ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯಕ್ಕೆ ಬಿಜೆಪಿ ಆಕ್ರೋಶ * ಎಸ್‌ಪಿ ಕಛೇರಿ ಮುತ್ತಿಗೆಗೆ ಯತ್ನ,ಹಲವರು ಪೊಲೀಸ್ ವಶಕ್ಕೆ * ಮುಖ್ಯಮಂತ್ರಿ ಹಾಗೂ ಗೃಹಸಚಿವರ ರಾಜೀನಾಮೆಗೆ ಆಗ್ರಹ NAMMMUR EXPRESS NEWS ಚಿಕ್ಕಮಗಳೂರು:ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಭಯೋತ್ಪಾದಕರು, ವಿಕೃತ ಕಾಮಿಗಳಿಗೆ ರಾಜಾತಿಥ್ಯ ನೀಡುತ್ತಿರುವುದನ್ನು ಖಂಡಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಗಳವಾರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳು ಮತ್ತು ಗೃಹಸಚಿವರ ರಾಜೀನಾಮೆಗೆ ಆಗ್ರಹಿಸಿದರು. ಬಿಜೆಪಿ ಕಚೇರಿಯಿಂದ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಸಾಗಿದ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನಿಸಲು ಮುಂದಾದಾಗ ಪೊಲೀಸರು ತಡೆ ಹಿಡಿದರು. ಈ ನಡುವೆ ಪೊಲೀಸರ ಜತೆ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ಬಂಧನಕ್ಕೆ ಒಳಪಡಿಸಿದರು. ಈ ವೇಳೆ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಭಯೋತ್ಪಾದಕರು, ವಿಕೃತ ಕಾಮಿ, ದೇಶದ್ರೋಹಿಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ…
Author: Nammur Express Karkala
ಕರಾವಳಿ ಟಾಪ್ ನ್ಯೂಸ್ * ಉಡುಪಿ: ಬೆಂಕಿ ಅವಘಡ; ವಿದ್ಯುತ್ ವ್ಯತ್ಯಯ * ಕಡಬ: ಬೆಂಗಳೂರಿನಲ್ಲಿ ಯುವಕನ ಆತ್ಮಹತ್ಯೆ * ಕಾರ್ಕಳ: ಸ್ಕೂಟರ್ ಗೆ ಗುದ್ದಿದ ಬಸ್; ಸವಾರನ ಸಾವು * ಬೆಳ್ತಂಗಡಿ: ಹಲವು ಪ್ರಕರಣಗಳ ಅಪರಾಧಿ ಕೊನೆಗೂ ಸೆರೆ * ಬಂಟ್ವಾಳ: ಗಾಂಜಾ ಮಾರಾಟ; ಯುವಕನ ಬಂಧನ * ಬ್ರಹ್ಮಾವರ: ಬಾವಿಗೆ ಬಿದ್ದು ವ್ಯಕ್ತಿ ಸಾವು * ಶಿರಸಿ: ನೋಟಿಸ್ ವಿರುದ್ಧ ಪ್ರತಿಭಟನೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ * ಉಡುಪಿ: ಬೆಂಕಿ ಅವಘಡ; ವಿದ್ಯುತ್ ವ್ಯತ್ಯಯ ಉಡುಪಿ: ಹಿರಿಯಡ್ಕದ ವಿದ್ಯುತ್ ಸ್ಥಾವರದಲ್ಲಿ ತಾಂತ್ರಿಕ ದೋಷಗಳಿಂದ ಯಂತ್ರೋಪಕರಣಗಳಿಗೆ ಬೆಂಕಿ ತಗುಲಿದ ಘಟನೆ, ಕಳೆದೆರಡು ದಿನಗಳ ಹಿಂದೆ ನಡೆದಿದೆ. ಪರಿಣಾಮವಾಗಿ ಪೆರ್ಡೂರು, ಪೆರ್ಣಂಕಿಲ, ಗುಡ್ಡೆಯಂಗಡಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿ, ರಾತ್ರಿಯ ಸಮಯದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಂತಾಯಿತು. ಬೆಂಕಿ ಅವಘಡ ದೊಡ್ಡ ಪ್ರಮಾಣದಲ್ಲಿ ಸಂಭವಿಸಿರುವುದರಿಂದ, ಆಹುತಿಯಾಗಿರುವ ಉಪಕರಣಗಳನ್ನು ತೆರುವುಗೊಳಿಸಿ, ಬೇರೆ ಕಡೆಯಿಂದ ಹೊಸ ಉಪಕರಣಗಳನ್ನು ತಂದು ಮತ್ತೆ ಅಳವಡಿಸುವ ಕಾರ್ಯ ನಡೆಸಲಾಯಿತು…
ಕೆರೆಕಟ್ಟೆ ಬಳಿ ಮತ್ತೊಂದು ಕಾಡಾನೆ ಪ್ರತ್ಯಕ್ಷ,ಮತ್ತೆ ಆತಂಕದಲ್ಲಿ ಗ್ರಾಮಸ್ಥರು * ಭಲೇಕಡಿ ಗ್ರಾಮದ ಹುಲ್ಗಾರ್‌ಬೈಲ್‌ನಲ್ಲಿ ಆನೆ ಓಡಾಟದ ಕುರುಹು * ಕಾಡಾನೆ ದಾಳಿಗೆ 15 ದಿನಗಳ ಹಿಂದಷ್ಟೇ ಇಬ್ಬರು ಬಲಿಯಾಗಿದ್ದರು NAMMMUR EXPRESS NEWS ಶೃಂಗೇರಿ: ತಾಲೂಕಿನ ಕೆರೆಕಟ್ಟೆ ಗ್ರಾ ಪಂ ವ್ಯಾಪ್ತಿಯ ಕೆರೆಗದ್ದೆ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳ ಹಿಂದಷ್ಟೇ ಕಾಡಾನೆ ದಾಳಿ ಮಾಡಿ ಇಬ್ಬರು ರೈತರು ಬಲಿಯಾದ ಘಟನೆ ಮಾಸುವ ಮುನ್ನವೇ ಅದೇ ಗ್ರಾಮದ ಸಮೀಪದ ಗ್ರಾಮವಾದ ಭಲೇಕಡಿಯ ಹುಲ್ಗಾರ್‌ಬೈಲ್ ಎಂಬಲ್ಲಿ ಭಾಸ್ಕರ್‌ಗೌಡ ಎಂಬುವರ ಮನೆಯ ಸಮೀಪ ಕಾಡಾನೆಯೊಂದು ಬಂದು ಓಡಾಡಿದ ಕುರುಹು ಪತ್ತೆಯಾಗಿದೆ. ನಿನ್ನೆ ತಡರಾತ್ರಿ ಸುಮಾರಿಗೆ ಬಂದ ಕಾಡಾನೆಯು ಬೈನೇಮರವೊಂದನ್ನು ಕೆಡವಿದ್ದು ಆ ಮರವು ವಿದ್ಯುತ್ ಕಂಬದ ಮೇಲೆ ಬಿದ್ದು ಕಂಬವು ತುಂಡಾಗಿದೆ.ನಂತರ ಕಾಡಿನೊಳಗೆ ಆನೆ ಸಾಗಿದ್ದು ಈ ಕುರುಹುಗಳು ಪತ್ತೆಯಾಗಿದೆ. ಇದರಿಂದ ಅಲ್ಲಿನ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಭಲೇಕಡಿ,ಹುಲ್ಗಾರ್‌ಬೈಲ್‌ನಿಂದ ಸುಮಾರು 7 ಕಿ.ಮೀ ದೂರ ಕಾಡಿನ ಹಾದಿಯಲ್ಲಿ ಸಾಗಿ ಶಾಲೆ,ಕೆಲಸ ಕಾರ್ಯಗಳಿಗೆ ವಿದ್ಯಾರ್ಥಿಗಳು,ಸಾರ್ವಜನಿಕರು,ಮಹಿಳೆಯರು ದಿನವೂ ಓಡಾಡುತ್ತಾರೆ…
* ಉಳ್ಳಾಲ: ತಾಲ್ಲೂಕು ಆಸ್ಪತ್ರೆಗೆ ಬೇಡಿಕೆ * ಮಂಗಳೂರು: ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಕರಾವಳಿ ಹುಡುಗಿ ಆಯ್ಕೆ * ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವವರಿಗೆ ಹೆಚ್ಚಲಿದೆ ಟೋಲ್ ಶುಲ್ಕ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ * ಉಳ್ಳಾಲ: ತಾಲ್ಲೂಕು ಆಸ್ಪತ್ರೆಗೆ ಬೇಡಿಕೆ ಉಳ್ಳಾಲ: ಉಳ್ಳಾಲವು ತಾಲ್ಲೂಕಾಗಿ ರಚನೆಯಾಗಿ ಐದು ವರ್ಷಗಳು ಕಳೆದರೂ, ಇನ್ನೂ ಸರ್ಕಾರಿ ತಾಲ್ಲೂಕು ಆಸ್ಪತ್ರೆ ಸ್ಥಾಪನೆಯಾಗದಿರುವುದು ಸ್ಥಳೀಯರಲ್ಲಿ ಬೇಸರವನ್ನುಂಟು ಮಾಡಿದೆ. ಖಾಸಗಿ ಆಸ್ಪತ್ರೆಗಳ ಅಧಿಪತ್ಯದಿಂದ ನಲುಗಿರುವ ತಾಲ್ಲೂಕು ವಾಸಿಗಳಿಗೆ ತೀವ್ರ ಅಗತ್ಯವಾಗಿದೆ. ಅಲ್ಲದೆ ರಾಜ್ಯ ಸರ್ಕಾರದ ವೈದ್ಯಕೀಯ ಅಧಿನಿಯಮದ ಪ್ರಕಾರ ಪ್ರತಿ ತಾಲ್ಲೂಕಿಗೂ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗಳು ಇರಬೇಕೆಂಬ ನಿಯಮವಿದ್ದು, ಅದನ್ನು ಉಲ್ಲಂಘಿಸಲಾಗಿದೆ. ಜೊತೆಗೆ ತಾಲ್ಲೂಕು ವ್ಯಾಪ್ತಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪಿಪಿಪಿ ಮಾದರಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಅಧೀನಕ್ಕೆ ಒಳಪಡಿಸಿರುವುದು, ಬಡ ಜನರ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡಿದೆ ಎಂದು ಡಿವೈಎಫ್ಐ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ…
ಮಲೆನಾಡ ಹುಡುಗರ ಲಾಸ್ಟ್ ಇನ್ ಕಿರುಚಿತ್ರ ಸಕ್ಸಸ್! – ಸುಧನ್ವ ಗಡಿಕಲ್ ನಿರ್ದೇಶನದ ಶಾರ್ಟ್ ಮೂವಿ – ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ ಸಹಭಾಗಿತ್ವ ಕೊಪ್ಪ/ ತೀರ್ಥಹಳ್ಳಿ: ಲಾಸ್ಟ್ ಇನ್ (Lost In) ಕನ್ನಡ ಕಿರುಚಿತ್ರ ರಾಜ್ಯೋತ್ಸವದಂದು “SG Days” YouTube Channelನಲ್ಲಿ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮೊಬೈಲ್ ಹಾಗೂ ಸಾಮಾಜಿಕ ಜಾಲ ತಾಣ ಬಳಕೆ ಹೇಗೆ ಯುವ ಜನರ ಬದುಕು, ಕ್ರಿಯಾಶೀಲತೆಯನ್ನು ಹಾಗೂ ಮಾನಸಿಕ ಸ್ವಾಸ್ತ್ಯ ಹಾಳು ಮಾಡುತ್ತಿದೆ ಎಂಬ ಕಥೆ ಉಳ್ಳ ಈ ಕಿರುಚಿತ್ರ ಒಳ್ಳೆ ಸಂದೇಶ ನೀಡಿದ್ದು, ಸಿನಿ ಆಸಕ್ತರ ಗಮನ ಸೆಳೆದಿದೆ. ಸುಧನ್ವ ಗಡಿಕಲ್ ನಟಿಸಿ, ನಿರ್ದೇಶಕರಾಗಿರುವ ಈ ಕಿರು ಚಿತ್ರದಲ್ಲಿ ಸಚಿನ್ ಉತ್ತಮೇಶ್ವರ, ಪ್ರದೀಪ್ ಕತ್ತಲಗಿರಿ, ಅಥರ್ವ ಪ್ರದೀಪ್, ರಿಧಿತ್ ಜಿ. ಆರ್ ನಟಿಸಿದ್ದಾರೆ. ಲಾಸ್ಟ್ ಇನ್ ಕನ್ನಡ ಕಿರುಚಿತ್ರವು ಪ್ರಸ್ತುತ ಸಮಯದ ಹೆಚ್ಚಾಗಿ ಕಂಡುಬರುತ್ತಿರುವ ಒಂದು ವ್ಯಸನದ ಬಗ್ಗೆ ಜಾಗೃತಿ ಮೂಡಿಸಲು ಮಾಡಿರುವಂತ ಕಿರು…
ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ವರ್ಗಾವಣೆ – ಹೊಸ ನಗರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆ – ತೀರ್ಥಹಳ್ಳಿಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿದ್ದ ಅಧಿಕಾರಿ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ಹೊಸನಗರ ಶಿಕ್ಷಣ ಅಧಿಕಾರಿಯಾಗಿ ವರ್ಗಾವಣೆ ಆಗಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಅಧಿಕಾರಿಯಾದ ಗಣೇಶ್ ವೈ, ಕ್ಷೇತ್ರ ಶಿಕ್ಷಣಾಧಿಕಾರಿ, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇಲ್ಲಿನ ಖಾಲಿ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ. ತೀರ್ಥಹಳ್ಳಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಗಣೇಶ್ ಅವರು ಈ ಹಿಂದಿನ ಅವಧಿಯಲ್ಲಿ ರಾಜ್ಯಕ್ಕೆ ನಂ. 1 ಸ್ಥಾನಕ್ಕೆ ಬರಲು ಕಾರಣರಾಗಿದ್ದರು. ಇನ್ನು ತೀರ್ಥಹಳ್ಳಿಗೆ ಹೊಸಬರ ನೇಮಕ ಆಗಿಲ್ಲ. ಕಳೆದ 2 ವರ್ಷದಿಂದ ತೀರ್ಥಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಬೀಳ್ಕೊಡುಗೆ ಮಾಡಲು…
ಮಲ್ನಾಡ್ ಟಾಪ್ ನ್ಯೂಸ್ ವೃದ್ದೆ ಮೃತ ದೇಹ ಬಾವಿಯಲ್ಲಿ ಪತ್ತೆ! – ಕೊಪ್ಪ ತಾಲೂಕು ಹೊಕ್ಕಳಿಕೆ ಸಮೀಪದ ಕಾರ್ ಬೈಲ್ ಎಂಬಲ್ಲಿ ಘಟನೆ – ಮನನೊಂದು ಬಾವಿಗೆ ಹಾರಿದರೇ?: ಹರಿಹರಪುರ ಠಾಣೆಯಲ್ಲಿ ಘಟನೆ – ತೀರ್ಥಹಳ್ಳಿ ಬಂಡೆ ಸ್ಫೋಟ: ಟ್ರoಚ್ ಹೊಡೆದ ಅಧಿಕಾರಿಗಳು! – ಎನ್.ಆರ್.ಪುರ: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಂದ ಮಗಳು! – ದೆಹಲಿ ಸ್ಫೋಟ ಖಂಡಿಸಿ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ NAMMUR EXPRESS NEWS ತೀರ್ಥಹಳ್ಳಿ/ಕೊಪ್ಪ: ಕೊಪ್ಪ ತಾಲೂಕಿನ ಕವಡೆ ಕಟ್ಟೆ ಸಮೀಪದ ಕಾರ್ ಬೈಲ್ ಎಂಬಲ್ಲಿ ವೃದ್ದೆಯೊಬ್ಬರ ಮೃತ ದೇಹ ಬಾವಿಯಲ್ಲಿ ಪತ್ತೆಯಾಗಿದ್ದು ಹರಿಹರಪುರ ಠಾಣೆಯಲ್ಲಿ 306 ಕೇಸು ದಾಖಲಾಗಿದೆ. ಹೊಕ್ಕಳಿಕೆ ಸಮೀಪದ ಕಾರ್ ಬೈಲ್ ಗ್ರಾಮದ ದಿ. ಪುಟ್ಟಪ್ಪ ಅವರ ಪತ್ನಿ ಲಕ್ಷ್ಮಿ ದೇವಿ (75) ಮೃತರು. ಶನಿವಾರ ಸಂಜೆ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ಹರಿಹರಪುರ ಠಾಣೆ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಮೃತರಿಗೆ ಓರ್ವ ಗಂಡು ಮಗ, ಸೊಸೆ, ಮಗಳು ಮತ್ತು ಕುಟುಂಬದವರು…
ರಾಜಧಾನಿಯಲ್ಲಿ ನ.15ರಂದು ಕಾಡಸುರಗಿ ಪುಸ್ತಕ ಬಿಡುಗಡೆ – ಮಲೆನಾಡಿನ 40 ಮಂದಿ ಸಾಧಕರ ಸಾಧನೆಯ ಕುರಿತು ಬರಹ – ಲೇಖಕ ಎಸ್ ಶ್ರೀಧರ ಮೂರ್ತಿಯವರ ಮುಂದಾಳತ್ವದಲ್ಲಿ ಪುಸ್ತಕ NAMMUR EXPRESS NEWS ಬೆಂಗಳೂರು: ಬೆಂಗಳೂರು ಮಲೆನಾಡ ಬರಹಗಾರರ ವೇದಿಕೆಯಿಂದ ನವಂಬರ್ 15ರಂದು ಸಂಜೆ 5:30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ. ಕುಮಾರ ಕೃಪಾ ರಸ್ತೆಯ ಚಿತ್ರಕಲಾ ಪರಿಷತ್ತಿನಲ್ಲಿ ಕಾಡಸುರಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪುಸ್ತಕದಲ್ಲಿ ಮಲೆನಾಡಿನ 40 ಮಂದಿ ಸಾಧಕರ ಸಾಧನೆಯ ಕುರಿತು ಬರಹಗಳಿದ್ದು ಮಲೆನಾಡಿನವರೇ ಆದ 18 ಮಂದಿ ಬರಹಗಾರರನ್ನು ಗುರುತಿಸಿ ಅವರಿಗೆ ಸೂಚಿಸಿದ ಸಾಧಕರ ಬಗ್ಗೆ ವಿಷಯ ಸಂಗ್ರಹಿಸಿದ ಲೇಖನಗಳು ಈ ಕಾಡಸುರಗಿಯ ಗೊಂಚಲಾಗಿವೆ. ನಾಡಿನ ಪ್ರಸಿದ್ಧ ಬರಹಗಾರರೂ ಮತ್ತು ಲೇಖಕರೂ ಆದ ಎನ್ ಎಸ್ ಶ್ರೀಧರಮೂರ್ತಿಯವರ ಮುಂದಾಳತ್ವದಲ್ಲಿ ಈ ಪುಸ್ತಕವನ್ನು ಸಿದ್ಧಗೊಳಿಸಲಾಗಿದ್ದೂ ಈ ಪುಸ್ತಕ ಅವರ ತರಲು ಎಂ ಆರ್ ಸುರೇಶ್, ಮಂಡಗದ್ದೆ ಶ್ರೀನಿವಾಸಯ್ಯ, ಹೆಚ್. ಸಿ ಜಯಪ್ರಕಾಶ್ ಅವರ ಶ್ರಮವಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಚಲನಚಿತ್ರ ನಿರ್ದೇಶಕರಾದ…
ಪುನರ್ವಸತಿಗೆ ಪ್ರಸ್ತುತ ಮೌಲ್ಯದಲ್ಲಿ ಪರಿಹಾರ ಕಲ್ಪಿಸಲು ಆಗ್ರಹ * ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿ ಹೋರಾಟ ಸಮಿತಿಯಿಂದ ಮನವಿ * ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಮನವಿ NAMMMUR EXPRESS NEWS ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ಜನರಿಗೆ ಪುನರ್ವಸತಿ ಕಲ್ಪಿಸಲು 2025ರ ದರದ ಅನುಗುಣವಾಗಿ ಪರಿಹಾರ ನೀಡಬೇಕು ಎಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿ ಹೋರಾಟ ಸಮಿತಿಯು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದೆ. ಈ ಕುರಿತು ಬೆಂಗಳೂರಿನಲ್ಲಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಕುದುರೆಮುಖ ರಾಷ್ಟ್ರೀಯ ಉದ್ಯಾನದ ಪುನರ್ವಸತಿ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ ಸಮನಾಗಿದ್ದು, ಮಲೆನಾಡಿನಲ್ಲಿ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿ ಕುದುರೆಮುಖದ ಮೂಲ ನಿವಾಸಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು. ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯ 2003ರಲ್ಲಿ…
ಮಳೆ, ಬಿಸಿಲು ನಡುವೆ ಚುಮು ಚುಮು ಚಳಿ! – ಬಿಸಿಲಿನ ಝಳ ಈ ಬಾರಿ ಹೆಚ್ಚಾಗುವ ಸಾಧ್ಯತೆ – ಅರೋಗ್ಯ ಹಾಳಾಗಬಹುದು ಹುಷಾರ್ ವಿಶೇಷ ವರದಿ: ಉಮೇಶ್ ದೇಮ್ಲಾಪುರ ನವೆಂಬರ್ ಮಾಸದ ಪ್ರಾರಂಭದೊಂದಿಗೆ ಕರ್ನಾಟಕದ ವಿವಿಧೆಡೆ ಚುಮು ಚುಮು ಚಳಿಯ ಅಬ್ಬರ ಆರಂಭವಾಗಿದೆ. ಮುಂಜಾನೆ ಮಂಜು, ಸಂಜೆ ಗಾಳಿ, ಮಧ್ಯಾಹ್ನದ ಸೂರ್ಯನ ಕಿಡಿಗಳು ಮೃದುವಾಗಿದ್ದು, ಚಳಿಗಾಲದ ಛಾಯೆ ರಾಜ್ಯದಾದ್ಯಂತ ಕಾಣಿಸುತ್ತಿದೆ. ಜನರು ಈಗಾಗಲೇ ಮಡಚಿಟ್ಟಿದ್ದ ಕಂಬಳಿ, ಸ್ವೆಟರ್, ಮಾಫ್ಲರ್‌ಗಳನ್ನು ಹೊರತೆಗೆದು ಬಳಕೆ ಮಾಡಲಾರಂಭಿಸಿದ್ದಾರೆ. ಚಳಿಯ ಮೊದಲ ವಾರವೇ ಜನ ಚಳಿ ಇಂದ ತತ್ತರಿಸಿದ್ದಾರೆ. ಅತೀ ಹೆಚ್ಚು ಮಳೆ ಆಗಿರುವ ಮಲೆನಾಡಲ್ಲಿ ಚಳಿ ಜೋರಾಗಿದೆ. ಎಲ್ಲೆಂದರಲ್ಲಿ ಬೆಳ್ಳಂ ಬೆಳಗ್ಗೆ ಮಂಜು ಕವಿದ ದೃಶ್ಯಗಳು, ರಸ್ತೆಗಳ ತುದಿಯಲ್ಲಿ ಗಾಳಿ ಬೀಸಿದ ಶಬ್ದಗಳು ಚಳಿಗಾಲದ ಬರುವಿಕೆಯ ಸುಳಿವು ನೀಡುತ್ತಿವೆ. ತೀರ್ಥಹಳ್ಳಿ,ಆಗುಂಬೆ, ಸಾಗರ, ಹೊಸನಗರ,ಮಡಿಕೇರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಾಪಮಾನವು 16 ರಿಂದ 18 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿದಿದ್ದು, ಜನರು ಮುಂಜಾನೆ ಕೆಲಸಕ್ಕೆ ತೆರಳುವಾಗ ಜಾಕೆಟ್…



