ಕರ್ನಾಟಕ ಬ್ಯಾಂಕ್ ಪ್ರಧಾನ ಮ್ಯಾನೇಜರ್ ರಾಘವೇಂದ್ರ ಜೋಯ್ಸ್
– ತೀರ್ಥಹಳ್ಳಿ – ಹೊಸನಗರ ಗಡಿಯ ಯಡೂರು ಮೂಲದ ಅಧಿಕಾರಿ
– ಲೇಖಕರಾಗಿಯೂ ಸೇವೆ, ಮಲೆನಾಡಿನ ಹೆಮ್ಮೆಯ ಮಗ
– ಮಿಸ್ ಯುನಿವರ್ಸ್ ಕರ್ನಾಟಕ -2026 ಲೇಖನ ಮಲ್ಲಿಕಾರ್ಜುನ ಹೆಗ್ಡೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ರಾಷ್ಟ್ರದ ಹೆಮ್ಮೆಯ ಬ್ಯಾಂಕ್ ಒಂದಾದ ಕರ್ನಾಟಕ ಬ್ಯಾಂಕ್ ಅಲ್ಲಿ ಪ್ರಮುಖ ಹುದ್ದೆಯನ್ನು ಮಲೆನಾಡಿನ ಅಧಿಕಾರಿಯೊಬ್ಬರು ಅಲಂಕರಿಸಿದ್ದಾರೆ. ಕನ್ನಡಿಗರು ಸೇರಿ ಸ್ಥಾಪಿಸಲ್ಪಟ್ಟ ಕರ್ನಾಟಕ ಬ್ಯಾಂಕ್ ಅತ್ಯುತ್ತಮ ಸೇವೆ ಮತ್ತು ವ್ಯವಹಾರದೊಂದಿಗೆ ಈಗಲೂ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಂಡು ಬಂದಿದ್ದು, ಪ್ರಸ್ತುತ ಇದರ ಪ್ರಧಾನ ಮ್ಯಾನೇಜರ್ ಆಗಿ ರಾಘವೇಂದ್ರ ಜೋಯ್ಸ್ ಅವರು ಬಡ್ತಿಯನ್ನು ಹೊಂದಿದ್ದಾರೆ.
ತೀರ್ಥಹಳ್ಳಿಯಲ್ಲಿ ಓದಿದ್ದ ರಾಘವೇಂದ್ರ ಜೋಯ್ಸ್
ಮೂಲತಃ ಹೊಸನಗರ ತೀರ್ಥಹಳ್ಳಿ ತಾಲೂಕುಗಳ ಗಡಿ ಯಡೂರಿನ ಜೋಯ್ಸ್ ಕುಟುಂಬದವರಾದ ಇವರು ತಮ್ಮ ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿಯ ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಹಾಗೂ ಪದವಿ ಶಿಕ್ಷಣವನ್ನು ತುಂಗಾ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ. ರಾಘವೇಂದ್ರ ಜೋಯ್ಸ್ ಅವರು ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದರೂ ಸಹ, ಮಲೆನಾಡಿನ ಮಡಿಲಿನಲ್ಲಿ ಬೆಳೆದ ಹಿನ್ನೆಲೆಯಲ್ಲಿ, ಲೇಖಕರಾಗಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಮಿಸ್ ಯುನಿವರ್ಸ್ ಕರ್ನಾಟಕ -2026 ಲೇಖನ ಮಲ್ಲಿಕಾರ್ಜುನ ಹೆಗ್ಡೆ
ಸಿಎಂ-ಡಿಸಿಎಂ ಅಭಿನಂದನೆ
ಬೆಂಗಳೂರು: ಮಿಸ್ ಯುನಿವರ್ಸ್ ಕರ್ನಾಟಕ 2026 ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡ ಲೇಖನ ಮಲ್ಲಿಕಾರ್ಜುನ ಹೆಗ್ಡೆ ಏ.13ರಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳನ್ನು ಭೇಟಿಯಾದರು. ಸಿಎಂ-ಡಿಸಿಎಂ ” ಮಿಸ್ ಯೂನಿವರ್ಸ್ ಕರ್ನಾಟಕ” ಲೇಖನರನ್ನು ಅಭಿನಂದಿಸಿ ಶುಭ ಹಾರೈಸಿದರು.








