ಜೀವರಾಜ್ ಈಗ ಶೃಂಗೇರಿ ಶಾಸಕರು!
– 4ನೇ ಬಾರಿಗೆ ಶಾಸಕರಾಗಿ ಅಧಿಕಾರ ಸ್ವೀಕಾರ
– ಜನ ನಾಯಕನಿಗೆ ಸಿಕ್ಕ ಶಾಸಕ ಸ್ಥಾನ
8 ವರ್ಷಗಳ ರಾಜಕೀಯ ವಿರಾಮದ ಬಳಿಕ ಮತ್ತೆ ಜೀವರಾಜ್ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಅಂಚೆ ಮತ ಎಣಿಕೆಯಲ್ಲಿ ಗೆದ್ದ ಜೀವರಾಜ್ ವಿಧಾನ ಸೌಧದಲ್ಲಿ ಬುಧವಾರ ಸಂಜೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ವೇಳೆ ಪಕ್ಷದ ನಾಯಕರಾದ ಆರ್.ಅಶೋಕ್ ಸೇರಿ ಶೃಂಗೇರಿ ಕ್ಷೇತ್ರದ ಹಲವರು ನಾಯಕರು, ಕಾರ್ಯಕರ್ತರು ಇದ್ದರು.
ವಿಧಾನ ಸೌಧ ಪ್ರವೇಶ ವೇಳೆ ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿ ಜೀವರಾಜ್ ಕೊಠಡಿಗೆ ತೆರಳಿದರು. ಇಡೀ ಶೃಂಗೇರಿ ಕ್ಷೇತ್ರದಲ್ಲಿ ಸಂತಸ ಕಂಡು ಬರುತ್ತಿದೆ.
ನೂತನ ಶಾಸಕರಿಗೆ ಶುಭಾಶಯಗಳು








