ಬಡವರಿಗೆ 20ನೇ ಮನೆ ಸಮರ್ಪಣೆ ಮಹಾನ್ ಸೇವೆ
– ಉದ್ಯಮಿ, ಸಮಾಜ ಸೇವಕ ಡಾ. ಗೋವಿಂದ ಬಾಬು ಪೂಜಾರಿ ಮಾನವೀಯತೆ
– ಏ.21ರಂದು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಕಾರ್ಯಕ್ರಮ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೈಂದೂರು: ಸೂರು ಇಲ್ಲದ ಅರ್ಹ ಬಡವರಿಗೆ ಮನೆ ನಿರ್ಮಿಸಿ ಕೊಡುವ ಮಹಾನ್ ಕೆಲಸ ಮಾಡುತ್ತಿರುವ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿಯವರು ಇದೀಗ 20ನೇ ಮನೆ ಸಮರ್ಪಣೆಗೆ ಮುಂದಾಗಿದ್ದಾರೆ. ಕಡು ಬಡವರಿಗೆ ತಮ್ಮ ಸ್ವಂತ ದುಡಿಮೆಯಲ್ಲಿ ವಸತಿ ನಿರ್ಮಿಸಿ ಈಗಾಗಲೇ 19 ಮನೆಗಳನ್ನು ಹಸ್ತಾಂತರ ಮಾಡಿದ್ದು, ಈ ಯೋಜನೆಯ ಮುಂದಿನ ಭಾಗವಾಗಿ ಈಗಾಗಲೇ ಮನೆ ಹಸ್ತಾಂತರಕ್ಕೆ ಸಿದ್ಧವಾಗಿದೆ. 21.04.2026ನೆಯ ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಸಾರ್ಕಲ್ಲು ಗೌರಿ ದೇವಾಡಿಗ ಇವರಿಗೆ ನಿರ್ಮಿಸಿದ ನೂತನ ಗ್ರಹ ಶ್ರೀ ವರಲಕ್ಷ್ಮಿ ನಿಲಯ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.
ದಿವ್ಯ ಉಪಸ್ಥಿತಿಯೊಂದಿಗೆ ದೀಪ ಪ್ರಜ್ವಲನೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಪಲ್ಲಕ್ಕಿ ನಾರಾಯಣ ಸ್ವಾಮೀಜಿಯವರು ಆಶೀರ್ವಾದ ನೀಡಲಿದ್ದಾರೆ ಮುಖ್ಯ ಅತಿಥಿಗಳಾಗಿ ಜಗದೀಶ್ ಕಾರಂತ್ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಹಿಂದು ಜಾಗರಣ ವೇದಿಕೆ, ಶ್ರೀ ಕಿಶನ್ ಹೆಗಡೆ ಉದ್ಯಮಿಗಳು, ಬಸ್ರೂರು ಶ್ರೀ ರಘುರಾಮ್ ದೇವಾಡಿಗ, ಅಧ್ಯಕ್ಷರು ದೇವಾಡಿಗ ಸಂಘ ಬೈಂದೂರು ಹಾಗೂ ಊರಿನ ಹಿರಿಯರು ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಲಿದ್ದು ಈ ಸಾಮಾಜಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಊರ ಪರ ಊರ ಮಹನೀಯರು ಆಗಮಿಸಿ ಹರಸಿ ಹಾರೈಸುವುದರ ಮೂಲಕ ಗೋವಿಂದ ಬಾಬು ಪೂಜಾರಿಯವರು ಮಾಡುತ್ತಿರುವ ಈ ಸಾಮಾಜಿಕ ಕಾರ್ಯಗಳನ್ನು ಇನ್ನಷ್ಟು ಮಾಡುವ ಸ್ಪೂರ್ತಿ ಮತ್ತು ಶಕ್ತಿ ನೀಡಲಿ ಎಂದು ಅವರ ಸ್ನೇಹಿತರು ಮನವಿ ಮಾಡಿದ್ದಾರೆ.








