ತೀರ್ಥಹಳ್ಳಿಗೆ ಶೀಘ್ರದಲ್ಲಿ ಸಿಎಂ ಆಗಮನ?!
– ಕಿಮ್ಮನೆ ಭೇಟಿ ವೇಳೆ ಭರವಸೆ ನೀಡಿದ ಮುಖ್ಯಮಂತ್ರಿ
– ತೀರ್ಥಹಳ್ಳಿಯಲ್ಲಿ ಲೋಕೋಪಯೋಗಿ ಸಚಿವರ ರೌಂಡ್ಸ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಚಿಕ್ಕಮಗಳೂರು ಜಿಲ್ಲೆ ನರಸಿಂಹ ರಾಜಪುರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ತೀರ್ಥಹಳ್ಳಿಗೆ ಶೀಘ್ರದಲ್ಲಿ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಮಾಜಿ ಸಚಿವರು, ತೀರ್ಥಹಳ್ಳಿ ಮಾಜಿ ಶಾಸಕರು ಆದ ಕಿಮ್ಮನೆ ರತ್ನಾಕರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವೇಳೆ ಅವರು ತೀರ್ಥಹಳ್ಳಿಯಲ್ಲಿ ದಿನಾಂಕ ನಿಗದಿ ಮಾಡಲು ತಿಳಿಸಿದರು ಎನ್ನಲಾಗಿದೆ.
ಸಚಿವರ ಭೇಟಿ ಮಾಡಿದ ಯುವ ಕಾಂಗ್ರೆಸ್ ಮುಖಂಡರು
ತೀರ್ಥಹಳ್ಳಿಗೆ ಆಗಮಿಸಿದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಮಾತುಕತೆ ನಡೆಸಿದರು.
ತೀರ್ಥಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಆರಗ ಮನವಿ
ತೀರ್ಥಹಳ್ಳಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೋರಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕರಾದ ಆರಗ ಜ್ಞಾನೇಂದ್ರರವರು ಮನವಿ ಪತ್ರ ನೀಡಿದ್ದಾರೆ. ವಿಶೇಷವಾಗಿ ಕ್ಷೇತ್ರದ ವಿವಿಧ ಭಾಗಗಳಿಗೆ ನೂರಕ್ಕೂ ಹೆಚ್ಚು ಕಾಲುಸಂಕ ನಿರ್ಮಿಸಲು ಅನುದಾನ ಕೋರಿ ಶಾಸಕರು ಮಂತ್ರಿಗಳಿಗೆ ಕೋರಿಕೆ ಪತ್ರ ನೀಡಿದ್ದಾರೆ.
ಅಲಗೇರಿ ಸೌಳಿ ಸೇತುವೆ ಜಾಗ ಪರಿಶೀಲನೆ
ತೀರ್ಥಹಳ್ಳಿ ಸಮೀಪ ನಿರ್ಮಾಣ ಆಗಲಿರುವ ಸೇತುವೆ ಜಾಗಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.








