ಸಿರಿಬೈಲು ಧರ್ಮೇಶ್ ಪುತ್ರ ಅಭಯ್ ಅಮೋಘ ಸಾಧನೆ
– ದ್ವಿತೀಯ ಪಿಯುಸಿ ವಿಭಾಗದಲ್ಲಿ ಶೇಕಡಾ 98% ಅಂಕ
– ಪ್ರತಿಷ್ಟಿತ ಕ್ರೈಸ್ಟ್ ಕಾಲೇಜಿಗೆ ಟಾಪರ್: ಅಭಿನಂದನೆಗಳು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ/ ಬೆಂಗಳೂರು/ ಮೂಡಬಿದಿರೆ: ರಾಜ್ಯ ಒಕ್ಕಲಿಗರ ಸಂಘದ ಕಾಮಗಾರಿ ಸಮಿತಿಯ ಅಧ್ಯಕ್ಷರು ಹಾಗೂ ರಾಜ್ಯ ನಿರ್ದೇಶಕರು, ಪ್ರತಿಷ್ಟಿತ ಉದ್ಯಮಿಗಳೂ ಆಗಿರುವ ಹಾಗೂ ಸಿರಿಬೈಲು ಧರ್ಮೇಶ್ ಎಸ್. ಕೆ ಹಾಗೂ ತೀರ್ಥಹಳ್ಳಿ ತಾಲ್ಲೂಕು ಸರ್ವೆ ವಿಭಾಗದ ಅಧಿಕಾರಿಯಾಗಿರುವ ಸುಷ್ಮಾ ಎಸ್. ಪಿ ದಂಪತಿಗಳ ಸುಪುತ್ರನಾಗಿರುವ ಅಭಯ್ ಸೂರ್ಯ ಬೆಂಗಳೂರಿನ ಪ್ರತಿಷ್ಟಿತ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು ದ್ವಿತೀಯ ಪಿಯುಸಿ ವಿಭಾಗದಲ್ಲಿ ಶೇಕಡಾ 98% ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಪೋಷಕರಿಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಎಸ್.ಎಸ್.ಎಲ್.ಸಿ ಯಲ್ಲಿ 96% ಅಂಕಗಳನ್ನು ಪಡೆದಿದ್ದ ಅಭಯ್ ಸೂರ್ಯ ಓದಿನಲ್ಲಿ ಸದಾ ಮುಂದಿದ್ದು ದಕ್ಷಿಣ ಭಾರತ ವಲಯ ಮಟ್ಟದ (ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣ )ಯೂತ್ ಪಾರ್ಲಿಮೆಂಟ್ ಡಿಬೇಟ್ ಕಾಂಪಿಟೇಷನ್ನಲ್ಲಿ ಅಗ್ರ ಸ್ಥಾನ ಪಡೆದು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸಿದ್ದರು.
ವಿದ್ಯಾರ್ಥಿ ದಿಸೆಯಿಂದಲೂ ಕ್ರೀಡೆ, ಸಾಂಸ್ಕೃತಿಕ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದಲ್ಲದೇ ತಂದೆಯ ಹಾದಿಯಲ್ಲಿ ಉದ್ಯಮದಲ್ಲಿಯೂ ವಿಶೇಷ ಆಸಕ್ತಿ ಹೊಂದಿರುತ್ತಾರೆ.
ಪಿಯುಸಿಯಲ್ಲಿ ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಕ್ರೈಸ್ಟ್ ಕಾಲೇಜಿಗೇ ಮೊದಲ ಸ್ಥಾನ ಪಡೆದು ಕೀರ್ತಿ ತಂದಿರುವ ಅಭಯ್ ಸೂರ್ಯ ಇವರಿಗೆ ಕುಟುಂಬವರ್ಗದವರು, ಹಿತೈಷಿಗಳು, ಬಂಧುಗಳು ಹಾಗೂ ಆತ್ಮೀಯರು ಶುಭ ಹಾರೈಸಿದ್ದಾರೆ.
ಸಾಧನೆ ಮಾಡಿದ ಅಭಯ್ ಅವರಿಗೆ ಅಭಿನಂದನೆಗಳು.








