ಶ್ರೀ ನಾರಾಯಣ ಗುರು ಸೊಸೈಟಿಗೆ ನೂತನ ಸಾರಥಿಗಳು!
– ಉಡುಪಿಯ ಶ್ರೀ ನಾರಾಯಣ ಗುರು ಸೊಸೈಟಿಗೆ 5 ವರ್ಷ ಅವಧಿಗೆ ಆಯ್ಕೆಯಾದ ನೂತನ ಆಡಳಿತ ಮಂಡಳಿ
– ಅಧ್ಯಕ್ಷರಾಗಿ ಶಂಕರ್ ಪೂಜಾರಿ ಬ್ರಹ್ಮಾವರ, ಉಪಾಧ್ಯಕ್ಷರಾಗಿ ರಾಜು ಪೂಜಾರಿ ಉಪ್ಪೂರು ಆಯ್ಕೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ/ ಬೆಂಗಳೂರು: ಕರ್ನಾಟಕ ರಾಜ್ಯ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಶ್ರೀ ನಾರಾಯಣ ಗುರು ಕೋ ಆಪರೇಟಿವ್ ಸೊಸೈಟಿ ಉಡುಪಿ ಇದರ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸೊಸೈಟಿ ಅಧ್ಯಕ್ಷರಾಗಿ ಬಿ ಎನ್ ಶಂಕರ್ ಪೂಜಾರಿ, ಬ್ರಹ್ಮಾವರ ಹಾಗೂ ಉಪಾಧ್ಯಕ್ಷರಾಗಿ ರಾಜು ಪೂಜಾರಿ, ಉಪ್ಪೂರು ಇವರನ್ನ ಆಯ್ಕೆ ಮಾಡಲಾಯಿತು.
ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಗೋವಿಂದ ಬಾಬು ಪೂಜಾರಿ ಬೈಂದೂರು, ಪ್ರಕಾಶ್ ಕೋಟ್ಯಾನ್ ಮಣಿಪುರ, ಸುರೇಶ್ ಪೂಜಾರಿ ಬೆಂಗಳೂರು, ಗಂಗಾದರಪ್ಪ ಬೆಂಗಳೂರು, ಶಿವರಾಜ್ ಎಂ ಎಸ್ ಬೆಂಗಳೂರು, ಶಿಲ್ಪಾ ಗಂಗಾಧರ್ ಸುವರ್ಣ ಕಟಪಾಡಿ, ಕೆ. ವೀರೇಶ್ ಸುವರ್ಣ ಕುಂಜಿಬೆಟ್ಟು, ಕಾಮರಾಜ್ ಸುವರ್ಣ ಕಟಪಾಡಿ, ರಿತೇಶ್ ಕುಮಾರ್ ಬ್ರಹ್ಮಾವರ, ಆದರ್ಶ್ ಎಂ ಮುದ್ರಾಡಿ, ಧೀರಜ್ ಕುಂದಾಪುರ, ಮೀರಾ ಸದಾನಂದ ಬ್ರಹ್ಮಾವರ, ವಿನಯ್ ಕುಮಾರ್ ಶಿವಮೊಗ್ಗ, ಆದರ್ಶ ಕುಮಾರ್ ಕೆ ಶಿವಮೊಗ್ಗ ಇವರು ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿಯ ಸದಸ್ಯರಿಗೆ ಅಭಿನಂದನೆಗಳು.








