ಎಣ್ಣೆ ಕುಡಿದು ಮಕ್ಕಳ ಮೇಲೆ ಹರಿದ ಕಾರು: ಬಾಲಕಿ ಸಾವು
– ಚಿಕ್ಕಮಗಳೂರು ಜಿಲ್ಲೆಯ ಬಿಳೇಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ದುರಂತ!
ಹೆತ್ತ ಮಗಳನ್ನೇ ಉಸಿರುಗಟ್ಟಿಸಿ ಕೊಂದು ತಾಯಿ ಆತ್ಮಹತ್ಯೆ!
ತೀರ್ಥಹಳ್ಳಿ: ಕೃಷಿ ಕೆಲಸ ಮಾಡುವಾಗ ಬಿದ್ದು ಯುವಕ ಸಾವು
ಕೊಟ್ಟಿಗೆಹಾರ: ಹೆದ್ದಾರಿಯಲ್ಲೇ ಪಲ್ಟಿಯಾದ ಟ್ರ್ಯಾಕ್ಟರ್
ಚಿಕ್ಕಮಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಮೆರವಣಿಗೆಯ ಸಂಭ್ರಮದ ನಡುವೆಯೇ ಭೀಕರ ದುರಂತವೊಂದು ಸಂಭವಿಸಿದೆ. ಮೆರವಣಿಗೆಯ ಮೇಲೆ ಹರಿದ ಕಾರು 7 ವರ್ಷದ ಬಾಲಕಿ ಜೀವ ಬಲಿ ತೆಗೆದುಕೊಂಡಿದೆ. ಬಿಳೇಕಲ್ಲು ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿದ್ದ ಕಾರು ಚಾಲಕನ ಅಜಾಗರೂಕತೆಯಿಂದಾಗಿ 7 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗ್ರಾಮದಲ್ಲಿ ಮಂಗಳವಾರ ಸಂಜೆ ಸಂಭ್ರಮದಿಂದ ಮೆರವಣಿಗೆ ಸಾಗುತ್ತಿದ್ದ ವೇಳೆ ಸಾನ್ವಿ (7) ಎಂಬ ಮಗು ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ. ಮದ್ಯ ಸೇವಿಸಿದ್ದ ಎನ್ನಲಾದ ಚಾಲಕ ಸುಧಾಕರ್, ಮೆರವಣಿಗೆಯಲ್ಲಿದ್ದವರ ಮೇಲೆ ಕಾರು ಚಾಲನೆ ಮಾಡಿದ್ದೇ ಈ ದುರ್ಘಟನೆಗೆ ಕಾರಣ. ಅಪಘಾತದಲ್ಲಿ ನಿಶ್ಚಿತ್ (11), ತೃಪ್ತಿ, ತಿಮ್ಮರಾಜು, ಉಷಾ, ಚೇತನ್, ಸೃಷ್ಠಿ ಹಾಗೂ ನಾಗರಾಜ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.ಅಪಘಾತ ಸಂಭವಿಸುತ್ತಿದ್ದಂತೆಯೇ ರೊಚ್ಚಿಗೆದ್ದ ಸ್ಥಳೀಯರು ಕಾರು ಚಾಲಕ ಸುಧಾಕರ್ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದೇ ವೇಳೆ ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆತ್ತ ಮಗಳನ್ನೇ ಉಸಿರುಗಟ್ಟಿಸಿ ಕೊಂದು ತಾಯಿ ಆತ್ಮಹತ್ಯೆ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಾಯಿ-ಮಗಳ ಸಾವಿನ ದಾರುಣ ಘಟನೆಯೊಂದು ನಡೆದಿದೆ. ಕ್ಷಣಿಕ ಆವೇಶವೋ ಅಥವಾ ಬದುಕಿನ ಮೇಲಿನ ಜಿಗುಪ್ಸೆಯೋ ತಿಳಿಯದು, ತನ್ನ 14 ವರ್ಷದ ಮಗಳ ಉಸಿರು ನಿಲ್ಲಿಸಿದ ತಾಯಿ, ಅದೇ ಕೋಣೆಯಲ್ಲಿ ತಾನೂ ಬದುಕನ್ನು ಮುಗಿಸಿಕೊಂಡಿದ್ದಾರೆ. ವೈಟ್ಫೀಲ್ಡ್ ಸಮೀಪದ ಇಮ್ಮಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ. 40 ವರ್ಷದ ಸುವರ್ಣ ಹಾಗೂ 14 ವರ್ಷದ ಕಾರುಣ್ಯ ಮೃತಪಟ್ಟ ದುರ್ದೈವಿಗಳು. ಶನಿವಾರ ಬಹಳ ಹೊತ್ತಿನವರೆಗೆ ಮನೆಯ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಮುರಿದು ನೋಡಿದಾಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.
ಕೊಟ್ಟಿಗೆಹಾರ: ಹೆದ್ದಾರಿಯಲ್ಲೇ ಪಲ್ಟಿಯಾದ ಟ್ರ್ಯಾಕ್ಟರ್!
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಎಂಬಲ್ಲಿ ಸಿಮೆಂಟ್ ಶೀಟ್ ತುಂಬಿದ್ದ ಟ್ರ್ಯಾಕ್ಟರ್ ಹೆದ್ದಾರಿಯಲ್ಲೇ ಪಲ್ಟಿಯಾದ ಘಟನೆ ನಡೆದಿದ್ದು ಚಾಲಕ ಪಾರಾಗಿದ್ದಾರೆ. ಕಳಸದಿಂದ ಮೂಡಿಗೆರೆ ಕಡೆಗೆ ಸಿಮೆಂಟ್ ಶೀಟ್ಗಳನ್ನು ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್, ದೇವನಗುಲ್ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಟ್ರ್ಯಾಕ್ಟರ್ ರಸ್ತೆಯ ಮಧ್ಯಭಾಗದಲ್ಲೇ ಪಲ್ಟಿಯಾಗಿದ್ದು, ಅದರಲ್ಲಿದ್ದ ಸಿಮೆಂಟ್ ಶೀಟ್ಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.ಹೆದ್ದಾರಿಯ ಮಧ್ಯದಲ್ಲೇ ಟ್ರ್ಯಾಕ್ಟರ್ ಬಿದ್ದಿದ್ದರಿಂದ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ತೀರ್ಥಹಳ್ಳಿ: ಕೃಷಿ ಕೆಲಸ ಮಾಡುವಾಗ ಬಿದ್ದು ಯುವಕ ಸಾವು
ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಹೊನ್ನೇತಾಳು ಗ್ರಾಮ ಎಡ್ರು ಬೈಲ್ ಅಲ್ಲಿ ಕೂಲಿ ಕೆಲಸಕ್ಕೆ ಹೋದಾಗ ಯುವಕ ಕುಸಿದು ಬಿದ್ದು ಸಾವನ್ನು ಕಂಡಿರುವ ಘಟನೆ ನಡೆದಿದೆ. ಅವಿನಾಶ್ (ಗುಂಡ) (30)ಎಡ್ರು ಬೈಲ್ ಹಾಗೂ ತಂದೆ ವೆಂಕಟೇಶ್ ಕೃಷಿ ಕೆಲಸ ನಿಮ್ಮಿತ್ತ ಹೋದಾಗ ಅಕಸ್ಮಾತ್ ಆಗಿ ಕುಸಿದು ಬಿದ್ದು ಮೆಗ್ಗಾನ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ರವಾನಿಸುವ ಮಾರ್ಗ ಮದ್ಯೆ ಅವಿನಾಶ್ ಅನುಸನೀಗಿದ್ದಾರೆ. ಮೃತ ಅವಿನಾಶ್ ಹೆಂಡತಿ ಹಾಗೂ 3 ತಿಂಗಳ ಮಗು ವನ್ನು ಆಗಲಿದ್ದು ಪ್ರಕರಣ ಆಗುಂಬೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.








