ದೇಶದ ರಾಜಕೀಯದಲ್ಲಿ ಈಗ ಹೊಸ ಅಲೆ!
– ಹೊಸ ಪಕ್ಷ ಸ್ಥಾಪಿಸಿ ಗೆದ್ದ ರಿಯಲ್ ಹೀರೋ ವಿಜಯ್
– ದೀದಿ ಹಳೆ ಭರವಸೆಗಳಿಗೆ ಬೆಂಕಿ ಇಟ್ಟ ಬಂಗಾಳ ಜನ
– ಕೇರಳ ಉಳಿಸಿಕೊಂಡ ಕಾಂಗ್ರೆಸ್ ಪಡೆ
ಪಂಚರಾಜ್ಯಗಳ 2026ರ ವಿಧಾನಸಭಾ ಚುನಾವಣೆಯ ಫಲಿತಾಂಶ ಸೋಮವಾರದಂದು ಪ್ರಕಟಗೊಂಡಿದ್ದು, ದೇಶದ ರಾಜಕೀಯದ ದಿಕ್ಕನ್ನೇ ಬದಲಿಸಿದೆ. ಅಲ್ಲದೆ ದೇಶದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದೆ. ದೇಶದ ಅನೇಕ ಭಾಗಗಳಲ್ಲಿ ಅಚ್ಚರಿಯ ಫಲಿತಾಂಶಗಳು ಘೋಷಣೆಯಾಗಿದ್ದು, ಪರಂಪರಾನುಗುತವಾಗಿ ಬಂದಿದ್ದ ಬಲಿಷ್ಠ ಪಕ್ಷಗಳಿಗೆ ಹಿನ್ನಡೆಯುಂಟಾಗಿ, ಹೊಸ ರಾಜಕೀಯ ಪಕ್ಷಗಳು ಉದಯಿಸಿರುವುದು ಮತದಾರರ ನಿರೀಕ್ಷೆಯನ್ನು ಮೀರಿಸಿದೆ. ಅಲ್ಲದೆ ಯುವ ಜನತೆ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಯಾವ ರಾಜ್ಯದಲ್ಲಿ ಏನೇನು?
ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಪಕ್ಷವು ಭರ್ಜರಿ ಗೆಲುವನ್ನು ಸಾಧಿಸಿ, ಅಧಿಕಾರವನ್ನು ಪಡೆದುಕೊಂಡಿದ್ದರೆ, ಪುದುಚೇರಿಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನು ಏರಿದೆ. ತಮಿಳುನಾಡು ರಾಜ್ಯದಲ್ಲಿ ಖ್ಯಾತ ತಮಿಳು ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಉತ್ತಮ ಪ್ರದರ್ಶನವನ್ನು ನೀಡಿ, ಗೆಲುವಿನ ನಗೆ ಬೀರುವ ಮೂಲಕ ಅಚ್ಚರಿಯನ್ನುಂಟು ಮಾಡಿದೆ. ಕೇರಳ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಕ್ಷವು ಸ್ಪಷ್ಟವಾದ ಬಹುಮತಗಳೊಂದಿಗೆ ದಿಗ್ವಿಜಯವನ್ನು ಸಾಧಿಸಿದೆ. ಈ ಬಾರಿಯ ಪಂಚರಾಜ್ಯ ಚುನಾವಣಾ ಫಲಿತಾಂಶವು ರಾಜ್ಯದ ರಾಜಕೀಯದಲ್ಲಿ ನೂತನ ಅಧ್ಯಾಯವನ್ನು ಆರಂಭಿಸಿದ್ದು, ಪರಿವರ್ತನೆಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ದೀದಿ ಕೈ ತಪ್ಪಿದ ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಒಟ್ಟು 293 ಕ್ಷೇತ್ರಗಳಿದ್ದು, ಬಿಜೆಪಿ ಪಕ್ಷವು 2೦6 ಸ್ಥಾನಗಳನ್ನು ಪಡೆದುಕೊಳ್ಳುವುದರ ಮೂಲಕ ವಿಜಯಶಾಲಿಯಾಗಿದ್ದು, ಟಿಎಂಸಿ ಪಕ್ಷವು 81, ಕಾಂಗ್ರೆಸ್ 2 ಮತ್ತು ಇತರೆ ಪಕ್ಷಗಳು 3 ಸ್ಥಾನಗಳನ್ನು ಪಡೆದುಕೊಂಡಿದೆ. ಹಾಗೆಯೇ ಅಸ್ಸಾಂ ರಾಜ್ಯದಲ್ಲಿ ಒಟ್ಟು 126 ಕ್ಷೇತ್ರಗಳಿದ್ದು ಬಿಜೆಪಿ 82 ಸ್ಥಾನಗಳನ್ನು ಪಡೆದುಕೊಂಡು ಅಲ್ಲಿಯೂ ತನ್ನ ಗೆಲುವಿನ ನಗೆ ಬೀರಿದೆ, ಇನ್ನುಳಿದಂತೆ ಕಾಂಗ್ರೆಸ್ 19 ಮತ್ತು ಇತರೆ ಪಕ್ಷಗಳು 22 ಸ್ಥಾನಗಳನ್ನು ಪಡೆದುಕೊಂಡಿವೆ.
ಪುದುಚೇರಿಯಲ್ಲಿ ಬಿಜೆಪಿ ಗೆಲುವು
ಪುದುಚೇರಿಯಲ್ಲಿ ಒಟ್ಟು 30 ಕ್ಷೇತ್ರಗಳಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಪಕ್ಷವು 16 ಸ್ಥಾನಗಳನ್ನು ಪಡೆದು ವಿಜಯ ಸಾಧಿಸಿದೆ, ಹಾಗೆಯೇ ಡಿಎಂಕೆ 5 ಸ್ಥಾನಗಳನ್ನು, ಕಾಂಗ್ರೆಸ್ 3 ಸ್ಥಾನಗಳನ್ನು ಮತ್ತು ಟಿವಿಕೆ 2 ಸ್ಥಾನಗಳನ್ನು ಪಡೆದುಕೊಂಡಿವೆ.
ತಮಿಳುನಾಡಲ್ಲಿ ಗೆದ್ದ ವಿಜಯ್ ಪಾರ್ಟಿ!
ತಮಿಳುನಾಡಿನಲ್ಲಿ ಒಟ್ಟು 234 ಕ್ಷೇತ್ರಗಳಿದ್ದು, ಟಿವಿಕೆ ಪಕ್ಷವು 107 ಮತಗಳನ್ನು ಪಡೆದು ಅಚ್ಚರಿಯ ಫಲಿತಾಂಶವನ್ನು ನೀಡಿದೆ. ಉಳಿದಂತೆ ಡಿಎಂಕೆ 60ಸ್ಥಾನಗಳನ್ನು, ಎಐಡಿಎಂಕೆ 47 ಸ್ಥಾನಗಳನ್ನು, ಕಾಂಗ್ರೆಸ್ 5 ಸ್ಥಾನಗಳನ್ನು ಗಳಿಸಿವೆ.
ಕೇರಳದಲ್ಲಿ ಮತ್ತೆ ಕೈ ಮೇಲು!
ಕೇರಳ ರಾಜ್ಯದಲ್ಲಿ 140 ಕ್ಷೇತ್ರಗಳಿದ್ದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಕ್ಷವು 102 ಮತಗಳನ್ನು ಪಡೆದುಕೊಳ್ಳುವುದರ ಮೂಲಕ ವಿಜಯಶಾಲಿಯಾಗಿದ್ದು, ಎಲ್ ಡಿ ಎಫ್ 35 ಸ್ಥಾನಗಳನ್ನು ಮತ್ತು ಎನ್ ಡಿ ಎ 3 ಸ್ಥಾನಗಳನ್ನು ಪಡೆದುಕೊಂಡಿದೆ.








