ಯುವ ಜನರ ಉದ್ಯೋಗ ನುಂಗುತ್ತೆ AI ರಾಕ್ಷಸ!
– ಜಾಣ್ಮೆ, ತಾಳ್ಮೆ, ಕೌಶಲ್ಯ ಇದ್ದರಷ್ಟೇ ಮುಂದೆ ಕೆಲಸ
– ದೇಶದಲ್ಲಿ ಉದ್ಯೋಗ ಹಾಹಾಕಾರ ಶುರು..?!
ನವದೆಹಲಿ: 2026ಕ್ಕೆ ಬಹುತೇಕ ರಾಷ್ಟ್ರಗಳಿಗೆ ಎ. ಐ ಎಂಟ್ರಿ ಆಗಲಿದೆ. ಇದು ಲಕ್ಷ ಲಕ್ಷ ಉದ್ಯೋಗವನ್ನು ಕಸಿದುಕೊಳ್ಳಲಿದೆ. ಜತೆಗೆ ಅನೇಕ ಮಾರುಕಟ್ಟೆ ಪತನಕ್ಕೂ ಕಾರಣವಾಗಲಿದೆ. Ai ಅಂದರೆ ಕೃತಕ ಬುದ್ದಿಮತ್ತೆ. ಅಂದರೆ ಮನುಷ್ಯ ಯೋಚನೆ ಮಾಡುವ ಜ್ಞಾನ ಅದೇ ಸಾಫ್ಟ್ವೇರ್ ಅಥವಾ ತಂತ್ರಜ್ಞಾನ ಕೊಡುತ್ತೆ. ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ ಆರ್ಟಿಫಿಷಿಯಲ್ ಇಂಟೆಲಿಜೆಂಟ್ ಮೂಲಕ ಯಾವುದೇ ಕಠಿಣ ಕೆಲಸ ಸುಲಭ ಅಗಲಿದೆ. ನಿರುದ್ಯೋಗ, ಅಪರಾಧ, ಸಂಸಾರಿಕ ಕಲಹ ಹೆಚ್ಚಲಿದೆ. ದೇಶ, ರಾಜ್ಯ ಬಿಕ್ಕಟ್ಟಿಗೆ ಸಿಲುಕಲಿವೆ. ಲಕ್ಷ ಲಕ್ಷ ಸುರಿದು ಓದಿರುವ ಯುವ ಜನತೆಗೆ ಉದ್ಯೋಗ ಅವಕಾಶ ಕಷ್ಟ ಆಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಿವೆ ಸಂಶೋಧನೆಗಳು.
ನಾವು ಈಗ ಮಾಡುತ್ತಿರುವ ಕೆಲಸ ಇಲ್ಲವಾಗಬಹುದು!
ನಾವು ಇಂದು ಮಾಡುತ್ತಿರುವ ಬಹುತೇಕ ಕೆಲಸಗಳು ಇನ್ನು ಕೇವಲ ಎರಡು-ಮೂರು ವರ್ಷಗಳಲ್ಲಿ ಇತಿಹಾಸದ ಪುಟ ಸೇರಲಿವೆ ಎನ್ನುತ್ತಿದ್ದಾರೆ ವಿಶ್ವಪ್ರಸಿದ್ಧ Al ತಜ್ಞ ಡಾ. ರೋಮನ್ ಯಾಂಪೋಲ್ಸಿ. ಇತ್ತೀಚಿನ ವರದಿಗಳ ಪ್ರಕಾರ, 2027ರ ವೇಳೆಗೆ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಜಗತ್ತನ್ನು ಆಳಲಿದ್ದು, ಅದರ ಪರಿಣಾಮವಾಗಿ ಇಂದಿನ ಶೇ. 99ರಷ್ಟು ಉದ್ಯೋಗಗಳು ಇಲ್ಲವಾಗಲಿವೆ ಎಂಬ ಆತಂಕಕಾರಿ ಮುನ್ಸೂಚನೆ ನೀಡಿದ್ದಾರೆ.
AGI ಅಂದರೆ ಏನು? ಈ ಬದಲಾವಣೆ ಯಾಕೆ..?
ಸಾಮಾನ್ಯ AI ಕೇವಲ ದತ್ತಾಂಶಗಳನ್ನು ವಿಶ್ಲೇಷಿಸಿದರೆ, AGI ಮನುಷ್ಯನಿಗಿಂತಲೂ ವೇಗವಾಗಿ ಯೋಚಿಸುವ, ಕಲಿಯುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಡಾ. ರೋಮನ್ ಪ್ರಕಾರ, ಐದು ವರ್ಷಗಳ ಒಳಗೆ ಕಂಪ್ಯೂಟರ್ಗಳು ಮನುಷ್ಯ ಮಾಡಬಲ್ಲ ಪ್ರತಿಯೊಂದು ಡಿಜಿಟಲ್ ಕೆಲಸವನ್ನೂ ಅತ್ಯಂತ ನಿಖರವಾಗಿ ಮಾಡಲಿವೆ. ಇದರಿಂದಾಗಿ ಡೇಟಾ ಎಂಟ್ರಿ, ಗ್ರಾಫಿಕ್ ಡಿಸೈನ್, ಮಿಷನ್ ಲೆರ್ನಿoಗ್, ಸಾಫ್ಟ್ವೆರ್ ಡೆವಲಪ್ಮೆಂಟ್, ಮೆಕ್ಯಾನಿಸಮ್, ಕೋಡಿಂಗ್ ಮತ್ತು ಅಕೌಂಟಿಂಗ್ನಂತಹ ಕ್ಷೇತ್ರಗಳಲ್ಲಿ ಮಾನವನ ಅಗತ್ಯವೇ ಇಲ್ಲದಂತಾಗಬಹುದು. ಆದರೆ ಜಾಣ್ಮೆ, ತಾಳ್ಮೆ, ಕೌಶಲ್ಯ, ಪರಿಶ್ರಮ, ಪ್ರಾಮಾಣಿಕತೆ ಇದ್ದರಷ್ಟೇ ಕೆಲಸ ಸಿಗಬಹುದು. ಯಾಕೆಂದ್ರೆ ಯಾವುದೇ ಕೆಲಸಕ್ಕೆ ಒಬ್ಬ ಮಾಸ್ಟರ್ ಬೇಕೇ ಬೇಕು.
ಮತ್ತೆ ಕೃಷಿ, ಆಹಾರದತ್ತ ಹೊರಳುತ್ತಾ ಭಾರತ?
ಎಲ್ಲಾ ಉದ್ಯೋಗಗಳು ಹೋದರೂ, ಮನುಷ್ಯನ ಸಹಜ ಸಂವೇದನೆ ಮತ್ತು ತಾಂತ್ರಿಕ ನಿಯಂತ್ರಣ ಅಗತ್ಯವಿರುವ ಉದ್ಯೋಗಗಳು ಉಳಿಯಲಿವೆ. ಜತೆಗೆ ಸೇವಾ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ದೊಡ್ಡ ಹೊಡೆತ ಆಗಲ್ಲ. ಆದರೆ ಐಟಿ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗಲಿದೆ ಎನ್ನಲಾಗಿದೆ. ಈಗಾಗಲೇ ಬೆಂಗಳೂರು ಸೇರಿ ದೊಡ್ಡ ದೊಡ್ಡ ನಗರಗಳಲ್ಲಿ ಉದ್ಯೋಗ ಹಾಹಾಕಾರ ಶುರುವಾಗಿದೆ. ಭಾರತ ಒಂದು ಕಾಲದಲ್ಲಿ ವಿಶ್ವದಲ್ಲಿ ಆಹಾರ ಸಾಮಗ್ರಿ, ಕೃಷಿಯಲ್ಲಿ ಮುಂಚೂಣಿ ದೇಶ. ಆದರೆ ಈಗ ಅದು ಕಡಿಮೆ ಆಗಿದೆ. ಇದೀಗ ಮತ್ತೆ ಕೃಷಿ, ಆಹಾರದತ್ತ ಆಕರ್ಷಣೆ ಹೆಚ್ಚಾಗಿದೆ.
ಉದ್ಯೋಗ ಸಮಸ್ಯೆ ಭೀಕರ.. ಭೀಕರ!
Ai ಇಂದ ತಾಂತ್ರಿಕವಾಗಿ ದೇಶ ಮುಂದುವರಿಯುತ್ತಿದೆ ಎನ್ನುವುದನ್ನು ಸೂಚಿಸಿದ್ದರೂ ಕೂಡ, ಇದರಿಂದಾಗಿ ದೇಶದಲ್ಲಿ ಮತ್ತೊಂದು ರೀತಿಯ ಸಮಸ್ಯೆ ತಲೆದೋರುತ್ತಿದೆ. ಹಿಂದಿನ ಕಾಲದಲ್ಲಿ ಕಟ್ಟಡಗಳನ್ನು ಕಟ್ಟಲು ಮತ್ತು ಹೊಲ-ಗದ್ದೆಗಳಲ್ಲಿ ಕೆಲಸ ಮಾಡಲು ನೂರಾರು ಜನ ಕಾರ್ಮಿಕರ ಅವಶ್ಯಕತೆ ಇರುತ್ತಿತ್ತು. ಯಂತ್ರಗಳು ಆವಿಷ್ಕಾರಗೊಂಡ ಹಿನ್ನೆಲೆಯಲ್ಲಿ ನೂರಾರು ಜನರ ಬದಲಿಗೆ ಒಂದು ಯಂತ್ರ ಕಾರ್ಯನಿರ್ವಹಿಸಲು ಆರಂಭಿಸಿತು.
ಈಗ ಎಐ ಎನ್ನುವುದು ಅದರ ಮುಂದುವರಿದ ಭಾಗದಂತಿದೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಅಳವಡಿಕೆಯಾಗುತ್ತಿರುವುರಿಂದ ಸಾವಿರಾರು ಇಂಜಿನಿಯರ್ ಗಳು ಕೆಲಸದಿಂದ ವಂಚಿತರಾಗುತ್ತಿರುವುದು ದುರಂತ. ಈಗಾಗಲೇ ಕೆಲವು ಜನ ಉದ್ಯೋಗಾವಕಾಶವನ್ನು ಕಳೆದುಕೊಂಡಿದ್ದು, ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಇದು ಹೀಗೆಯೇ ಮುಂದುವರಿದು ಎಲ್ಲೆಡೆ ಎಐ ಅಳವಡಿಕೆಯಾದಲ್ಲಿ ನಿರುದ್ಯೋಗದ ಪ್ರಮಾಣ ಮತ್ತಷ್ಟು ತೀವ್ರಗೊಳ್ಳಲಿದೆ ಎನ್ನುವ ಆತಂಕಕಾರಿ ಸಂಗತಿ ಎಲ್ಲೆಡೆ ವ್ಯಾಪಿಸಿದೆ.
ಐಟಿ ಕ್ಷೇತ್ರಕ್ಕೆ ಭಾರೀ ಹೊಡೆತ!
ವರದಿಗಳ ಪ್ರಕಾರ ಎಐ ನಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರ ನಿರುದ್ಯೋಗ ಸಮಸ್ಯೆ ತಲೆದೋರಲಿದ್ದು, ವಾಣಿಜ್ಯ, ಶಿಕ್ಷಣ, ಕಲೆ ಮತ್ತು ಸೃಜನಾತ್ಮಕ ವೃತ್ತಿಗಳಲ್ಲಿ ತೊಡಗಿಸಿಕೊಂಡವರಿಗೆ ಯಾವುದೇ ರೀತಿಯ ನಿರುದ್ಯೋಗ ಸಮಸ್ಯೆ ಎದುರಾಗುವುದಿಲ್ಲ. ಎಐ ನಿಂದಾಗಿ ಉದ್ಯೋಗ ಕಳೆದುಕೊಂಡವರು, ‘ಮರಳಿ ಮಣ್ಣಿಗೆ’ ಎನ್ನುವ ಮಾತಿನಂತೆ ತಮ್ಮ ಮೂಲ ಸ್ಥಾನಗಳಿಗೆ ಹಿಂತಿರುಗಿ ಹಳೆಯ ಪದ್ಧತಿಯಾದ ಆರೋಗ್ಯಕರ ಮತ್ತು ನೆಮ್ಮದಿಯುತವಾದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ.








