ರಾಜೇಗೌಡರೋ…? ಜೀವರಾಜ್ ಅವರೋ..?!
– ಶೃಂಗೇರಿ ಕ್ಷೇತ್ರದ ಮರು ಎಣಿಕೆಗೆ ಕ್ಷಣಗಣನೆ: ಮೇ 2ಕ್ಕೆ ಮತ ಎಣಿಕೆ:
– ಸುಧಾಕರ್ ಶೆಟ್ಟಿ ಅವರ ಮತ ಕೂಡ ಇದೆ…!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶೃಂಗೇರಿ: ಶೃಂಗೇರಿ ಕ್ಷೇತ್ರದ ಹಾಲಿ ಶಾಸಕ ರಾಜೇಗೌಡ ಹಾಗೂ ಮಾಜಿ ಶಾಸಕ ಜೀವರಾಜ್ ಅವರ ರಾಜಕೀಯ ಭವಿಷ್ಯಕ್ಕೆ ಮಹತ್ವದ ತಿರುವು ಸಿಗಲಿದೆಯಾ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ. ಎರಡು ಪಕ್ಷದ ಕಾರ್ಯಕರ್ತರು, ರಾಜೇಗೌಡ ಅಭಿಮಾನಿಗಳಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದ್ದರೆ, ಜೀವರಾಜ್ ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಮರು ಎಣಿಕೆ ಕಾರಣ ಎಲ್ಲರ ಚಿತ್ತ ಶ್ರಿಂಗೇರಿ ವಿಧಾನ ಸಭಾ ಕ್ಷೇತ್ರದ ಕಡೆ ನೆಟ್ಟಿದೆ. ಮೇ 2ಕ್ಕೆ ಚಿಕ್ಕಮಗಳೂರಿನಲ್ಲಿ ಅಂಚೆ ಮತ ಮರು ಎಣಿಕೆ ನಡೆಯಲಿದೆ. ಅದೃಷ್ಟ ಯಾರ ಕಡೆ ಒಲಿಯಲಿದೆ ಎಂಬ ಚರ್ಚೆ ಜೋರಾಗಿದೆ.
ಇಬ್ಬರದು ಮಾತ್ರ ಅಲ್ಲ: ತಿರಸ್ಕೃತ ಅಂಚೆ ಮತ 279 ಮೂರು ಪಕ್ಷಗಳ ಅಭ್ಯರ್ಥಿಗಳ ಮತ ಇರುವುದರಿಂದ ಒಂದೆರಡು ಮತಗಳಷ್ಟೆ ಏನಾದರು ವ್ಯತ್ಯಾಸಗಳಾಗಬಹುದು ಎಂಬ ರಾಜಕೀಯ ಚರ್ಚೆ ಜೋರಾಗಿದೆ.
ರಾಜೇಗೌಡ ಅವರಿಗೆ ಸೋಲು ಆಗುತ್ತಾ..?
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ವಿಧಾನ ಸಭೆ ಚುನಾವಣೆ ನಡೆದು 3 ವರ್ಷಗಳೇ ಸಂದಿವೆ. ಎರಡನೇ ಭಾರಿ ಈ ಕ್ಷೇತ್ರದ ಶಾಸಕರಾಗಿ ಟಿ . ಡಿ. ರಾಜೇಗೌಡರು ಆಯ್ಕೆಯಾಗಿದ್ದು, ಅಧಿಕಾರವನ್ನು ನಡೆಸುತ್ತಿದ್ದಾರೆ. ರಾಜೇಗೌಡರ ಹಿಂದಿನ ಮೂರು ಅವಧಿಯಲ್ಲಿ ಡಿ ಎನ್ ಜೀವರಾಜ್ ಬಿಜೆಪಿ ಪಕ್ಷದಿಂದ ಸ್ವರ್ದಿಸಿ ಗೆದ್ದು 3 ಭಾರಿ ಶೃಂಗೇರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಅಪಾರ ಜನಮನ್ನಣೆ ಗಳಿಸಿದ್ದರು.
201 ಮತಗಳಿಂದ ಸೋತಿದ್ದರು!
2023ರ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ರಾಜೇ ಗೌಡರು ಕೇವಲ 201 ಮತಗಳ ಅಂತರದಿಂದ ಜಯಗಳಿಸಿದ್ದರು. ಅಂದು 1811 ಅಂಚೆ ಮತಗಳಲ್ಲಿ 279 ಮತಗಳನ್ನು ತಿರಸ್ಕೃತವೆಂದು ಚುನಾವಣಾಧಿಕಾರಿ ಪರಿಗಣಿಸಿದ್ದರು. ಈ ವಿಚಾರವಾಗಿ ಮತಗಳ ಮರುಎಣಿಕೆಗಾಗಿ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆಗಳು ನಡೆದು ಪುನಃ ಅಂಚೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ಆದೇಶ ನೀಡಿದೆ.
ಏನಿದು ಕೋರ್ಟ್ ಆದೇಶ?
ಕರ್ನಾಟಕ ಹೈಕೋರ್ಟ್ 279 ಅಂಚೆ ಮತಗಳನ್ನು ಮರುಪರಿಶೀಲನೆಗೆ ಆದೇಶ ಮಾಡಿದೆ. ಒಟ್ಟು 1,811 ಅಂಚೆ ಮತ. ಇತ್ತು. ಇದೀಗ 279 ಮತ ಮರು ಪರಿಶೀಲಿಸಲು ಕೋರ್ಟ್ ಆದೇಶ ನೀಡಿದೆ. ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿ.ಡಿ. ರಾಜೇಗೌಡ ಕೇವಲ 201 ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಬಿಜೆಪಿಯ ಡಿ.ಎನ್. ಜೀವರಾಜ್ ತದ ನಂತರದ ಅಂಚೆ ಮತ ಎಣಿಕೆಯಲ್ಲಿ ಲೋಪ ಆಗಿದೆ ಎಂದು ಕೋರ್ಟ್ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಆದೇಶದಂತೆ 279 ತಿರಸ್ಕೃತ ಅಂಚೆ ಮತಗಳನ್ನು 2 ವಾರದಲ್ಲಿ ಮರು ಪರಿಶೀಲಿಸಿ ಪರಿಶೀಲನೆಯಲ್ಲಿ ಹೆಚ್ಚಿನ ಲೋಪ ಕಂಡುಬಂದಲ್ಲಿ ಎಲ್ಲಾ 1,811 ಅಂಚೆ ಮತಗಳನ್ನೂ ಮರು ಎಣಿಕೆ ಮಾಡಿ ಹೊಸ ಫಲಿತಾಂಶ ಪ್ರಕಟಿಸಿ ಎಂದು ಚುನಾವಣಾ ಅಧಿಕಾರಿಗಳಿಗೆ ಕೋರ್ಟ್ ತಿಳಿಸಿದೆ.
ಚಿಕ್ಕಮಗಳೂರಲ್ಲಿ ಭಾರೀ ಜನ ಸಾಧ್ಯತೆ!
ಮೇ 2, 2026 ಬೆಳಿಗ್ಗೆ 9 ಗಂಟೆಯಿಂದ IDSGಕಾಲೇಜು ಚಿಕ್ಕಮಗಳೂರಿನಲ್ಲಿ ಅಂಚೆಮತದ ಮರುಎಣಿಕೆಗೆ ವೇದಿಕೆ ಸಿದ್ದವಾಗಿದೆ. ಮೇ ಎರಡರವರೆಗೆ ಸಮಯವಿರುವುದರಿಂದ ಸುಪ್ರೀಂಕೋರ್ಟ್ನಲ್ಲಿ ಅಂಚೆ ಮತದ ಮರುಎಣಿಕೆ ಆಗದಂತೆ ಮೇಲ್ಮನವಿಗೆ ಅವಕಾಶ ರಾಜೇಗೌಡರಿಗೆ ಇದ್ದು, ಅವರು ಮೇಲ್ಮನವಿಗೆ ಹೋಗುತ್ತಾರಾ ಎಂಬ ಕುತೂಹಲ ಇದೆ.








