ಆಗುಂಬೆ ಬಳಿ ಕೋಳಿ ಫಾರ್ಮ್ ನುಗ್ಗಿದ ಚಿರತೆ!
– ಕೋಳಿಯೊಂದನ್ನು ಹೊತ್ತೋಯ್ದ ದೃಶ್ಯ ಎಲ್ಲೆಡೆ ವೈರಲ್
– ಭದ್ರಾ ಅಚ್ಚುಕಟ್ಟಿನ ಪ್ರದೇಶದಲ್ಲಿ ಆನೆ ಹಿಂಡು ಪ್ರತ್ಯಕ್ಷ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಚಿರತೆ ಹೆಚ್ಚಾಗಿವೆ. ದಿನದಿಂದ ದಿನಕ್ಕೆ ಚಿರತೆ ಕಾಟ ಹೆಚ್ಚುತ್ತಿದ್ದೂ, ಆಗುಂಬೆ ಸಮೀಪ ಗುಡ್ಡೆಕೇರಿ ಹಸಿರುಮನೆ ಎಂಬಲ್ಲಿ ಕೋಳಿ ಫಾರ್ಮ್ ನುಗ್ಗಿದ ಚಿರತೆ ಕೋಳಿಯೊಂದನ್ನು ಹೊತ್ತೋಯ್ದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಆಗುಂಬೆ ಭಾಗದಲ್ಲೂ ಚಿರತೆ ಕಾಟ ಹೆಚ್ಚಾಗಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ತೀರ್ಥಹಳ್ಳಿ ತಾಲೂಕಿನ ಹೊದಲ, ಮೇಲಿನ ಕುರುವಳ್ಳಿ ಭಾಗದಲ್ಲಿ ಚಿರತೆ ಇತ್ತೀಚಿಗೆ ಕಂಡು ಬಂದಿದ್ದವು.
ಮಂಡಗದ್ದೆ ಸಕ್ರೆಬೈಲ್ ಬಳಿ ಶುಕ್ರವಾರ ಚಿರತೆ ಬೈಕಿಗೆ ಡಿಕ್ಕಿ ಹೊಡೆದು ಸಾವನ್ನು ಕಂಡಿತ್ತು. ಇದೀಗ ಆಗುಂಬೆ ಭಾಗದಲ್ಲೂ ಚಿರತೆ ಕಾಟ ಹೆಚ್ಚಿದೆ.
ಭದ್ರಾ ಅಚ್ಚುಕಟ್ಟಿನ ಪ್ರದೇಶದಲ್ಲಿ ಆನೆ ಹಿಂಡು ಪ್ರತ್ಯಕ್ಷ!
ಎನ್. ಆರ್. ಪುರದ ಭದ್ರಾ ಹಿನ್ನಿರು ಪ್ರದೇಶದಲ್ಲಿ ಕಾಡು ಆನೆಗಳ ಹಿಂಡು ಕಂಡು ಬಂದಿದೆ. ಇತ್ತೀಚಿಗೆ ಈ ಭಾಗದಲ್ಲಿ ಕಾಡು ಆನೆ ಹಿಂಡು ಕಂಡು ಬಂದಿದ್ದು ಆತಂಕ ಸೃಷ್ಟಿ ಮಾಡಿದೆ.








