ತೀರ್ಥಹಳ್ಳಿಯಲ್ಲಿ ಕಾಳಿಂಗ ಸರ್ಪಗಳ ವಿಡಿಯೋ ಪ್ರದರ್ಶನ
– ಮೇ 19ರ ಸಂಜೆ 6ಕ್ಕೆ ಮಲ್ನಾಡ್ ಕ್ಲಬ್ ಸಭಾಂಗಣದಲ್ಲಿ ಆಯೋಜನೆ
– ಮಾಹಿತಿ ಕಾರ್ಯಗಾರ, ಸಂವಾದ ಕಾರ್ಯಕ್ರಮ.!
– ಪ್ರಖ್ಯಾತ ಉರಗ ತಜ್ಞರಾದ ಡಾ. ಪಿ ಗೌರಿಶಂಕರ್ ನೇತೃತ್ವ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ ರಜತ ಸಭಾಂಗಣದಲ್ಲಿ ಭಾನುವಾರ ಸಂಜೆ 6ಕ್ಕೆ ಕಾಳಿಂಗ ಸರ್ಪಗಳ ಕುರಿತು ಡಾಕ್ಯುಮೆಂಟರಿ ವಿಡಿಯೋ ಪ್ರದರ್ಶನ ಹಾಗೂ ಕಾಳಿಂಗ ಸರ್ಪದ ಕುರಿತಾದ ಅಚ್ಚರಿಯ ಮತ್ತು ರೋಮಾಂಚಕ ವಿಷಯಗಳ ಕುರಿತು ಮಾಹಿತಿ ಕಾರ್ಯಗಾರ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಪ್ರಖ್ಯಾತ ಉರಗ ತಜ್ಞರಾದ ಡಾ. ಪಿ ಗೌರಿಶಂಕರ್ ನಡೆಸಿಕೊಡಲಿದ್ದಾರೆ. ಇವರು ಪಶ್ಚಿಮಘಟ್ಟದ ಸುತ್ತಮುತ್ತಲಿನಲ್ಲಿ 350ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನ ಸಂರಕ್ಷಿಸಿರುತ್ತಾರೆ. ಒರಿಸ್ಸಾ ಹಾಗೂ ಸ್ವೀಡನ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ ಪಡೆದ ಇವರು, ಕಾಳಿಂಗ ಸರ್ಪದ ಪ್ರಭೇದ ಒಂದಲ್ಲ ಆದು ನಾಲ್ಕು ಎಂದು ನಿರೂಪಿಸುತ್ತಾರೆ.
ಇವರ ಹಲವಾರು ಡಾಕ್ಯುಮೆಂಟರಿಗಳು ಹಾಗೂ ಅಧ್ಯಯನ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಟಿವಿ ಚಾನೆಲ್ ಗಳಲ್ಲಿ ಪ್ರಸಾರ ಗೊಂಡಿರುತ್ತದೆ. ಪಶ್ಚಿಮ ಘಟ್ಟದ ಕುರಿತಾದ ಅಧ್ಯಯನಕ್ಕೆಂದೆ ಆಗುಂಬೆ ಹಾಗೂ ಹಸಿರು ಮನೆ ಹತ್ತಿರ ಎರಡು ಪ್ರತ್ಯೇಕ ಪರಿಸರ ಅಧ್ಯಯನ ಕೇಂದ್ರವನ್ನ ತೆರದಿರುತ್ತಾರೆ. ಕಾಳಿಂಗ ಸರ್ಪಗಳ ಹಾಗೂ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಕುರಿತಾದ ಅತ್ಯುತ್ತಮ ಕಾರ್ಯಕ್ರಮಕ್ಕೆ ಮಾನ್ಯ ಸದಸ್ಯರು ಹಾಗೂ ಕುಟುಂಬದವರು ಮತ್ತು ಆಸಕ್ತರು ( ವಿಶೇಷವಾಗಿ ಮಕ್ಕಳು )ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಈ ಮೂಲಕ ಕೋರಿದೆ.








