ಸರ್ಕಾರಿ ಶಾಲೆ ಫೇಮಸ್ ಮಾಡಿದ್ದ ಮಂಜುಬಾಬು ವರ್ಗಾವಣೆ
– ಚಳ್ಳಕೆರೆ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಆಯ್ಕೆ
– ರಾಷ್ಟ್ರ ಮಟ್ಟದಲ್ಲಿ ಗುಡ್ಡೆಕೇರಿ ಶಾಲೆ ಹೆಸರು ಮಾಡಿಸಿದ್ದ ಹೆಡ್ ಮಾಸ್ಟರ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹೊಸೂರು ಗುಡ್ಡೆಕೇರಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕರಾಗಿ ಶಾಲೆಗಳಿಗೆ ಮಾದರಿ ಶಾಲೆಯಾಗಿ ರೂಪಿಸುವ ಮೂಲಕ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಮಂಜುಬಾಬು ಪೂಜಾರ್ ಅವರು ಚಿತ್ರದುರ್ಗಕ್ಕೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಆಯ್ಕೆ ಆಗಿದ್ದಾರೆ.
ತೀರ್ಥಹಳ್ಳಿಯ ಗುಡ್ಡೇಕೇರಿ ಸರ್ಕಾರಿ ಶಾಲೆಯಲ್ಲಿ ಸುಮಾರು 13 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ಮಂಜುಬಾಬು ಪೂಜಾರ್ ಅವರ ಸೇವೆಗೆ ನಮ್ಮೂರ್ ಎಕ್ಸ್ ಪ್ರೆಸ್ ಎಕ್ಸಲೆಂಟ್ ಅವಾರ್ಡ್ ಸೇರಿ ನೂರಾರು ಪ್ರಶಸ್ತಿಗಳು ಸಂದಿವೆ. ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದ ಅವರು ಗುಡ್ಡೆಕೇರಿ ಸರ್ಕಾರಿ ಶಾಲೆಯನ್ನು ಜಿಲ್ಲೆ ಝೆಡ್ ರಾಜ್ಯದ ನಂ. 1 ಶಾಲೆ ಮಾಡುವಲ್ಲಿ ಎಲ್ಲಾ ಶಿಕ್ಷಕರು, ಪೋಷಕರ ಸಹಾಯದಿಂದ ಶ್ರಮಿಸಿದ್ದರು. ಇದೀಗ ಅವರ ವರ್ಗಾವಣೆ ಎಲ್ಲರ ಬೇಸರಕ್ಕೆ ಕಾರಣವಾಗಿದೆ. ಅಪಾರ ಸ್ನೇಹಿತರು, ಅಭಿಮಾನಿಗಳು, ಶಿಷ್ಯ ವರ್ಗ ಹೊಂದಿರುವ ಮಂಜುಬಾಬು ಅವರು ಕಲಾ, ಕ್ರೀಡಾ ಪೋಷಕರು ಕೂಡ. ಇವರ ಅವಧಿಯಲ್ಲಿ ಅತೀ ಹೆಚ್ಚು ಕಾರ್ಯಕ್ರಮ ಕೂಡ ನಡೆದಿವೆ.
ಸರ್ವರಿಗೂ ಧನ್ಯವಾದ ಹೇಳಿದ ಮಂಜುಬಾಬು
ನಿಮ್ಮೆಲ್ಲರ ಪ್ರೀತಿಗೆ ನಾನು ಅಭಾರಿ.. ತೀರ್ಥಹಳ್ಳಿ ಬಿಟ್ಟು ಹೋಗುವುದು
ಮನಸಿಗೆ ಬೇಸರದ ವಿಷಯ.ಆದರೆ ಸರ್ಕಾರಿ ನೌಕರಿ ವಿಷಯದಲ್ಲಿ ಅನಿವಾರ್ಯ. ನಿಮ್ಮ ಮನೆ ಮಗನಂತೆ ಪ್ರೀತಿ ನೀಡಿ ಸಾಕಿ ಸಲುಹಿದ ಪ್ರೋತ್ಸಾಹ ನೀಡಿದ ಮಲೆನಾಡಿನ ಮಣ್ಣಿನ ಪ್ರೀತಿಗೆ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಗೆ ತೀರ್ಥಹಳ್ಳಿಯ ಮಹಾ ಜನತೆಗೆ ನಾನು ಸದಾ ಋಣಿ. ನಿಮ್ಮ ಋಣ ನಾನು ಯಾವತ್ತು ಮರೆಯಲ್ಲ. ಮಲೆನಾಡಿನ ಮಣ್ಣಿಗೆ, ನನ್ನ ನಮಸ್ಕಾರಗಳು ಎಂದು ಹೊಸೂರು ಗುಡ್ಡೆಕೇರಿ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ತಾಲೂಕಿನ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.








