ಅವರು ತಂದೆಯ ರಾಜಕೀಯ ಹಾದಿಯಲ್ಲೇ ನಡೆಯುತ್ತಿದ್ದಾರೆ.
ತಂದೆಯ ವರ್ಚಸ್ಸು ಹೊರತುಪಡಿಸಿ ಪಕ್ಷವನ್ನು ಮಧ್ಯ ಕರ್ನಾಟಕ ಸೇರಿ ಶಿವಮೊಗ್ಗ ಜಿಲ್ಲೆಯಾದ್ಯಂತ ಸಂಘಟಿಸುತ್ತಾ ತಂದೆ ಶಂಕರಮೂರ್ತಿಯವರ ಬೆನ್ನೆಲುಬಾಗಿ ಕೆಲಸ ಮಾಡಿದ್ದಾರೆ. ತಂದೆಯ ನಿವೃತ್ತಿಯ ನಂತರ ಚುನಾವಣಾ ರಾಜಕೀಯ ಪ್ರವೇಶಿಸಿದ ಅರುಣ್ ಅವರು ರಾಜಕಾರಣದ ಜತೆಯಲ್ಲೇ ಕೈಗಾರಿಕೋದ್ಯಮ, ಆರ್ಯವೈಶ್ಯ ಸಮಾಜದ ಚಟುವಟಿಕೆ, ರಾಜ್ಯ ಕ್ರಿಕೆಟ್ ಅಸೋಸಿಯೇಷನ್, ರೋಟರಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ವಿವಿಧ ಕ್ಷೇತ್ರಗಳ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಜಿಲ್ಲೆಯಾದ್ಯಂತ ತಮ್ಮದೇ ಅಭಿಮಾನಿ ಸಂಘದೊಂದಿಗೆ ಸಾಮಾಜಿಕ ಚಟುವಟಿಕೆಗಳನ್ನೂ ನಡೆಸಿಕೊಂಡು ಬಂದಿದ್ದಾರೆ.ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾಗಿದ್ದಾರೆ.
ಸಂಘ ಪರಿವಾರದಿಂದ ಬಂದವರು!
ಅರುಣ್ ಅವರು ದಿಢೀರನೆ ರಾಜಕಾರಣಕ್ಕೆ ಬಂದವರೇನಲ್ಲ. ಹುಟ್ಟಿದಾಗಿನಿಂದಲೂ ಮನೆಯಲ್ಲಿನ ರಾಜಕೀಯ ವಾತಾವರಣವನ್ನು ನೋಡಿಕೊಂಡೇ ಬೆಳೆದ ಅವರು ಎಬಿವಿಪಿ, ಬಿಜೆಪಿಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ನಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಇದೀಗ ರಾಜ್ಯ ಬಿಜೆಪಿಯ ಕಾರ್ಯದರ್ಶಿಯಾಗಿ ಪಕ್ಷದ ಬಲವನ್ನು ವರ್ಧಿಸುತ್ತ ಜವಾಬ್ದಾರಿಗಳನ್ನು ಶಿಸ್ತಿನ ಸಿಪಾಯಿಯಂತೆ ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದ್ದಾರೆ.
ತಂದೆಯ ರಾಜಕೀಯ ನಿವೃತ್ತಿಯ ನಂತರ 2021 ರಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಅವರು ಕಾರಣಾಂತರಗಳಿಂದ ಟಿಕೆಟ್ ಪಡೆಯಲು ವಿಫಲರಾಗುತ್ತಾರೆ. ಮುಂದೆ ಪಕ್ಷದ ಬೆಳವಣಿಗೆಗಾಗಿ ಇವರ ಪರಿಶ್ರಮವನ್ನು ಅರಿತ ಪಕ್ಷದ ವರಿಷ್ಠರು ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಘೋಷಿಸುತ್ತಾರೆ ನಂತರ ಚುನಾವಣೆಯಲ್ಲಿ ಗೆದ್ದು ಇತಿಹಾಸ ಬರೆಯುವುದರೊಂದಿಗೆ ಕ್ಷೇತ್ರದಾದ್ಯಂತ ಪಕ್ಷಕ್ಕಾಗಿ ಮತ್ತಷ್ಟು ಮಗದಷ್ಟು ಪರಿಶ್ರಮ ಪಡುತ್ತಾ ಪಕ್ಷವನ್ನು ಬಲವರ್ಧಿಸುತ್ತ ಜನರ ಭಾವನೆಗಳಿಗೆ ಸ್ಪಂದಿಸುತ್ತಾ ಜನನಾಯಕರಾಗಿ ಹೊರಹೊಮ್ಮಿದ್ದಾರೆ.
ಸಾಮಾಜಿಕವಾಗಿಯೂ ಆಲ್ ರೌಂಡರ್!
ಅರುಣ್ ಓರ್ವ ರಾಜಕಾರಣಿ ಆಗದೇ ಸಾಮಾಜಿಕವಾಗಿಯೂ ಆಲ್ ರೌಂಡರ್ ಆಗಿದ್ದಾರೆ. ಭವಿಷ್ಯದ ಬಿಜೆಪಿ ನಾಯಕರಲ್ಲಿ ಮುಂಚೂಣಿಯಲ್ಲಿದ್ದಾರೆ.








