ನೆಲ ಬಾಂಬ್ ಇಟ್ಟು ಬೇಟೆ: ಓರ್ವ ಅರೆಸ್ಟ್!
– ನಲವತ್ತೈದು ಜೀವಂತ ನೆಲಬಾಂಬ್ ಸಮೇತ ಆರೋಪಿ ಸೆರೆ
– ಹೊಸನಗರದ ಕೋಟೆತಾರಿಗದಿಂದ ಹರತಾಳು ರಸ್ತೆಯಲ್ಲಿ ಘಟನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ: ಹೊಸನಗರ ಕೆರೆಹಳ್ಳಿ ಹೋಬಳಿಯ ಹರತಾಳು ಮೀಸಲು ಅರಣ್ಯ ಕೋಟೆತಾರಿಗದಿಂದ ಹರತಾಳು ಹೋಗುವ ಮುಖ್ಯ ರಸ್ತೆಯ ಪಕ್ಕದಲ್ಲಿ ಆರೋಪಿಗಳು ಜೀವಂತ ಸಿಡಿಮದ್ದುಗಳನ್ನು (ನೆಲಬಾಂಬ್) ಬಳಸಿ ಬೇಟೆಯಾಡುತ್ತಿದ್ದ ಓರ್ವನನ್ನು ಬಂಧಿಸಲಾಗಿದೆ. ಹೊಸನಗರದ ಕೆ. ಹುಣಸವಳ್ಳಿ ಗ್ರಾಮದ ನಿವಾಸಿ ಡಾಕಪ್ಪ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆದರೆ ಹರತಾಳು ಗ್ರಾಮದ ಭಾಸ್ಕರ ಮತ್ತು ನಂಜುವಳ್ಳಿ ಗ್ರಾಮದ ನಾಗರಾಜ ಗೌಡ ಪರಾರಿಯಾಗಿದ್ದಾರೆ. ಬೇಟೆಗೆ ಬಳಸುತ್ತಿದ್ದ 45 ಜೀವಂತ ನೆಲಬಾಂಬ್ಗಳ (ಸಿಡಿಮದ್ದು) ಜಪ್ತಿ ಮಾಡಲಾಗಿದ್ದು, ಜೊತೆಗೆ ದ್ವಿಚಕ್ರ ವಾಹನ ವಶ ಪಡಿಸಲಾಗಿದೆ. ಬೇಟೆ ಆಡುವ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.








