ಕಾಫಿ ನಾಡಲ್ಲಿ ಜೀವರಾಜೋತ್ಸವ..!
– ರಾಜ್ಯ ಬಿಜೆಪಿ ನಾಯಕರ ಭೇಟಿ ಮಾಡಿದ ಜೀವರಾಜ್
– ಶೃಂಗೇರಿ ಕ್ಷೇತ್ರದ ಹಳ್ಳಿ ಹಳ್ಳಿಯಲ್ಲೂ ಸಂಭ್ರಮ
– ಯಡಿಯೂರಪ್ಪ ಸೇರಿ ಎಲ್ಲಾ ನಾಯಕರ ಸಂತಸ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು/ ಶೃಂಗೇರಿ: ಬಿಜೆಪಿ ನಾಯಕ ಜೀವರಾಜ್ ಶಾಸಕರಾಗಿ ಆಯ್ಕೆಯಾಗಿದ್ದು ರಾಷ್ಟ್ರೀಯ ಹಾಗೂ ರಾಜ್ಯದ ಬಿಜೆಪಿ ನಾಯಕರು ಅಭಿನಂದನೆಗಳನ್ನು ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಆರಗ ಜ್ಞಾನೇಂದ್ರ, ಸುರೇಶ ಕುಮಾರ್, ವಿಜಯೇಂದ್ರ ಸೇರಿ ಬಹುತೇಕ ನಾಯಕರು ಶುಭ ಹಾರೈಸಿದ್ದಾರೆ. ಇನ್ನು ಶೃಂಗೇರಿ ಕ್ಷೇತ್ರದ ಕೊಪ್ಪ, ಶೃಂಗೇರಿ, ನರಸಿಂಹ ರಾಜಪುರ ಸೇರಿ ಹಳ್ಳಿ ಹಳ್ಳಿಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ಪಕ್ಷದ ಅಧ್ಯಕ್ಷರ ಸಮ್ಮುಖದಲ್ಲಿ ವಿಜಯೋತ್ಸವ ನಡೆದಿದೆ. ಅಲ್ಲದೆ ಜೀವರಾಜ್ ಅವರಿಗೆ ಎಲ್ಲೆಡೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ರಾಜ್ಯ ಬಿಜೆಪಿಯಿಂದ ಅಭಿನಂದನೆ
ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಚುನಾಯಿತರಾದ ಡಿ. ಎನ್. ಜೀವರಾಜ್ ಅವರನ್ನು ಬೆಂಗಳೂರಲ್ಲಿ ಆಭಿನಂದಿಸಿದರು. ಬಳಿಕ ಡಿ. ಎನ್. ಜೀವರಾಜ್ ಅವರು ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆದರು. ಮಾಜಿ ಶಾಸಕರಾದ ಎಂ. ಡಿ. ಲಕ್ಷ್ಮೀನಾರಾಯಣ್ ಮತ್ತು ಮುಖಂಡರಾದ ಜಿ. ಮರಿಸ್ವಾಮಿ ಅವರು ಉಪಸ್ಥಿತರಿದ್ದರು.
ಹಳ್ಳಿ ಹಳ್ಳಿಗಳಲ್ಲೂ ಸಂಭ್ರಮ: ವಿಜಯೋತ್ಸವ
ಇನ್ನು ಶೃಂಗೇರಿ ಕ್ಷೇತ್ರದ ಕೊಪ್ಪ, ಶೃಂಗೇರಿ, ನರಸಿಂಹ ರಾಜಪುರ ಸೇರಿ ಹಳ್ಳಿ ಹಳ್ಳಿಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ಪಕ್ಷದ ಅಧ್ಯಕ್ಷರ ಸಮ್ಮುಖದಲ್ಲಿ ವಿಜಯೋತ್ಸವ ನಡೆದಿದೆ. ಕೊಪ್ಪದಲ್ಲಿ ಹೊಸೂರು ದಿನೇಶ್, ಪುಣ್ಯಪಾಲ್ ನೇತೃತ್ವದಲ್ಲಿ, ಹರಿಹರಪುರದಲ್ಲಿ ರಾಮಸ್ವಾಮಿ, ನರಸಿಂಹರಾಜಪುರದಲ್ಲಿ ನಿಲೇಶ್ ನೇತೃತ್ವದಲ್ಲಿ, ಶೃಂಗೇರಿಯಲ್ಲಿ ಕೂಡ ಅಧ್ಯಕ್ಷರ ನೇತೃತ್ವದಲ್ಲಿ ವಿಜಯೋತ್ಸವ ನಡೆಯಿತು. ಚಿಕ್ಕಮಗಳೂರಲ್ಲಿ ಕೂಡ ಸಂಭ್ರಮಾಚರಣೆ ನಡೆಯಿತು.
3 ವರ್ಷ ಅನ್ಯಾಯ ಆಗಿತ್ತು… ಯಡಿಯೂರಪ್ಪ
ಜೀವರಾಜ್ ಓರ್ವ ಜನ ಸೇವಕ. ಅವರಿಗೆ 3 ವರ್ಷ ಅನ್ಯಾಯ ಆಗಿತ್ತು.
ಇದೀಗ ನ್ಯಾಯ ಸಿಕ್ಕಿದೆ. ಅವರಿಗೆ ಒಳ್ಳೆಯದಾಗಲಿ.
– ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
“ನ್ಯಾಯ ವಿಳಂಬವಾಗಬಹುದು, ಆದರೆ ಸೋಲಲು ಸಾಧ್ಯವಿಲ್ಲ.”
ಆದಿಗುರು ಶಂಕರಾಚಾರ್ಯರ ಪವಿತ್ರ ಭೂಮಿಯಾದ ಶೃಂಗೇರಿಯಲ್ಲಿ ಸತ್ಯ ಗೆದ್ದಿದೆ. ಮೂರು ವರ್ಷಗಳ ನಂತರ, ನ್ಯಾಯಾಲಯದ ಆದೇಶದಂತೆ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಡಿ.ಎನ್. ಜೀವರಾಜ್ ಅವರು ವಿಜಯಶಾಲಿಯಾಗಿದ್ದಾರೆ. ಸಂವಿಧಾನಾತ್ಮಕ ಹೋರಾಟಕ್ಕೆ ಇಂದು ನ್ಯಾಯ ಸಿಕ್ಕಿದೆ. ಪ್ರಜಾಪ್ರಭುತ್ವ ಗೆದ್ದಿದೆ.
– ಸಿ.ಟಿ.ರವಿ








