ನಾಗರಹಳ್ಳಿಯಲ್ಲಿ ಮೇ 21ರಿಂದ 24ರವರೆಗೆ ವಿಶೇಷ ಪೂಜೆ
– ಪ್ರಸಿದ್ಧ ಕಾರಣಿಕ ದೇವಾಲಯದಲ್ಲಿ ಧಾರ್ಮಿಕ ಸಂಭ್ರಮ
– ಮೇ 21ರ ಗುರುವಾರದಂದು ಸರ್ಪ ಸಂಸ್ಕಾರ ಕ್ರಿಯಾರಂಭ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಮಲೆನಾಡಿನ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ನಾಗರಹಳ್ಳಿಯ ಶ್ರೀ ನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸರ್ಪದೋಷ ನಿವೃತ್ತಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಹಮ್ಮಿಕೊಳ್ಳಲಾಗಿದೆ. ಮೇ 21ರ ಗುರುವಾರದಿಂದ ಮೇ 24ರ ಭಾನುವಾರದವರೆಗೆ ನೆರವೇರಲಿದೆ. ಮೊದಲ ಮೇ 21ರ ಗುರುವಾರದಂದು ಸರ್ಪ ಸಂಸ್ಕಾರ ಕ್ರಿಯಾರಂಭ ನಡೆಯಲಿದೆ. ಕೊನೆಯ ದಿನವಾದ ಮೇ 24ರ ಭಾನುವಾರದಂದು ಪ್ರತಿಷ್ಠಾಹೋಮ ಪೂರ್ವಕ ಹರಕೆ ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ, ಬ್ರಹ್ಮಚಾರಿ ಬ್ರಾಹ್ಮಣ ಆರಾಧನೆ, ಶ್ರೀ ಸ್ವಾಮಿಗೆ ವಿಶೇಷ ಪೂಜೆ ಸಹಿತವಾಗಿ ಮಹಾ ಮಂಗಳಾರತಿ, ನಾಗ ದರ್ಶನ ಮತ್ತು ಆಗಮಿಸಿದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಮಲೆನಾಡ ಪ್ರಸಿದ್ಧ ನಾಗ ದೇವಾಲಯಗಳಲ್ಲಿ ಒಂದಾದ ನಾಗರ ಹಳ್ಳಿಗೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಲಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ಸರ್ವರನ್ನು ಸ್ವಾಗತಿಸಿದೆ.








