ಅಕ್ರಮ ಮರಳು ಕ್ವಾರಿಯಲ್ಲೇ ಸೀಸ್ ಮಾಡಿದ ಶಾಸಕರು!
– ದಬ್ಬಣಗದ್ದೆ ಕ್ವಾರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರಗ
– ಗಣಿ ಇಲಾಖೆ, ತಾಲೂಕು ಆಡಳಿತದಿಂದ ತಂಡ ರಚನೆ
– ದಬ್ಬಣಗದ್ದೆ, ಹುಣಸವಳ್ಳಿ ಸೇರಿ ನೂರಾರು ಕಡೆ ಕಳ್ಳ ಮರಳು!
– ರಾಜಕಾರಣಿಗಳು, ಪ್ರಭಾವಿಗಳೇ ಇಲ್ಲಿ ಬ್ರೋಕರ್ಸ್!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತುಂಗಾ, ಮಾಲತಿ, ಕುಶಾವತಿ ಸೇರಿ ತಾಲೂಕಿನ ಹಳ್ಳ,. ಕೊಳ್ಳಗಳಲ್ಲೂ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಇದೀಗ ಅಕ್ರಮದ ವಿರುದ್ಧ ತಾಲೂಕು ಆಡಳಿತ ಮತ್ತು ಶಾಸಕರು ಸಮರ ಸಾರಿದ್ದಾರೆ. ತೀರ್ಥಹಳ್ಳಿ ತಾಲೂಕಿನ ದಬ್ಬಣಗದ್ದೆಯಲ್ಲಿ ಸಾವಿರಾರು ಲೋಡ್ ಮರಳು ಅಕ್ರಮವಾಗಿ ಹೊಡೆಯಲಾಗಿದೆ. ಗಣಿ ಮತ್ತು ಇತರೆ ಇಲಾಖೆ ಅಧಿಕಾರಿಗಳು ನೇರವಾಗಿ ಶಾಮೀಲು ಆಗಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದ್ದು, ಸ್ಥಳದಲ್ಲೇ ಜೇಸಿಬಿ, ಲಾರಿಗಳನ್ನು ಹಿಡಿಯಲಾಗಿದೆ. ಸರ್ಕಾರಕ್ಕೆ ಯಾವುದೇ ಟ್ಯಾಕ್ಸ್ ಅಥವಾ ರಾಯಲ್ಟಿ ಕಟ್ಟದೆ ಇಲ್ಲಿ ಅಕ್ರಮ ಮರಳು ದಂಧೆ ನಡೆಸಲಾಗುತ್ತಿದೆ.
ಶಿವಮೊಗ್ಗ ಭಾಗಕ್ಕೆ ನೂರಾರು ಲಾರಿಗಳು ಹೋಗುತ್ತಿದ್ದು, ಸ್ಥಳೀಯರಿಗೂ ಮರಳು ಸಿಗುತ್ತಿಲ್ಲ. ಪರ್ಮಿಟ್ ಇಲ್ಲದೆ ನೂರಾರು ಲೋಡ್ ಮರಳು ಹೇಗೆ ಸಾಗಣೆ ಆಗುತ್ತಿದೆ ಎಂದು ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದ್ದಾರೆ. ಇನ್ನು ಬಹುತೇಕ ಕ್ವಾರೆಗಳಲ್ಲಿ ಯಾವುದೇ ಲೈಸೆನ್ಸ್ ಇಲ್ಲದೆ ಮರಳು ಸಾಗಣೆ ಮಾಡಲಾಗುತ್ತಿದೆ. ಇನ್ನು ಸರ್ಕಾರಿ ಕೆಲಸದ ಹೆಸರಲ್ಲೂ ಅನೇಕ ಕಡೆ ಮರಳು ಕಳ್ಳ ಸಾಗಣೆ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.








