ಸರ್ವ ಸಮಾಜೋತ್ಸವಕ್ಕೆ ಕೊಪ್ಪದಲ್ಲಿ ಸಿದ್ಧತೆ
– ಮಲೆನಾಡು ಕರಾವಳಿ ಜನಪರ ಒಕ್ಕೂಟದಿಂದ ಆಯೋಜನೆ
– ಯುವ ಸಮಾನ ಮನಸ್ಕರ ಒಗ್ಗೂಡಿಸುವ ಸಭೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ/ ಶೃಂಗೇರಿ: ಮಲೆನಾಡು ಕರಾವಳಿ ಜನಪರ ಒಕ್ಕೂಟದಿಂದ ಆಯೋಜಿಸಲಾಗಿರುವ ‘ಸರ್ವ ಸಮಾಜೋತ್ಸವ’ ಕಾರ್ಯಕ್ರಮದ ಸಲುವಾಗಿ ಯುವ ಗೆಳೆಯರನ್ನು ಜೋಡಿಸುವ ಉದ್ದೇಶದಿಂದ ಪೂರ್ವಭಾವಿ ಸಭೆಯನ್ನು ಕೊಪ್ಪದಲ್ಲಿ ಆಯೋಜಿಸಲಾಗಿದೆ. ಸೋಮವಾರ ಮಧ್ಯಾಹ್ನ 4:00ಘಂಟೆಗೆ ಕೊಪ್ಪ ಮುಖ್ಯರಸ್ತೆಯ ಟಾಟಾ ಆರ್ಟ್ಸ್ ಅವರ ಮನೆಯಂಗಳದಲ್ಲಿ (ಹೋಟೆಲ್ ಬದ್ರಿಯಾ ಎದುರು ) ಕರೆಯಲಾಗಿದ್ದು ಯುವ ಮಿತ್ರರು ಅತೀ ಹಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಆಯೋಜಕರು ಕೋರಿದ್ದಾರೆ.








